Site icon Vistara News

Shiva Darshana Book: ʼಶಿವದರ್ಶನʼ ಗ್ರಂಥ ಲೋಕಾರ್ಪಣೆ ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

'Shivadarshana'book

ಬೆಂಗಳೂರು: ಭಾರತೀಯರಾದ ನಮಗೆ ಧರ್ಮವೇ ಜೀವನ. ಜೀವನವೇ ಧರ್ಮವಾಗಿದೆ. ಧರ್ಮದ ಅನುಸಂಧಾನ ಮತ್ತು ಅನುಷ್ಠಾನದ ಮೂಲಕ ಬದುಕಿನ ಸರ್ವೋಚ್ಚ ಧ್ಯೇಯವಾದ ದೈವೀಕಾರುಣ್ಯದ ಪ್ರಾಪ್ತಿಯಾಗುತ್ತದೆ. ಇದಕ್ಕಾಗಿ ವ್ಯಕ್ತಿಯಲ್ಲಿ ಸುಪ್ತವಾಗಿ ಹುದುಗಿರುವ ಧಾರ್ಮಿಕಪ್ರಜ್ಞೆಯನ್ನು ಮತ್ತು ಅಂತಸ್ಥವಾದ ದೈವಿಕತೆಯನ್ನು ಜಾಗ್ರತೆಗೊಳಿಸಲು ಧಾರ್ಮಿಕ ಗ್ರಂಥಗಳ ಅವಲಂಬನೆ ಅವಶ್ಯ. ಆ ಸಾಲಿಗೆ ಸೇರುವ ʼಶಿವದರ್ಶನʼ ಗ್ರಂಥವನ್ನು (Shiva darshana Book) ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ನಗರದ ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು.

ಪರಶಿವನ ಪಾರಮ್ಯವನ್ನು ಅರಿತ ನಮ್ಮ ಪರಮರ್ಷಿಗಳು ಅದನ್ನು ಗ್ರಂಥವಾಗಿಸಿ ಅನುಗ್ರಹಿಸಿದರು. ರುದ್ರಯಾಮಲ ಮೊದಲಾದ ಕೃತಿಗಳು ಅಂಥವು. ಇದೀಗ ಅಂತಹ ಕೃತಿಗಳನ್ನು ಅರಿಯಲು ಮತ್ತು ಅದರ ಮೂಲಕ ಶಿವನನ್ನು ಅರಿಯಲು ವಿರಚಿತವಾದ ಕೃತಿಯೇ ಶಿವದರ್ಶನ. ಪುರಾಣೇತಿಹಾಸ, ವೇದಶಾಸ್ತ್ರಗಳಲ್ಲಿ ಗತಿಶೀಲರು ಹಾಗೂ ಅವುಗಳ ಮರ್ಮವನ್ನು ಎಳೆಎಳೆಯಾಗಿ ಬಿಡಿಸಿ, ನವನವೀನ ಹೊಳಹುಗಳೊಂದಿಗೆ ವಿವರಿಸಬಲ್ಲ ಸಂಶೋಧಕರು, ಬಹುಶ್ರುತ ವಿದ್ವಾಂಸರಾದ ವಿಷ್ಣು ಭಟ್ ಡೋಂಗ್ರೆಯವರ ವಿಶೇಷ ತಪಸ್ಸಿನಿಂದ ಮೂಡಿ ಬಂದ ಕೃತಿ
ಇದಾಗಿದೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ವಾರಾಣಸಿಯ ನಂದಿ ಮುಖ ಮಾಡಿದ ಕಡೆಗೆ ಶಿವ ಬರಲು ಇನ್ನೆಷ್ಟು ಕಾಯಬೇಕು?

ಕೃತಿಕಾರರಾದ ವಿಷ್ಣು ಭಟ್ ಡೋಂಗ್ರೆ ಶಿವದರ್ಶನ ಪುಸ್ತಕದಲ್ಲಿರುವ ಹಲವಾರು ವಿಷಯಗಳ ಕುರಿತಾಗಿ ಸವಿವರವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ ಅವರು ಕೃತಿಯ ಸoಕ್ಷಿಪ್ತ ಪರಿಚಯ ಮಾಡಿ ಲೇಖಕ ವಿಷ್ಣು ಭಟ್ ಡೋಂಗ್ರೆ ಅವರ ವಿಷ್ಣುವ್ಯಾಖ್ಯಾ ಪುಸ್ತಕವನ್ನು ಪರಮಪೂಜ್ಯ ಶ್ರೀಸಂಸ್ಥಾನದವರು ಕೆಲಕಾಲದ ಹಿoದೆ ಲೋಕಾರ್ಪಣೆಗೊಳಿಸಿದ್ದರು. ಈಗ ಶಿವದರ್ಶನ ಪುಸ್ತಕ ಲೋಕಾರ್ಪಣೆ. ಹರಿಹರರ ಕುರಿತಾದ ಎರಡು ಮೇರುಕೃತಿಗಳನ್ನೂ ಶ್ರೀಸoಸ್ಥಾನದವರು ಲೋಕಾರ್ಪಣೆ ಮಾಡಿರುವುದನ್ನು ಉಲ್ಲೇಖಿಸಿದರು.

ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ, ಕೃತಿಕಾರರಾದ ವಿಷ್ಣು ಭಟ್ ಡೋಂಗ್ರೆ, ಶ್ರೀರಾಮಚoದ್ರಾಪುರಮಠದ ಪ್ರಶಾಸನಾಧಿಕಾರಿಗಳಾದ ಸಂತೋಷ ಹೆಗಡೆ, ಡಾಲ್ಫಿನ್ ಇರಿಗೇಶನ್ ಸಂಸ್ಥೆಯ ಶ್ರೀ ಗಜಾನನ ಹೆಗಡೆ ವೇದಿಕೆಯಲ್ಲಿದ್ದರು.

ಮನ ಮನದ ಮನೆ ಮನೆಯ ಭಾವಶುದ್ಧತೆಗೆ ಅತ್ಯಗತ್ಯವೂ ಪರಮಮಂಗಲಕರವೂ, ಶುಭಂಕರವೂ, ನಿತ್ಯವ್ಯಾಸಂಗದ ಅಮೂಲ್ಯವಾದ ಸಂಗ್ರಹಯೋಗ್ಯವಾದ ಗ್ರoಥವನ್ನು ಪಡೆಯಲು ಶ್ರೀಭಾರತೀ ಪ್ರಕಾಶನವನ್ನು 9449595254 ಸoಪರ್ಕಿಸಬಹುದಾಗಿದೆ.

ಇದನ್ನೂ ಓದಿ | ತಾತಯ್ಯ ತತ್ವಾಮೃತಂ: ಯಮನಿಗೆ ಅಂಜದ ಸತ್ಯವ್ರತಿಗಳು

ಇದು ವಿಷ್ಣು ಕಂಡ ಶಿವ. ವಿಷ್ಣುಭಟ್ಟರು ಕಂಡ ಶಿವ. ಎಂಬತೈದರ ಇಳಿವಯಸ್ಸಿನಲ್ಲೂ ಅವರು ಅಕ್ಷರ ಕೃಷಿ ನಡೆಸುತ್ತಾ ಇದ್ದಾರೆ, ಅದು ನಿಮಗೆಲ್ಲ ಸ್ಫೂರ್ತಿ ಆಗಲಿ. ಸಹಸ್ರನಾಮಗಳು ಏಕೆ, ಒಂದೆ ನಾಮ‌ ಸಾಲದೆ ಎಂದರೆ ಮನುಷ್ಯನ ಮನಸ್ಸು ಒಂದೆಡೆ ನಿಲ್ಲದು, ಬದಲಾವಣೆ ಬಯಸುತ್ತದೆ. ಹಾಗಾಗಿ ಋಷಿಮುನಿಗಳು ಸಹಸ್ರನಾಮವನ್ನು ತಂದರು. ಸಹಸ್ರನಾಮದ ಮೂಲಕ ಒಂದೆಡೆ ಮನಸ್ಸನ್ನು ನಿಲ್ಲುವತೆ ಮಾಡುವ ಸಾಧನ ಈ ಸಹಸ್ರನಾಮ. ಎಲ್ಲರಿಗೂ ಶಿವದರ್ಶನವಾಗಲಿ ಎಂದು ಶ್ರೀಸಂಸ್ಥಾನ ತಿಳಿಸಿದೆ.

Exit mobile version