Site icon Vistara News

ಚಾಮರಾಜಪೇಟೆಯಲ್ಲಿ ಜ. 24ರಿಂದ 30ರವರೆಗೆ ಶ್ರೀ ತ್ಯಾಗರಾಜ ಆರಾಧನೆ–ಸಂಗೀತೋತ್ಸವ

thyagaraja aradhana

ಬೆಂಗಳೂರು: ಸದ್ಗುರು ಶ್ರೀ ತ್ಯಾಗ ಬ್ರಹ್ಮ ಕೈಂಕರ್ಯ ಟ್ರಸ್ಟ್ ವತಿಯಿಂದ ಜನವರಿ 24 ರಿಂದ 30 ರವರೆಗೆ ನಗರದ ಚಾಮರಾಜಪೇಟೆಯ ಶೃಂಗೇರಿ ಶಂಕರ ಮಠದ ಆವರಣದಲ್ಲಿ ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನೆ – ರಾಷ್ಟ್ರೀಯ ಸಂಗೀತೋತ್ಸವವನ್ನು ಏರ್ಪಡಿಸಲಾಗಿದೆ.

ಈ ಶಾಸ್ತ್ರೀಯ ಸಂಗೀತ ಸಂಭ್ರಮದಲ್ಲಿ ಕರ್ನಾಟಕ ಮತ್ತು ಇತರೆ ರಾಜ್ಯಗಳಿಂದ ಸುಮಾರು 300ಕ್ಕೂ ಹೆಚ್ಚು ಶಾಸ್ತ್ರೀಯ ಸಂಗೀತಗಾರರು ಪಾಲ್ಗೊಂಡು ತಮ್ಮ ಭಾವ ಪೂರ್ಣ ಹಾಡುಗಾರಿಕೆಯ ಮೂಲಕ ಸಂತ ತ್ಯಾಗರಾಜಸ್ವಾಮಿಗಳಿಗೆ ಗೌರವಪೂರ್ವಕ ನಮನ ಸಲ್ಲಿಸಲಿದ್ದಾರೆ.

ಜ. 24ರಂದು ಸಂಜೆ 5 ಗಂಟೆಗೆ ಮಂಗಳ ವಾದ್ಯದೊಂದಿಗೆ ಸಂಗೀತೋತ್ಸವವು ಆರಂಭವಾಗುತ್ತದೆ. ನಂತರ 6 ಗಂಟೆಗೆ ಮುಖ್ಯ ಅತಿಥಿಗಳಾದ ಪದ್ಮಶ್ರೀ ಪುರುಸ್ಕೃತ ಡಾ. ವಿ.ಆರ್. ಗೌರಿಶಂಕರ್, ಸಿಇಒ ಮತ್ತು ಆಡಳಿತಾಧಿಕಾರಿ – ದಕ್ಷಿಣಾಮ್ನಾಯ, ಶೃಂಗೇರಿ ಶಾರದ ಪೀಠ ಮತ್ತು ಕರ್ನಾಟಕ ಸಂಗೀತಗಾರ, ಗಾಯಕ ಮತ್ತು ವೀಣಾ ಮಾಂತ್ರಿಕ ಪ್ರಿನ್ಸ್ ರಾಮವರ್ಮ ಅವರು ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ | ತರುಣ ಪದ ಅಂಕಣ: ಪ್ರಕಟಗೊಂಡ ಭಾರತದ ಸುಪ್ತ ಶಕ್ತಿಯ ಮಹಾಸ್ವರೂಪ

ನಂತರ ಜ. 25ರಿಂದ 29 ಜನವರಿ ವರೆಗೆ ಪ್ರತಿ ದಿನ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಪ್ರತಿಷ್ಠಿತ ಶಾಸ್ತ್ರೀಯ ಸಂಗೀತಗಾರರಿಂದ ಸಂಗೀತೋತ್ಸವವು ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 300 ಪ್ರಸಿದ್ಧ ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ.

ಕೊನೆ ದಿನ ಜನವರಿ 30ರಂದು 10 ಗಂಟೆಗೆ ಸಂತ ತ್ಯಾಗರಾಜರಿಂದ ರಚಿಸಲ್ಪಟ್ಟ ಪಂಚ ರತ್ನ ಕೃತಿ ಗೋಷ್ಠಿ ಗಾಯನವು ನಡೆಯಿದ್ದು, ಈ ವೇಳೆ ಪ್ರತಿಷ್ಠಿತ ಶಾಸ್ತ್ರೀಯ ಸಂಗೀತಗಾರರು ಒಕ್ಕೊರಲಿನಿಂದ ಹಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 600 ಕ್ಕಿಂತ ಹೆಚ್ಚು ಸಂಗೀತಗಾರರು ಭಾಗವಹಿಸಲಿದ್ದಾರೆ.

ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜರಿಗೆ “ಭಾರತಿ ತ್ಯಾಗರಾಜ ಸಮ್ಮಾನ್” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯು 1 ಲಕ್ಷ ರೂ.ಗಳ ನಗದು, ಒಂದು ಚಿನ್ನದ ಪದಕ, ಒಂದು ಉಲ್ಲೇಖ, ಮತ್ತು ಇತರ ಸಾಮಗ್ರಿಗಳನ್ನು ಒಳಗೊಂಡಿರುತ್ತದೆ. ಇದುವರೆಗೆ 32 ಸಂಗೀತಗಾರರು ಮತ್ತು ಸಂಬಂಧಿತ ವಿಷಯಗಳಲ್ಲಿ ಪರಿಣತರಿಗೆ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ಸದ್ಗುರು ಶ್ರೀ ತ್ಯಾಗಬ್ಬ್ರಹ್ಮ ಕೈಂಕರ್ಯ ಟ್ರಸ್ಟ್ ನೀಡಿ ಗೌರವಿಸಿದೆ.

ಇದನ್ನೂ ಓದಿ | ವರ್ಲ್ಡ್‌ ರಾಮಾಯಣ ಚಾಂಪಿಯನ್‌ಶಿಪ್‌ 2023; ಶ್ರೀರಾಮ ಹೊಳ್ಳ, ಸಾತ್ವಿಕ್‌ ಗೌತಮ್‌ ಪ್ರಥಮ

ಪ್ರಶಸ್ತಿಗಳನ್ನು ಜನವರಿ 30 ರಂದು ಸಂಜೆ 6 ಗಂಟೆಗೆ ಶೃಂಗೇರಿ ಶ್ರೀ ಶಾರದ ಪೀಠದ ಸಿಇಒ ಮತ್ತು ಆಡಳಿತಾಧಿಕಾರಿ, ಪದ್ಮಶ್ರೀ ಪುರಸ್ಕೃತ ಡಾ. ವಿ.ಆರ್. ಗೌರಿಶಂಕರ್ ಪ್ರದಾನ ಮಾಡಲಿದ್ದಾರೆ.

Exit mobile version