Site icon Vistara News

Translation Workshop: ಓದುವ ಸಂಸ್ಕೃತಿ ಹರಡಬೇಕು: ಸಾಹಿತಿ ಎಂ. ಅಬ್ದುಲ್ ರೆಹಮಾನ್ ಪಾಷಾ

Translation Workshop

ಬೆಂಗಳೂರು: ಸಂವಿಧಾನ ಅರಿವಿಗೆ ಇರುವ ಬಾಗಿಲು. ಅರಿವು ಬದಲಾವಣೆಗೆ ಇರುವ ದಾರಿದೀಪ. ಹಾಗಾಗಿ ಓದುವ ಸಂಸ್ಕೃತಿಯನ್ನು ಹರಡಬೇಕಾದ ತುರ್ತು ನಮ್ಮ ಮುಂದಿದೆ ಎಂದು ಹಿರಿಯ ಸಾಹಿತಿ, ಭಾಷಾಂತರಕಾರ ಎಂ. ಅಬ್ದುಲ್ ರೆಹಮಾನ್ ಪಾಷಾ ಅವರು ಅಭಿಪ್ರಾಯಪಟ್ಟರು.

‘ ಪರಾಗ್ ‘ ಸಂಸ್ಥೆ ಹಾಗೂ ‘ ಬಹುರೂಪಿ ‘ ಪ್ರಕಾಶನದಿಂದ ಜ. 26ರಿಂದ 28ರವರೆಗೆ ಹಮ್ಮಿಕೊಂಡಿರುವ ‘ಬಿಂಬ ಪ್ರತಿಬಿಂಬ’ ಮೂರು ದಿನಗಳ ಮಕ್ಕಳ ಕೃತಿಗಳ ಭಾಷಾಂತರ ಕಲಿಕಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಂವಿಧಾನ ಜನರಿಗೆ ನೀಡಿರುವ ಭರವಸೆ ದೊಡ್ಡದು. ಈ ಭರವಸೆಯನ್ನು ಉಳಿಸಿಕೊಳ್ಳಬೇಕಾದ ತುರ್ತು ಎಲ್ಲರ ಮುಂದಿದೆ ಎಂದು ಪಾಷಾ ಅಭಿಪ್ರಾಯಪಟ್ಟರು.

ಪರಾಗ್ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮಿ ಕರುಣಾಕರನ್ ಅವರು ಮಾತನಾಡಿ, ಇಂದು ಸಂವಿಧಾನದ ಆಶಯವನ್ನು ಎಲ್ಲರೆಡೆಗೆ ಕೊಂಡೊಯ್ಯಬೇಕಾದ ತುರ್ತು ಇದೆ. ಪರಾಗ್ ಮಕ್ಕಳ ಕೃತಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದರು.

ಇದನ್ನೂ ಓದಿ | Translation Workshop: ʼಬಿಂಬ ಪ್ರತಿಬಿಂಬʼ ಅನುವಾದ ಕಲಿಕಾ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ

ಅಂಬೇಡ್ಕರ್ ಅವರ ಕಾಲಾನುಕಾಲದ ಹೇಳಿಕೆಗಳ ಮೂಲಕ ಅವರ ಮಹತ್ವವನ್ನು ಮನಗಾಣಿಸುವ ಪ್ರಯತ್ನವನ್ನು ಎಲ್ಲರಿಗಾಗಿ ಅಂಬೇಡ್ಕರ್ ಕೃತಿಯ ಮೂಲಕ ಮಾಡಲಾಗಿದೆ ಎಂದು ಬಹುರೂಪಿ ಸಹ ಸಂಸ್ಥಾಪಕರಾದ ಶ್ರೀಜಾ ವಿ. ಎನ್. ತಿಳಿಸಿದರು.

ಇದನ್ನೂ ಓದಿ | Pampa Award : ಪರಿಸರದ ನಾಡಿಮಿಡಿತ ಅರಿತ ನಾ. ಡಿಸೋಜ ಮುಡಿಗೆ ಪಂಪ ಪ್ರಶಸ್ತಿ ಕಿರೀಟ

ಸಂವಿಧಾನದ ದಿನದ ಅಂಗವಾಗಿ ಸಂವಿಧಾನದ ಪೀಠಿಕೆಯನ್ನು ಅನಾವರಣ ಮಾಡಿ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳಲಾಯಿತು. ಇದೇ ವೇಳೆ ಬಹುರೂಪಿ ಪ್ರಕಟಿಸಿರುವ ಗುಜ್ಜಾರ್ ಅವರ ‘ಎಲ್ಲರಿಗಾಗಿ ಅಂಬೇಡ್ಕರ್ ‘ ಸಚಿತ್ರ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಮಕ್ಕಳ ಸಾಹಿತ್ಯ ತಜ್ಞರಾದ ತೇಜಸ್ವಿ ಶಿವಾನಂದ್, ಪರಾಗ್‌ನ ತುಹಿನಾ ಶರ್ಮ, ವಿವೇಕ್, ಬಹುರೂಪಿಯ ಜಿ ಎನ್ ಮೋಹನ್ ಉಪಸ್ಥಿತರಿದ್ದರು.

Exit mobile version