Site icon Vistara News

Student Lit Fest 2024: ಜಯನಗರದಲ್ಲಿ ಜ. 11, 12ರಂದು ವಿದ್ಯಾರ್ಥಿ ಸಾಹಿತ್ಯ ಸಂಭ್ರಮ

Student Lit fest

ಬೆಂಗಳೂರು: ಯುವಕ ಸಂಘ, ಫ್ರೀ ಸ್ಪೇಸ್‌ ಮತ್ತು ಚಾಣಕ್ಯ ವಿಶ್ವವಿದ್ಯಾಲಯ ಸಹಯೋಗದಲ್ಲಿ ಜನವರಿ 11 ಮತ್ತು 12 ರಂದು ʼವಿದ್ಯಾರ್ಥಿ ಸಾಹಿತ್ಯ ಸಂಭ್ರಮ 2024ʼ ಕಾರ್ಯಕ್ರಮವನ್ನು ಜಯನಗರದ ಯುವಪಥ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಾಹಿತ್ಯ ಹಬ್ಬದಲ್ಲಿ ಚರ್ಚಾಗೋಷ್ಠಿ,, ಪುಸ್ತಕಗಳ ಬಗ್ಗೆ ಚರ್ಚೆ, ಪುಸ್ತಕ ಮೇಳ, ಲೇಖಕರ ಸಂವಾದ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಜ.11ರಂದು ಬೆಳಗ್ಗೆ 9.40ರಿಂದ 11.15ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಂಗೀತ ಸಂಯೋಜಕ, ಮೂರು ಬಾರಿಯ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕಿ ಕೇಜ್, ಸೆಂಟರ್‌ ಫಾರ್‌ ಫಿಲ್ಮ್‌ & ಡ್ರಾಮಾ ಸಂಸ್ಥೆಯ ಸಹ ಸಂಸ್ಥಾಪಕ ಪ್ರಕಾಶ್ ಬೆಳವಾಡಿ, ಸ್ಯಾನ್‌ ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದ ಮೀಡಿಯಾ ಸ್ಟಡೀಸ್‌ ಪ್ರಾಧ್ಯಾಪಕ ಪ್ರೊ. ವಂಶೀ ಜುಲುರಿ, ಯುವಕ ಸಂಘದ ಅಧ್ಯಕ್ಷ ಡಾ.ಟಿ.ವಿ. ರಾಜು, ಚಾಣಕ್ಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಶ್‌ ಅರುಚಾಮಿ ಉಪಸ್ಥಿತರಿರಲಿದ್ದಾರೆ.

ಜನವರಿ 11ರಂದು 11.30 ರಿಂದ 12.30ರವರೆಗೆ ನ್ಯೂ ಇಂಡಿಯಾ- ನ್ಯೂ ಸ್ಟೋರೀಸ್‌, ಮಧ್ಯಾಹ್ನ 12.30ರಿಂದ 1.30ರವರೆಗೆ ಭಾರತೀಯ & ಅದರ್‌ ನ್ಯಾರೇಟಿವ್‌ ಸೆನ್ಸಿಬಲಿಟೀಸ್‌- ಎ ಚೇಂಜ್‌ ಇನ್‌ ಟ್ರೆಂಡ್ಸ್‌, 2.30ರಿಂದ 3.30ರವರೆಗೆ ಲಿಟರೇಚರ್‌ ಆ್ಯಂಡ್‌ ಇಟ್ಸ್‌ ಮೆನಿ ಮ್ಯಾನಿಫೆಸ್ಟೇಷನ್ಸ್‌, 3.45ರಿಂದ-4.45ರವರೆಗೆ ಓರಲ್‌, ಡಿಜಿಟಲ್‌, ಪ್ರಿಂಟ್‌ ಟು ಮೆಟಾವರ್ಸ್‌- ಎವಲ್ಯೂಷನ್‌ ಆಫ್‌ ಭಾರತೀಯ ಸಾಹಿತ್ಯ, ಸಂಜೆ 4.45ರಿಂದ 5.45ರವರೆಗೆ ಸಮಕಾಲೀನ ಯುವಕರು – ಅವಕಾಶಗಳು ಮತ್ತು ಸವಾಲುಗಳು ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾತನಾಡಲಿದ್ದಾರೆ.

ಇದನ್ನೂ ಓದಿ | National Youth Day: ವಿಸ್ತಾರ ನ್ಯೂಸ್‌ನಿಂದ ಪಾವಗಡದಲ್ಲಿ ಜ.12ರಂದು ಸ್ವಾಮಿ ವಿವೇಕಾನಂದ ಜನ್ಮೋತ್ಸವ

ಸಂಜೆ 6.15ರಿಂದ 7.30ರಿಂದ ಕರುನಾಡ ಕವಯಿತ್ರಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀ ರುದ್ರಾಕ್ಷ ನಾಟ್ಯಾಲಯದ ವಿದುಷಿ ಪದ್ಮಿನಿ ಅವರ ತಂಡದಿಂದ ಭರತ ನಾಟ್ಯ ಪ್ರದರ್ಶನ ಇರಲಿದೆ.

ಜ. 12ರಂದು ಬೆಳಗ್ಗೆ 10ರಿಂದ 11 ಗಂಟೆವರೆಗೆ ಶತಾವಧಾನಿ ಆರ್‌. ಗಣೇಶ್‌, 11ರಿಂದ 11.45ರವರೆಗೆ ನಿರ್ದೇಶಕ ದುಷ್ಯಂತ್‌ ಶ್ರೀಧರ್‌ ಅವರು ವಿಶೇಷ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ನಂತರ ಸಂಜೆ 3ರಿಂದ 4.15ರವರೆಗೆ ಕ್ರೋನಿಕಲ್‌ ಆಫ್‌ ಇಂಪ್ಯಾಕ್ಟ್‌, ಹಿಸ್ಟಾರಿಯನ್ಸ್‌ ಶೇಪಿಂಗ್‌ ಪೀಪಲ್‌ & ಸೊಸೈಟಿ ವಿಷಯದ ಬಗ್ಗೆ ಸಂವಾದ ನಡೆಯಲಿದೆ. 4.30ರಿಂದ 5.30ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ.

Exit mobile version