Site icon Vistara News

MSRIM Convocation: ಅದ್ಧೂರಿಯಾಗಿ ನೆರವೇರಿದ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ 27ನೇ ಘಟಿಕೋತ್ಸವ

MSRIM convocation

ಬೆಂಗಳೂರು: ನಗರದ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣದಲ್ಲಿ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ 27ನೇ ಘಟಿಕೋತ್ಸವ (MSRIM Convocation) ಗುರುವಾರ ಅದ್ಧೂರಿಯಾಗಿ ನೆರವೇರಿತು. ಈ ವೇಳೆ 2021-23ನೇ ಸಾಲಿನ ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ (ಪಿಜಿಡಿಎಂ) ಬ್ಯಾಚ್‌ಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು.

ರಾಕುಟೆನ್ ಇಂಡಿಯಾದ ಚೀಫ್ ಪೀಪಲ್ ಆಫೀಸ್ (ಸಿಪಿಒ) ನಳಿನಿ ಜಾರ್ಜ್ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಗೌರವ ಅತಿಥಿಗಳಾಗಿ ಅಸೋಚಾಂನ ಟೊಯೊಟಾ ಸಮೂಹ ಅಧ್ಯಕ್ಷರ ಕಾರ್ಯ ನಿರ್ವಾಹಕ ಸಲಹೆಗಾರ ಟಿ.ಆರ್. ಪರಶುರಾಮನ್ ಇದ್ದರು.

ಮುಖ್ಯ ಅತಿಥಿಯಾದ ರಾಕುಟೆನ್ ಇಂಡಿಯಾದ ಚೀಫ್ ಪೀಪಲ್ ಆಫೀಸ್ (ಸಿಪಿಒ) ನಳಿನಿ ಜಾರ್ಜ್ ಅವರು ಮಾತನಾಡಿ, ಕೃತಜ್ಞತೆ, ವಿಶ್ವಾಸ ಮತ್ತು ವಿನಮ್ರತೆಯ ಮೌಲ್ಯದ ಬಗ್ಗೆ ಸೊಗಸಾಗಿ ವಿವರಣೆ ನೀಡಿದರು. ಪದವಿ ಪಡೆದಂಥ ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ತಮ್ಮ ವೃತ್ತಿ ಬದುಕಿನಲ್ಲಿ ಮುಂದುವರಿಸಿಕೊಂಡು ಹೋಗುವುದಕ್ಕೆ ಸ್ಫೂರ್ತಿಯುತವಾದ ಮಾತುಗಳನ್ನಾಡಿದರು.

ಇದನ್ನೂ ಓದಿ | NAMSCON-2023: ವೈದ್ಯರು ಮಾನವೀಯ ಸೇವೆಯಲ್ಲಿ ತೊಡಗಬೇಕು: ಥಾವರ್ ಚಂದ್ ಗೆಹ್ಲೋಟ್‌

ಗೌರವ ಅತಿಥಿ ಅಸೋಚಾಂನ ಟೊಯೊಟಾ ಸಮೂಹ ಅಧ್ಯಕ್ಷರ ಕಾರ್ಯ ನಿರ್ವಾಹಕ ಸಲಹೆಗಾರ ಟಿ.ಆರ್. ಪರಶುರಾಮನ್ ಅವರು ಮಾತನಾಡಿ, ಆವಿಷ್ಕಾರದ ಪ್ರಾಮುಖ್ಯ ಮತ್ತು ದೇಶದ ಜಿಡಿಪಿ ಮೇಲೆ ಅದು ಬೀರುವಂಥ ಪರಿಣಾಮವನ್ನು ವಿವರಿಸಿದರು. ಆವಿಷ್ಕಾರದ ಚಿಂತನೆಯನ್ನು ಮಾಡುವ ಮೂಲಕ ಸಕಾರಾತ್ಮಕ ಬದಲಾವಣೆಗಳನ್ನು ತರುವಂತೆ ಹೊಸದಾಗಿ ಪದವಿ ಪಡೆದವರಿಗೆ ಸಲಹೆ ನೀಡಿದರು.

ಪಿಜಿಡಿಎಂ ಕೋರ್ಸ್‌ನಲ್ಲಿ ಕಠಿಣ ಪರಿಶ್ರಮ, ಸಮರ್ಪಣಾ ಭಾವ ತೋರಿ ಶೈಕ್ಷಣಿಕವಾಗಿ ಅಮೋಘ ಸಾಧನೆ ಮಾಡಿದಂತಹ ವಿದ್ಯಾರ್ಥಿಗಳಿಗೆ ಈ ಸಮಾರಂಭದಲ್ಲಿ ಪದಕಗಳನ್ನು ಪ್ರದಾನ ಮಾಡಲಾಯಿತು.

ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಹಣಕಾಸು, ಆಪರೇಷನ್ ಮ್ಯಾನೇಜ್ ಮೆಂಟ್, ಉದ್ಯಮಶೀಲತೆ, ಅನಲಿಟಿಕ್ಸ್ ಮತ್ತು ಇಂಟರ್ ನ್ಯಾಷನಲ್ ಬಿಜಿನೆಸ್ ಮ್ಯಾನೇಜ್‌ಮೆಂಟ್ ಹೀಗೆ ವಿವಿಧ ವಿಭಾಗಗಳಲ್ಲಿ ಅಮೋಘ ಶೈಕ್ಷಣಿಕ ಸಾಧನೆ ಮಾಡಿದಂಥವರಿಗೆ ಚಿನ್ನ, ಬೆಳ್ಳಿ ಪದಕಗಳನ್ನು ನೀಡಲಾಯಿತು. ಲಿಪ್ಸಿತಾ ದಾಸ್ ಸ್ಮರಣಾರ್ಥ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಮತ್ತು ಅಭಿನವ್ ಗುಪ್ತಾ ಸ್ಮರಣಾರ್ಥ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಸಾಧಕರಿಗೆ ನೀಡಲಾಯಿತು.

ಸ್ಮರಣೀಯ ಸಮಾರಂಭದಲ್ಲಿ ಗೋಕುಲ ಎಜುಕೇಷನ್ ಫೌಂಡೇಶನ್‌ನ ಗೌರವಾನ್ವಿತ ನಿರ್ದೇಶಕರು ಮತ್ತು ಟ್ರಸ್ಟಿ ಆದಂಥ ಆನಂದರಾಮ್, ಜಿಇಎಫ್ ಚೀಫ್ ಆಫ್ ಫೈನಾನ್ಸ್ ಜಿ. ರಾಮಚಂದ್ರ, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಶಿಕ್ಷಣ ಶಾಸ್ತ್ರ ಸಂಶೋಧನೆ ಮತ್ತು ಆಡಳಿತ) ನಿರ್ದೇಶಕರಾದ ಡಾ. ಮಾನಸಾ ನಾಗಭೂಷಣಂ ಮತ್ತು ಮೌಲ್ಯಮಾಪನ ರಿಜಿಸ್ಟ್ರಾರ್ ಡಾ. ಸವಿತಾ ರಾಣಿ ರಾಮಚಂದ್ರನ್ ಹಾಜರಿದ್ದರು.

ಗುಣಮಟ್ಟದ ಶಿಕ್ಷಣಕ್ಕೆ ಖ್ಯಾತಿ MSRIM

ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (MSRIM) ಯಾವಾಗಲೂ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಹಾಗೂ ಭವಿಷ್ಯದ ನಾಯಕರನ್ನು ರೂಪಿಸುವುದಕ್ಕೆ ಬದ್ಧವಾಗಿರುವ ಪ್ರಸಿದ್ಧ ಸಂಸ್ಥೆಯಾಗಿದೆ. ಇಲ್ಲಿ ಉಲ್ಲೇಖಿಸಬೇಕಾದ ಅಂಶ ಏನೆಂದರೆ ಆರ್‌ಐಎ ಭಾರತದಲ್ಲಿನ ಅಗ್ರ 100 ಬಿ-ಸ್ಕೂಲ್‌ಗಳಲ್ಲಿ ಸತತವಾಗಿ ಸ್ಥಾನ ಪಡೆದಿದೆ. ಇನ್ನು ಸಂಸ್ಥೆಯು ಬಿಜಿನೆಸ್ ವರ್ಲ್ಡ್ ಗ್ರೂಪ್‌ನಿಂದ “ಎಮರ್ಜಿಂಗ್ ಬಿ ಸ್ಕೂಲ್” ಮತ್ತು ದಿ ಅಕಾಡೆಮಿಕ್ ಇನ್‌ಸೈಟ್‌ನಿಂದ “ಇನ್ನೋವೇಟಿವ್ ಬಿಜಿನೆಸ್ ಸ್ಕೂಲ್ ಆಫ್ ದಿ ಇಯರ್” ಎಂದು ಪ್ರಶಸ್ತಿ ಪಡೆದಿದೆ.

ಇದನ್ನೂ ಓದಿ | ಈ ವರ್ಷ ಇನ್ಫೋಸಿಸ್‌ನಿಂದ ಕ್ಯಾಂಪಸ್ ನೇಮಕಾತಿ ಇಲ್ಲ! ಎಂಜಿನಿಯರ್ಸ್‌ಗೆ ನಿರಾಸೆ

ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್ ಅನ್ನು ಎಜುಕೇಷನ್ ಟೈಮ್ಸ್ ಭಾರತದ ಅಗ್ರ 50 ಖಾಸಗಿ ಸಂಸ್ಥೆಗಳಲ್ಲಿ ಒಂದು ಎಂದು ಗುರುತಿಸಿದೆ. ಕೆರಿಯರ್ 360 ಡಿಗ್ರಿಯಿಂದ ಸಂಸ್ಥೆಗೆ AAA+ ರೇಟಿಂಗ್ ನೀಡಲಾಗಿದೆ. ಆರ್‌ಐಎಂಗೆ ಉತ್ಕೃಷ್ಟತೆಯ ಪರಂಪರೆಯೂ ಇದೆ. ಏಕೆಂದರೆ, ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಅದರಲ್ಲಿ ಉದ್ಯೋಗನಿರತ ವೃತ್ತಿಪರರಿಗೆ XCEED ಬ್ಯಾಂಡ್ ಅಡಿಯಲ್ಲಿ ಎಕ್ಸ್‌ಕ್ಯೂಟಿವ್ ಶಿಕ್ಷಣವೂ ಒಳಗೊಂಡಿದೆ. ಕೌಶಲ ಹೆಚ್ಚಿಸುವುದಕ್ಕೆ ಕ್ರಿಯಾತ್ಮಕ ಹಾಗೂ ಸ್ಮರ್ಧಾತ್ಮಕ ವ್ಯಾಪಾರ ಜಗತ್ತಿಗೆ ಬೇಕಾದ ಹೊಸತನಕ್ಕೆ ಉತ್ತೇಜನ ನೀಡುವುದಕ್ಕೆ ಈ ಕೋರ್ಸ್ ರೂಪಿಸಲಾಗಿದೆ.

Exit mobile version