Site icon Vistara News

Teach For India : ಟೀಚ್ ಫಾರ್ ಇಂಡಿಯಾದಿಂದ 2025ರ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿಗಳ ಆಹ್ವಾನ

Teach for India

ಬೆಂಗಳೂರು: ಮಕ್ಕಳಿಗೆ ಶೈಕ್ಷಣಿಕ ಸಮಾನತೆ ತರಲು ಶ್ರಮಿಸುತ್ತಿರುವ ಟೀಚ್ ಫಾರ್ ಇಂಡಿಯಾ (Teach for India) ತನ್ನ 2025ರ ಫೆಲೋಶಿಪ್ ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಸೆಪ್ಟೆಂಬರ್ 1, 2024. ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಎರಡು ವರ್ಷದ, ಪೂರ್ಣಕಾಲಿಕ ಫೆಲೋಶಿಪ್ ಕಾರ್ಯಕ್ರಮವಾಗಿದ್ದು ಶೈಕ್ಷಣಿಕ ವಲಯದಲ್ಲಿ ಆಸಕ್ತಿಯುಳ್ಳ ಮತ್ತು ಬದಲಾವಣೆಯ ನಾಯಕರಾಗಲು ಬಯಸುವವರಿಗೆ ಸಬಲೀಕರಿಸುವ ಉದ್ದೇಶ ಹೊಂದಿದೆ. 640ಕ್ಕೂ ಹೆಚ್ಚು ಫೆಲೋಗಳು 2024 ಸಮೂಹ ಸೇರಿದ್ದು ಈ ಕಾರ್ಯಕ್ರಮದ ಬೆಳೆಯುತ್ತಿರುವ ಪ್ರಭಾವಕ್ಕೆ ಮತ್ತು ಶಿಕ್ಷಣ- ಸಮಾನತೆಯ ಚಳವಳಿಯ ಪರಿಣಾಮದ ಸದೃಢ ಸಾಕ್ಷಿಯಾಗಿದೆ.

ಈ ಫೆಲೋಶಿಪ್ ಅರ್ಜಿ ಪ್ರಕ್ರಿಯೆ ಅತ್ಯಂತ ಎಚ್ಚರದಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ಭಾರತದ ಅತ್ಯಂತ ಉಜ್ವಲ ಮತ್ತು ಭರವಸೆಯ ವ್ಯಕ್ತಿಗಳ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಆಯ್ದ ಫೆಲೋಗಳು ಕಠಿಣ ತರಬೇತಿ ಕಾರ್ಯಕ್ರಮ ಪಡೆಯುತ್ತಾರೆ ಅದರಲ್ಲಿ ಅವರು ಶಿಕ್ಷಣ ವ್ಯವಸ್ಥೆಯನ್ನು ಅದರ ಬೇರುಮಟ್ಟದಿಂದ ಅರ್ಥ ಮಾಡಿಕೊಳ್ಳಲು ಪ್ರೇರಣೆ ನೀಡಲಾಗುತ್ತದೆ.

ಇದನ್ನೂ ಓದಿ : Dharwad News: ಧಾರವಾಡದಲ್ಲಿ ಜು.7ರಂದು ಡಾ. ಜಿನದತ್ತ ಅ. ಹಡಗಲಿಗೆ ಅಭಿನಂದನಾ ಸಮಾರಂಭ

ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ನ ವಿಶಿಷ್ಟ ಆಯಾಮವೆಂದರೆ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರಿವರ್ತನೀಯ ಬದಲಾವಣೆ ತರುವ ಅವಕಾಶ. ಇದು ಅವರಿಗೆ ನಾಯಕತ್ವ, ಸಮಸ್ಯೆ ಪರಿಹರಿಸುವುದು ಮತ್ತು ನಿಜ ಜೀವನದ ಸವಾಲುಗಳನ್ನು ಎದುರಿಸುವ ಹಲವು ಆಯಾಮಗಳ ಕುರಿತು ಒಳನೋಟಗಳನ್ನು ನೀಡುತ್ತದೆ ಅದು ಅವರ ಒಟ್ಟಾರೆ ವೃತ್ತಿಯ ಪ್ರಗತಿಗೆ ಮಹತ್ತರ ಬದಲಾವಣೆ ತರುತ್ತದೆ.

ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಕುರಿತು ಹೆಚ್ಚು ತಿಳಿಯಲು ಮತ್ತು ಆಯ್ಕೆ ಪ್ರಕ್ರಿಯೆಗೆ ಈ ಕೆಳಕಂಡ ಲಿಂಕ್ ಗಳಿಗೆ ಭೇಟಿ ನೀಡಿ:

Exit mobile version