Site icon Vistara News

Soundarya Rajinikanth | ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿಗೆ ಗಂಡು ಮಗು ಜನನ

Soundarya Rajinikanth

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ ಎರಡನೇ ಮಗಳು ಸೌಂದರ್ಯ ರಜನಿಕಾಂತ್‌ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಸೌಂದರ್ಯರಿಗೆ ಇದು ೨ನೇ ಮಗುವಾಗಿದ್ದು, ವೀರ್‌ ರಜನಿಕಾಂತ್‌ ವನಂಗಮುಡಿ ಎಂದು ನಾಮಕರಣ ಮಾಡುವುದಾಗಿ ಘೋಷಿಸಲಾಗಿದೆ. ಮೊದಲ ಮಗನಿಗೆ ವೇದ್‌ ಎಂದು ಹೆಸರಿಡಲಾಗಿದೆ.

ʻದೇವರ ಅನುಗ್ರಹ ಹಾಗೂ ತಂದೆ ತಾಯಿಯ ಆಶೀರ್ವಾದದಿಂದ ಸೆ.11ರಂದು ವೀರ್‌ ರಜನಿಕಾಂತ್‌ ವನಂಗಮುಡಿಗೆ ನಾನು, ವಿಶಾಗನ್​ ಮತ್ತು ವೇದ್​ ಸ್ವಾಗತ ಕೋರಿದ್ದೇವೆ’ ಎಂದು ಸೌಂದರ್ಯಾ ರಜನಿಕಾಂತ್‌​ ಟ್ವೀಟ್‌​ ಮಾಡಿದ್ದಾರೆ. ಜತೆಗೆ ವೈದ್ಯರಿಗೂ ಧನ್ಯವಾದ ತಿಳಿಸಿದ್ದಾರೆ.

ಅಶ್ವಿನ್‌ ರಾಮ್‌ಕುಮಾರ್‌ ಜತೆ ಸೌಂದರ್ಯ 2010ರಲ್ಲಿ ಸಪ್ತಪದಿ ತುಳಿದಿದ್ದರು. ಈ ಜೋಡಿಗೆ 2015ರಲ್ಲಿ ಮೊದಲ ಮಗು ಜನಿಸಿತ್ತು. 2017ರಲ್ಲಿ ಸೌಂದರ್ಯ ಮತ್ತು ಅಶ್ವಿನ್‌ ವಿಚ್ಛೇದನ ಪಡೆದುಕೊಂಡರು. 2019ರಲ್ಲಿ ವಿಶಾಗನ್‌​ ವನಂಗಮುಡಿ ಜತೆ ಸೌಂದರ್ಯ ಎರಡನೇ ಮದುವೆ ಮಾಡಿಕೊಂಡರು.

ಇದನ್ನೂ ಓದಿ | ಪ್ರೇರಣಾ ಮತ್ತು ಧ್ರುವ ಸರ್ಜಾ ಬೇಬಿ ಬಂಪ್‌ ಫೋಟೊಗಳು

Exit mobile version