Site icon Vistara News

Convergence Foundation : ಕನ್ವರ್ಜನ್ಸ್ ಫೌಂಡೇಷನ್ ಸಹಯೋಗದೊಂದಿಗೆ ‘ವ್ಯವಸ್ಥಿತ ಪರಿಣಾಮ ಸೃಷ್ಟಿ’ ಕುರಿತು ಸಂವಾದ

Convergence Foundation

ಬೆಂಗಳೂರು: ಕನ್ವರ್ಜನ್ಸ್ ಫೌಂಡೇಷನ್ (Convergence Foundation ), ರೋಹಿಣಿ ನಿಲೇಕಣಿ ಫಿಲಾಂತ್ರೋಪೀಸ್, ಸೆಂಟರ್ ಫಾರ್ ಎಕ್ಸ್‌ಪೋನೆನ್ಷಿಯಲ್ ಚೇಂಜ್ ಮತ್ತು ಇಂಡಿಯಾ ಇಂಪ್ಯಾಕ್ಟ್ ಶೆರ್ಪಾಸ್ ಸಹಯೋಗದಲ್ಲಿ, ‘ವ್ಯವಸ್ಥಿತ ಪರಿಣಾಮ ಸೃಷ್ಟಿ’ ಕುರಿತು ಬೆಂಗಳೂರಿನಲ್ಲಿ ಸಮ್ಮೇಳನ ನಡೆಯಿತು. ಅಭಿವೃದ್ಧಿ ಸಾಧಕರು, ಚಿಂತಕರು ವ್ಯವಸ್ಥೆಗಳ ಬದಲಾವಣೆಯ ನಡವಳಿಕೆಗಳು ಮತ್ತು ಸಶಕ್ತಗೊಳಿಸುವಿಕೆಗಳ ಕುರಿತು ಈ ಸಂವಾದದಲ್ಲಿ ಮಾತನಾಡಿದರು.

ರೋಹಿಣಿ ನಿಲೇಕಣಿ ಫಿಲಾಂತ್ರೋಪೀಸ್ ಅಧ್ಯಕ್ಷೆ ರೋಹಿಣಿ ನಿಲೇಕಣಿ ಅವರು ಮಾತನಾಡಿ, “ಎಲ್ಲರನ್ನೂ ಒಳಗೊಳ್ಳುವ ಮತ್ತು ಗಮನಾರ್ಹ ಬಗೆಯಲ್ಲಿ ಸಾಮಾಜಿಕ ಬದಲಾವಣೆ ಬಯಸುವ ಈ ದಶಕವು ಮಾನವ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ . ಭಯಪಡುವುದಕ್ಕಿಂತ ಭಿನ್ನವಾಗಿ ಉತ್ತಮ ಭವಿಷ್ಯ ಸೃಷ್ಟಿಸಲು ಉಜ್ವಲ ಅವಕಾಶಗಳನ್ನು ನಾವು ಹೊಂದಬೇಕು. ಸಮಾಜ, ಸರ್ಕಾರ ಮತ್ತು ಮಾರುಕಟ್ಟೆ ನಡುವಿನ ಘರ್ಷಣೆ ಕಡಿಮೆ ಮಾಡಲು ಮತ್ತು ಪ್ರತಿಯೊಂದರ ನೈಜ ಸಾಮರ್ಥ್ಯ ಪೂರ್ಣವಾಗಿ ಬಳಸಿಕೊಳ್ಳಲು ಬಂಡವಾಳವನ್ನು ಕಾರ್ಯತಂತ್ರವಾಗಿ ಮತ್ತು ತುರ್ತಾಗಿ ನಿಯೋಜಿಸಬೇಕಾಗಿದೆ. ಲೋಕಹಿತ ಬಯಸುವ ವ್ಯಕ್ತಿಗಳು ಮತ್ತು ಪ್ರತಿಷ್ಠಾನಗಳು ಈ ನಿಟ್ಟಿನಲ್ಲಿ ಮುಂದಡಿ ಇಡಬೇಕು. ನಾವೆಲ್ಲ ದೊಡ್ಡ ಮಟ್ಟದಲ್ಲಿ ಯೋಚಿಸೋಣ, ವ್ಯವಸ್ಥಿತ ಬದಲಾವಣೆಯಲ್ಲಿ ಹೂಡಿಕೆ ಮಾಡುವ ವ್ಯಕ್ತಿಗಳ ಜೊತೆ ಚೆನ್ನಾಗಿ ಕೆಲಸ ಮಾಡಲು ಪಣತೊಡೋಣ” ಎಂದರು.

‘ವ್ಯವಸ್ಥಿತ ಪರಿಣಾಮಕ್ಕಾಗಿ ಹೂಡಿಕೆಯ ಅವಕಾಶಗಳನ್ನು ಮುಕ್ತಗೊಳಿಸುವ’ ಕುರಿತು ಕನ್ವರ್ಜನ್ಸ್ ಫೌಂಡೇಷನ್‌ನ ಕಾರ್ಯತಂತ್ರ ಮತ್ತು ಹೂಡಿಕೆ ವಿಭಾಗದ ಮುಖ್ಯಸ್ಥ ಪ್ರವೀಣ್ ಖಂಘ್ತಾ ಅವರು ನಡೆಸಿದ ಸಂವಾದ ಗೋಷ್ಠಿಯು ಈ ಸಮ್ಮೇಳನದ ಪ್ರಮುಖ ಅಂಶವಾಗಿತ್ತು. ಗೋಷ್ಠಿಯಲ್ಲಿ ವೆಡ್ಡಿಸ್ ಫೌಂಡೇಷನ್‌ನ ಸಿಇಒ ಮುರುಗನ್ ವಾಸುದೇವನ್, ತಮಾರಾ ಲೈಸರ್ ಎಕ್ಸ್‌ಪೀರಿಯನ್ಸ್‌ನ ಸಿಇಒ ಮತ್ತು ನಿರ್ದೇಶಕಕಾದ ಶ್ರುತಿ ಶಿಬುಲಾಲ್, ಜನಾಗ್ರಹ ಸಿಇಒ ಶ್ರೀಕಾಂತ್ ವಿಶ್ವನಾಥನ್ ಮತ್ತು ಗಿವ್ ಇಂಡಿಯಾದ ಸಿಇಒ ಸುಮಿತ್ ತಯಲ್ ಅವರು ಪಾಲ್ಗೊಂಡಿದ್ದರು.

ಕನ್ವರ್ಜನ್ಸ್ ಫೌಂಡೇಷನ್‌ನ ಕಾರ್ಯನಿರ್ವಾಹಕ ಪಾಲುದಾರ ಬಿಕ್ರಮ ದೌಲೆತ್ ಸಿಂಗ್ ಮಾತನಾಡಿ, ʼವ್ಯವಸ್ಥಿತ ಪ್ರಭಾವಕ್ಕಾಗಿ ಹೂಡಿಕೆಯನ್ನು ಮುಕ್ತವಾಗಿ ಬಳಸುವ ತುರ್ತು ಅಗತ್ಯ ಒತ್ತಿಹೇಳುತ್ತಾ, “ವ್ಯವಸ್ಥೆ ಬದಲಾವಣೆ ವಿಧಾನವು ಪರಿವರ್ತಕ ಬದಲಾವಣೆಗೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಹೂಡಿಕೆಯ ಮೇಲೆ ಗರಿಷ್ಠ ಲಾಭ ಬಯಸುವ ದಾನಿಗಳು ಅಳೆಯಬಹುದಾದ ಮತ್ತು ಸುಸ್ಥಿರ ಫಲಿತಾಂಶಗಳನ್ನು ಸಾಧಿಸಲು ಸರ್ಕಾರಗಳ ಜೊತೆಗೆ ಸಹಕರಿಸುವ ಸಂಸ್ಥೆಗಳನ್ನು ಬೆಂಬಲಿಸಲು ಆದ್ಯತೆ ನೀಡಬೇಕು. ದಾನಿಗಳು ಮತ್ತು ವ್ಯವಸ್ಥೆಯ ಸಮನ್ವಯಕಾರರು ತಮ್ಮ ಸಾಮೂಹಿಕ ಪ್ರಭಾವವನ್ನು ಗರಿಷ್ಠಗೊಳಿಸಲು ಯಾವ ಪ್ರಯತ್ನಗಳನ್ನು ಮಾಡಬೇಕು ಎಂಬುದನ್ನು ಕಲಿಯಲು, ಪ್ರತಿಬಿಂಬಿಸಲು ಮತ್ತು ನಿರಂತರವಾಗಿ ಜೋಡಿಸಲು ಇದು ನಿರ್ಣಾಯಕವಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Paris Olympics 2024 : ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ “ಇಂಡಿಯಾ ಹೌಸ್”

ಪುಸ್ತಕ ಬಿಡುಗಡೆ

ಸಮ್ಮೇಳನದಲ್ಲಿ ಸಂಜಯ್ ಪುರೋಹಿತ್ ಅವರ ಪುಸ್ತಕ, ʼಥಿಂಕ್ ಬುಕ್‌ ಸರಣಿಯ ಮೂರನೇ ಕಂತು, ʼಥಿಂಕ್ ಸಸ್ಟೇನ್ʼ ಬಿಡುಗಡೆ ಮಾಡಲಾಯಿತು. ಈ ಪುಸ್ತಕವನ್ನು ರೋಹಿಣಿ ನಿಲೇಕಣಿ ಅವರು ಬಿಡುಗಡೆ ಮಾಡಿದರು. ಜೊತೆಗೆ ಥಿಂಕ್ ಸ್ಕೇಲ್ ಮತ್ತು ಥಿಂಕ್ ಸ್ಪೀಡ್, ಥಿಂಕ್ ಸಸ್ಟೇನ್ ಪರಿಣಾಮಕಾರಿ ಪರಿವರ್ತನೆಗೆ ಕಾರಣವಾಗುವ ಬದಲಾವಣೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಈ ಥಿಂಕ್ ಬುಕ್‌ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಸಾಧಿಸಲು ನೆರವಾಗಲಿವೆ.

ಲೇಖಕ, ಸಿಇಒ ಮತ್ತು ಸೆಂಟರ್ ಫಾರ್ ಎಕ್ಸ್‌ಪೋನೆನ್ಷಿಯಲ್ ಚೇಂಜ್‌ನ ಮುಖ್ಯ ಮೇಲ್ವಿಚಾರಕ ಸಂಜಯ್ ಪುರೋಹಿತ್ ಅವರು ಸಮ್ಮೇಳನದಲ್ಲಿ ಮಾತನಾಡಿ “ಇದು ನವೀನ ಸ್ಥಳವಾಗಿದ್ದು, ಗಮನಾರ್ಹ ಬದಲಾವಣೆಯ ಪ್ರಯಾಣ ಕಾರ್ಯಗತಗೊಳಿಸಲು ವ್ಯವಸ್ಥೆಯ ಸಮನ್ವಯಕಾರರು, ವೈವಿಧ್ಯಮಯ ಸಶಕ್ತಗೊಳಿಸುವವರು ಮತ್ತು ಪ್ರಭಾವಶಾಲಿಗಳನ್ನು ಒಗ್ಗೂಡಿಸಲಿದೆ. ಈ ಬದಲಾವಣೆಯ ಈ ಅಲೆಗಳನ್ನು ಪ್ರೇರೇಪಿಸಲು ನಾವೆಲ್ಲರೂ ಒಗ್ಗೂಡಬೇಕಾಗಿದೆ ಎಂದು ಹೇಳಿದರು.

Exit mobile version