ಬೆಂಗಳೂರು: ಗೃಹಲಕ್ಷ್ಮಿ ದುಡ್ಡನ್ನು ಪ್ರತಿ ತಿಂಗಳ 20ರೊಳಗೆ ಜಮಾ ಮಾಡುವಂತೆ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಇದೀಗ ಅದರಂತೆ ಗೃಹಲಕ್ಷ್ಮಿ ಯೋಜನೆಯ 3ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ ಈವರೆಗೂ ಹಣ ಬಾರದೆ ಇರುವ ಮಹಿಳೆಯರ ಖಾತೆಗೂ ಹಣ ಸಂದಾಯ (Gruha Lakshmi Scheme) ಮಾಡಲಾಗಿದೆ.
99.52 ಲಕ್ಷ ನೊಂದಾಯಿತ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಗಾಗಿ ರೂ. 17,500 ಕೋಟಿ ಅನುದಾನ ಮೀಸಲಿಟ್ಟಿದ್ದು, ಈವರೆಗೆ ರೂ. 11,200 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.
ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮಹಿಳೆಯರಿಗೆ ಬೆಲೆಯೇರಿಕೆಯಿಂದ ತುಸು ನೆಮ್ಮದಿ ನೀಡಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು, ಮಾಸಿಕ ರೂ.2,000 ಸಹಾಯಧನ ನೀಡುತ್ತಿದ್ದೇವೆ. ಕಳೆದ 6 ತಿಂಗಳ ಅವಧಿಯಲ್ಲಿ ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ (ಎಕ್ಸ್) ಮಾಡಿದ್ದಾರೆ.
ಗೃಹಲಕ್ಷ್ಮಿ (Gruha Lakshmi Scheme) ಹಾಗೂ ಅನ್ನಭಾಗ್ಯ ಯೋಜನೆಯ (Anna Bhagya Scheme) ಹಣವು ಫಲಾನುಭವಿಗಳ ಖಾತೆಗೆ ಜಮೆ ಆಗಲು ಗಡುವು ವಿಧಿಸಿ ಆದೇಶಿಸಲಾಗಿತ್ತು. ಅನ್ನಭಾಗ್ಯದ ದುಡ್ಡನ್ನು ಪ್ರತಿ ತಿಂಗಳ 15ರೊಳಗೆ ಹಾಗೂ ಗೃಹಲಕ್ಷ್ಮಿ ದುಡ್ಡನ್ನು ಪ್ರತಿ ತಿಂಗಳ 20ರೊಳಗೆ ಜಮಾ ಮಾಡುವಂತೆ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿತ್ತು.
ಇದನ್ನೂ ಓದಿ: Pop Singer Shakira: ಅಂತೂ ಇಂತೂ ಜೈಲು ತಪ್ಪಿಸಿಕೊಂಡು ಪಾಪ್ ಸಿಂಗರ್ ಶಕೀರಾ!
ಹಣ ಬಂದಿದ್ಯಾ ಇಲ್ವಾ? ಹೀಗೆ ಪರಿಶೀಲಿಸಿ
ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಮೊದಲು ಪ್ಲೇ ಸ್ಟೋರ್‌ನಲ್ಲಿ DBT ಕರ್ನಾಟಕ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಈ ಆ್ಯಪ್ ತೆರೆದು ಎಲ್ಲ ಆಯ್ಕೆಗಳಿಗೂ ಅನುಮತಿ ಇದೆ (allow) ಎಂದು ಕ್ಲಿಕ್ ಮಾಡಿ.
ಬಳಿಕ ನೀವು ಯಾರ ಸ್ಪೇಟಸ್ ಪರಿಶೀಲನೆ ಮಾಡಬೇಕು ಎಂದುಕೊಂಡಿದ್ದೀರೊ ಅವರ ಆಧಾರ್ ಕಾರ್ಡ್ ನಂಬರ್ ನಮೂದಿಸಿ, ನಂತರ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಓಟಿಪಿ (OTP) ಬರಲಿದೆ. ಆ ಓಟಿಪಿ ಸಂಖ್ಯೆಯನ್ನು ನಮೂದಿಸಿ ನಂತರ ನಾಲ್ಕು ಸಂಖ್ಯೆಯ MPIN ಕ್ರಿಯೇಟ್ ಮಾಡಿ. ಪೇಮೆಂಟ್ ಸ್ಟೇಟಸ್ ಎನ್ನುವ ಆಯ್ಕೆ ಬರಲಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸರ್ಕಾರದ ಯಾವ ಯೋಜನೆಗಳಿಂದ DBT ಮೂಲಕ ಹಣ ವರ್ಗಾವಣೆ ಆಗಿದೆ ಎನ್ನುವ ಸಂಪೂರ್ಣ ವಿವರ ಸಿಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.