ಬೆಂಗಳೂರು: ರಾಜಧಾನಿ ನಗರಕ್ಕೆ ಹೊಸದಾಗಿ ಸ್ಪೆಷಲ್ ಟ್ರಾಫಿಕ್ ಕಮಿಷನರ್ ನೇಮಕ ಮಾಡಲಾಗಿದೆ. ಅಬ್ದುಲ್ ಸಲೀಂ ಅವರನ್ನು ಸರ್ಕಾರ ನೇಮಕ ಮಾಡಿದೆ.
ನೇಮಕವಾದ ಆರಂಭದಲ್ಲೇ ರಸ್ತೆಗಿಳಿದಿರುವ ಸ್ಪೆಷಲ್ ಟ್ರಾಫಿಕ್ ಕಮಿಷನರ್, ಹೆಬ್ಬಾಳ ಫ್ಲೈ ಓವರ್ ಹಾಗು ಕೆಂಪಾಪುರ ಜಂಕ್ಷನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಹನ ದಟ್ಟಣೆ ನಿಯಂತ್ರಣಕ್ಕೆ ಸಾರ್ವಜನಿಕರು ಮಾಹಿತಿ ನೀಡಲು ಮುಕ್ತವಾದ ಅವಕಾಶವಿದೆ. ಎಲ್ಲೆಲ್ಲಿ ಸಂಚಾರ ದಟ್ಟಣೆಯಾಗುತ್ತಿದೆಯೋ ಅಲ್ಲಿ ಪರಿಹಾರ ಕ್ರಮಗಳಿದ್ದರೆ ಸೂಚಿಸುವಂತೆ ಅವರು ಮನವಿ ಮಾಡಿದ್ದು, ಅವುಗಳನ್ನು ಟ್ರಾಫಿಕ್ ಮೇಲ್ ಐಡಿಗೆ ಕಳುಹಿಸುವಂತೆ ತಿಳಿಸಿದ್ದಾರೆ. ಅವರ ಮನವಿಗೆ ಸ್ಪಂದಿಸಿರುವ 100ಕ್ಕೂ ಹೆಚ್ಚು ಜನ, ವಾಹನ ಸಂಚಾರ ದಟ್ಟಣೆ ಸ್ಥಳಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | IPS Transfer | 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಮೊದಲ ಬಾರಿ ಬೆಂಗಳೂರಿಗೆ ಸ್ಪೆಷಲ್ ಟ್ರಾಫಿಕ್ ಕಮಿಷನರ್ ನೇಮಕ