ಬೆಂಗಳೂರು: ಗೆಳೆಯರ ಬಳಗದ ಯಕ್ಷಪ್ರೇಮಿ ಜಯರಾಮ ಶೆಟ್ಟಿ ಅವರ ಸಂಯೋಜನೆಯಲ್ಲಿ ಶ್ರೀ ಮಂದಾರ್ತಿ ಐದು ಮೇಳಗಳ ಆಯ್ದ ಕಲಾವಿದರ ಸಮಾಗಮದಲ್ಲಿ ಶನಿವಾರ ರಾತ್ರಿ, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ʼಶ್ರೀ ಮಂದಾರ್ತಿ ಕ್ಷೇತ್ರ ಮಹಾತ್ಮೆʼ ಯಕ್ಷಗಾನ ಪ್ರದರ್ಶನ ಸಂಪನ್ನಗೊಂಡಿತು. ಯಕ್ಷಗಾನ ವೀಕ್ಷಿಸಲು ವಿವಿಧೆಡೆಯಿಂದ ನೂರಾರು ಯಕ್ಷಪ್ರೇಮಿಗಳು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಕಲಾ ಸಾರ್ವಭೌಮರಾದ ಶಿಕ್ಷಣ ಕ್ಷೇತ್ರದ ಸಾಧಕ ನೀಡೂಟಿ ರಾಜೀವ ಶೆಟ್ಟಿ, ಯಕ್ಷರಂಗದ ಸರ್ವಾಂಗೀಣ ಕಲಾವಿದ ವಂಡಾರು ರಮೇಶ ಮಡಿವಾಳ, ಬಯಲಾಟದ ದೊರೆ, ಸಾಂಪ್ರದಾಯಿಕ ಮಟ್ಟಿನ ಶ್ರೇಷ್ಠ ಕಲಾವಿದ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನರಾಡಿ ಬೋಜರಾಜ ಶೆಟ್ಟಿ, ಯಕ್ಷರಂಗದ ಸಂಪ್ರದಾಯಬದ್ಧ ರಾಜ ಹಾಸ್ಯಗಾರ, ಹಾಸ್ಯದರಸು ಮಹಾಬಲ ದೇವಾಡಿಗ ಕಮಲಶಿಲೆ, ಯುವ ಭಾಗವತ ಮುದ್ದುಮನೆ ರಾಘವೇಂದ್ರ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗ ನೀಡಿತ್ತು.
ಇದನ್ನೂ ಓದಿ | ನ.19 ರಂದು ಮೇಧಾನಮನಮ್-ಸಂಸ್ಕೃತೋತ್ಸವ, ಮೈತ್ರೀ ಪುರಸ್ಕಾರ ಪ್ರದಾನ