Site icon Vistara News

ಆ.27ರಂದು ಮಹಾರಾಷ್ಟ್ರದಲ್ಲಿ ಸ್ವರ ಸಪ್ತಕ; ನೋಡಿ ಸಂಗೀತ ಮಾಂತ್ರಿಕರ ಮೋಡಿ!

ಸಪ್ತಕ ಬೆಂಗಳೂರು

ಬೆಂಗಳೂರು: ಸಾಂಸ್ಕೃತಿಕ ಸಂಸ್ಥೆಯಾದ ʻʻಸಪ್ತಕ ಬೆಂಗಳೂರುʼʼ ನಾಲ್ಕನೇ ಬಾರಿ ಮಹಾರಾಷ್ಟ್ರದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನೀಡುತ್ತಿದ್ದು, ಆಗಸ್ಟ್‌ 27ರಂದು ʻʻಸ್ವರ ಸಪ್ತಕʼʼ ಕಾರ್ಯಕ್ರಮ ನಡೆಯಲಿದೆ.

ಶನಿವಾರ ಸಂಜೆ 5.30ಕ್ಕೆ ಸ್ವರಸಭಾ ಹಾಗೂ ನಾಂದೇಡ ಸಂಸ್ಥೆಯ ಸಹಯೋಗದೊಂದಿಗೆ ನಾಂದೆಡದ ಕಾಬ್ರಾ ನಗರದಲ್ಲಿ ʻಸ್ವರ ಸಪ್ತಕʼʼವನ್ನು ಹಮ್ಮಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸುದಾಮ ದಾನಗೇರಿ ಅವರ ಗಾಯನಕ್ಕೆ ಗಣೇಶ ಭಾಗ್ವತ, ಗುಂಡ್ಕಲ್ ಯಲ್ಲಾಪುರ ಇವರ ತಬಲಾ ವಾದನ ಹಾಗೂ ಮಿಹೀರ್ ಜೋಶಿ, ನಾಂದೇಡ್ ಅವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಪ್ರಸಿದ್ಧ ಯುವ ಗಾಯಕಿ ಯಶಸ್ವೀ ಸರ್ಪೋತದಾರ್ ಅವರ ಗಾಯನ ಕಾರ್ಯಕ್ರಮವಿದ್ದು, ಇವರಿಗೆ ಪ್ರಶಾಂತ ಗಜ್ರೆ ಅವರ ತಬಲಾ ಸಾಥ್ ಹಾಗೂ ಕೃಷ್ಣರಾಜ ಲಾವೇಕರ್ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

ಆಗಸ್ಟ್‌ 28ರ ಭಾನುವಾರ ಸಂಜೆ 4 ಗಂಟೆಗೆ ಸ್ವರಾರ್ಚನ ಮ್ಯೂಸಿಕ್ ಕ್ಲಬ್, ಮುಂಬಯಿ ಇವರ ಸಹಯೋಗದೊಂದಿಗೆ ಪ್ರಭೋದಂಕರ್ ಠಾಕ್ರೆ ಮಿನಿ ಹಾಲ್, ನಾಲ್ಕನೇ ಮಹಡಿ, ಬೋರಿವಲಿ ಪಶ್ಚಿಮ, ಮುಂಬಯಿಯಲ್ಲಿ ಸ್ವರ ಧಾರಾ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಕುಮಾರಿ ಹಿರಣ್ಮಯೀ ಎಸ್. ಬೆಂಗಳೂರು ಇವರ ಗಾಯನ ಕಾರ್ಯಕ್ರಮಕ್ಕೆ ಸಿದ್ದಾರ್ಥ ಮೇಸ್ತ ಹಾರ್ಮೋನಿಯಂ ವಾದನವಿದೆ. ಹಿರಿಯ ಗಾಯಕರಾದ ಪಂ. ಸುರೇಶ ಬಾಪಟ್‌ ಅವರ ಗಾಯನಕ್ಕೆ ಅನಂತ ಜೋಶಿ ಮುಂಬಯಿ ಅವರ ಹಾರ್ಮೋನಿಯಂ ವಾದನವಿದೆ. ಎರಡೂ ಗಾಯನ ಕಾರ್ಯಕ್ರಮಕ್ಕೆ ಯತಿ ಭಾಗ್ವತ್, ಮುಂಬಯಿ ಅವರು ತಬಲಾ ಸಾಥ್ ನೀಡಲಿದ್ದಾರೆ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಪ್ತಕ ಸಂಸ್ಥೆಯ ಸಂಚಾಲಕರಾದ ಜಿ.ಎಸ್.ಹೆಗಡೆ ಅವರು ಮನವಿ ಮಾಡಿದ್ದಾರೆ. ವಿಶೇಷ ಮಾಹಿತಿಗೆ ಮೊಬೈಲ್ 7019434992/9535511888 ಸಂಪರ್ಕಿಸಿಬಹುದು.

ಇದನ್ನೂ ಓದಿ | ಕಾಣೆಯಾದ ಪ್ರೀತಿಯ ಗಿಣಿ, ಹುಡುಕಿ ಕೊಟ್ಟವರಿಗೆ ₹ 80,000 ಬಹುಮಾನ, ಸಿಕ್ಕ ನಂತರ ಮೃಗಾಲಯಕ್ಕೆ ದಾನ!

Exit mobile version