ಬೆಂಗಳೂರು: 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ -2 (SSLC Examination 2) ಜೂನ್ 14 ರಿಂದ ಶುರುವಾಗಲಿದೆ. ಈ ಮೊದಲು ಜೂನ್ 7ಕ್ಕೆ ನಡೆಸಲು ಯೋಜಿಸಲಾಗಿತ್ತು. ಬಳಿಕ ಜೂನ್ 14 ರಿಂದ 22ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷೆ ಎನ್.ಮಂಜುಶ್ರೀ ಸುತ್ತೋಲೆ ಹೊರಡಿಸಿದ್ದರು. ಅದರಂತೆ 2024ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ-2 (SSLC 2024 Exam 2) ಶುಕ್ರವಾರದಿಂದ ನಡೆಯಲಿದ್ದು, ಸುಮಾರು 2,23,308 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 1,44,160 ಬಾಲಕರು ಹಾಗೂ 79,148 ಬಾಲಕಿಯರು ಇದ್ದಾರೆ. ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ 724 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಇನ್ನೂ ಒಟ್ಟು ನೋಂದಣಿಯಲ್ಲಿ ಫಲಿತಾಂಶ ವೃದ್ಧಿಗೆ 13,085 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಏಳು ಮಾಧ್ಯಮದಲ್ಲಿ ಪರೀಕ್ಷೆಯನ್ನು ಬರೆಯಬಹುದಾಗಿದೆ. ಪ್ರತಿ ಕೇಂದ್ರದಲ್ಲೂ ಸಿಸಿಟಿವಿಗಳ ಮೂಲಕ ಪರೀಕ್ಷಾ ಅವ್ಯವಹಾರಗಳ ಮೇಲೆ ನಿಗಾ ಇಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷ-2ರ ವೇಳಾಪಟ್ಟಿ ಹೀಗಿದೆ
ದಿನಾಂಕ- ವಿಷಯಗಳು
14-06-2024 ಶುಕ್ರವಾರ: ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್(ಎನ್‌ಸಿಇಆರ್‌ಟಿ), ಸಂಸ್ಕೃತ.
15-06-2024 ಶನಿವಾರ: ತೃತೀಯ ಭಾಷೆ – ಹಿಂದಿ (ಎನ್‌ಸಿಇಆರ್‌ಟಿ), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
18-06-2024 ಮಂಗಳವಾರ: ಕೋರ್ ಸಬ್ಜೆಕ್ಟ್ -ಗಣಿತ, ಸಮಾಜ ಶಾಸ್ತ್ರ
19-06-2024 ಬುಧವಾರ: ಅರ್ಥ ಶಾಸ್ತ್ರ
20-06-2024 ಗುರುವಾರ: ಕೋರ್ ಸಬ್ಜೆಕ್ಟ್- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ.
21-06-2024 ಶುಕ್ರವಾರ- ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ
22-06-2024 ಶನಿವಾರ – ಕೋರ್ ಸಬ್ಜೆಕ್ಟ್- ಸಮಾಜ ವಿಜ್ಞಾನ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ