Site icon Vistara News

Kannada books | ಪುಸ್ತಕ ಖರೀದಿಯ ಬಾಕಿ ಮೊತ್ತ ಬಿಡುಗಡೆಗೆ ಕ್ರಮ ಕೈಗೊಳ್ಳಿ; ಬಿಎಸ್‌ವೈಗೆ ಪ್ರಕಾಶಕರ ಸಂಘ ಮನವಿ

Kannada books

ಬೆಂಗಳೂರು: ಏಕ ಗವಾಕ್ಷಿ ಯೋಜನೆಯ ಪುಸ್ತಕಗಳ ಖರೀದಿ (Kannada books) ಬಾಕಿ ಸುಮಾರು 8.40 ಕೋಟಿ ರೂಪಾಯಿ ಬಿಡುಗಡೆ ಮತ್ತು ಬಿಬಿಎಂಪಿ, ನಗರಸಭೆ ಹಾಗೂ ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಿರುವ ಗ್ರಂಥಾಲಯ ಕರವನ್ನು ನೇರವಾಗಿ ಗ್ರಂಥಾಲಯ ಇಲಾಖೆಯ ಖಾತೆಗೆ ಪಾವತಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು ಎಂದು ಕರ್ನಾಟಕ ಪ್ರಕಾಶಕರ ಸಂಘದಿಂದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪಗೆ ಮಂಗಳವಾರ ಮನವಿ ಸಲ್ಲಿಸಲಾಗಿದೆ.

ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿಯಲ್ಲಿ ಏಕ ಗವಾಕ್ಷಿ ಯೋಜನೆಯೊಂದನ್ನು ಬಿಟ್ಟು ಎಲ್ಲ ಪುಸ್ತಕ ಖರೀದಿ ಆರ್ಥಿಕ ವ್ಯವಹಾರ ಸಾರ್ವಜನಿಕರಿಂದ ವಸೂಲಾಗುವ ಗ್ರಂಥಾಲಯ ಕರದಿಂದಲೇ ನಡೆಯುತ್ತದೆ. ಆದರೆ ಏಕ ಗವಾಕ್ಷಿ ಯೋಜನೆಯ 2019ನೇ ಸಾಲಿನ ಬಾಕಿ ಸುಮಾರು 8.40 ಕೋಟಿ ರೂ.ಗಳು ಹಾಗೂ 2020ರ ಸಾಲಿನ 18 ಲಕ್ಷ ರೂ.ಗಳು ಇದೆ. ಈ ಹಣವನ್ನು ಗ್ರಂಥಾಲಯ ಇಲಾಖೆಗೆ ರಾಜ್ಯ ಸರ್ಕಾರ ಶೀಘ್ರ ಬಿಡುಗಡೆ ಮಾಡಬೇಕು ಎಂದು ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ನೇತೃತ್ವದಲ್ಲಿ ಸದಸ್ಯರು ಕೋರಿದ್ದಾರೆ.

ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಂದ ಈವರೆಗೆ ಸಂಗ್ರಹಿಸಿರುವ ಗ್ರಂಥಾಲಯ ಕರವನ್ನು ಗ್ರಂಥಾಲಯ ಇಲಾಖೆಗೆ ನೀಡದಿರುವುದರಿಂದ ಕನ್ನಡ ಪುಸ್ತಕಗಳ ಖರೀದಿ ಹಾಗೂ ಇತರ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯೊಂದೇ ಸುಮಾರು 500 ಕೋಟಿ ನೀಡಬೇಕಾಗಿದೆ. ಹೀಗಾಗಿ ಗ್ರಂಥಾಲಯ ಕರವನ್ನು ನೇರವಾಗಿ ಗ್ರಂಥಾಲಯ ಇಲಾಖೆ ಖಾತೆಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕ ಪ್ರಕಾಶಕರ ಸಂಘದ ಪದಾಧಿಕಾರಿಗಳಾದ ಅಭಿನವ ರವಿಕುಮಾರ್, ಸೃಷ್ಟಿ ನಾಗೇಶ್ ಮತ್ತು ನವಕರ್ನಾಟಕದ ರಮೇಶ್ ಉಡುಪ ಮತ್ತಿತರರು ಇದ್ದರು.

ಇದನ್ನೂ ಓದಿ | BJP ಕೈ ಸುಡಲಿದೆ 40%; SCST ಮೀಸಲಾತಿಯಿಂದ ಲಾಭವಿಲ್ಲ: ಲಂಡನ್‌ ವಿವಿ ರಾಜಕೀಯ ವಿಶ್ಲೇಷಕ ಜೇಮ್ಸ್‌ ಮೇನರ್‌ ಅಭಿಮತ

Exit mobile version