Site icon Vistara News

T A Sharavana: ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಳಗುತ್ತಿಗೆ ನೌಕರರಿಗೆ 5 ಸಾವಿರ ಆಹಾರ ಪ್ಯಾಕೆಟ್‌ ವಿತರಿಸಿದ ಟಿ.ಎ.ಶರವಣ

#image_title

ಬೆಂಗಳೂರು: ನೌಕರಿ ಕಾಯಂ ಮಾಡಲು ಮತ್ತು ವೇತನ ಹೆಚ್ಚಿಸಲು ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಳಗುತ್ತಿಗೆ ನೌಕರರಿಗೆ ವಿಧಾನ ಪರಿಷತ್ ಸದಸ್ಯ ಟಿ. ಎ.ಶರವಣ (T A Sharavana) ಅವರು 5000 ಆಹಾರದ ಪ್ಯಾಕೆಟ್‌ಗಳನ್ನು ಸೋಮವಾರ ವಿತರಣೆ ಮಾಡಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಾವಿರಾರು ಒಳಗುತ್ತಿಗೆ ನೌಕರರು, ನೌಕರಿ ಕಾಯಂಗೊಳಿಸುವಂತೆ ಮತ್ತು ವೇತನ ಹೆಚ್ಚಿಸುವಂತೆ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸದನದಲ್ಲೂ ಎಂಎಲ್‌ಸಿ ಟಿ. ಎ.ಶರವಣ ಅವರು ಪ್ರಸ್ತಾಪಿಸಿದ್ದಾರೆ. ಹಾಗೆಯೇ ನೌಕರರಿಗೆ ನೆರವಾಗುವ ನಿಟ್ಟಿನಲ್ಲಿ ಹೋರಾಟ ನಿರತ ಕಾರ್ಮಿಕ ವರ್ಗದವರಿಗೆ ಆಹಾರ ಪೊಟ್ಟಣ ವಿತರಣೆ ಮಾಡಿದ್ದಾರೆ.

Exit mobile version