Site icon Vistara News

Vikrant Rona | ಪ್ರೀ ರಿಲೀಸ್​ ಇವೆಂಟ್‌ಗೆ ಸಿದ್ಧವಾದ ವಿಕ್ರಾಂತ್‌ ರೋಣ

ಬೆಂಗಳೂರು: ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿರುವ ಅಭಿನಯ ಚಕ್ರವರ್ತಿ ಸುದೀಪ್‌ ಅವರ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್​ ರೋಣ’ [Vikrant Rona] ಪ್ರೀ ರಿಲೀಸ್ ಇವೆಂಟ್‌ಗೆ ಅದ್ಧೂರಿ ವೇದಿಕೆ ಸಿದ್ಧವಾಗಿದ್ದು, ಇಲ್ಲಿನ ಲುಲು ಮಾಲ್‌ನಲ್ಲಿ ಸಂಜೆ ೬.೩೦ಕ್ಕೆ ನಡೆಯಲಿದೆ.

ಜುಲೈ 28ರಂದು ದೇಶ ಸೇರಿದಂತೆ ವಿದೇಶಗಳಲ್ಲೂ ‘ವಿಕ್ರಾಂತ್​ ರೋಣ’ ತೆರೆಕಾಣಲಿದೆ. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ವಿಶ್ವಾದ್ಯಂತ 3500 ಸ್ಕ್ರೀನ್‌, ಕರ್ನಾಟಕದಲ್ಲಿ 425ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ವಿಕ್ರಾಂತ್ ರೋಣ ರಿಲೀಸ್‌ ಆಗುತ್ತಿದೆ. ಬಾಲಿವುಡ್‌ನಲ್ಲಿ 900 ಥಿಯೇಟರ್, ವಿದೇಶದಲ್ಲಿ 800 ಸ್ಕ್ರೀನ್ ಹಾಗೂ ಟಾಲಿವುಡ್‌ನಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

ವಿಕ್ರಾಂತ್ ರೋಣ ಪ್ರೀ ರಿಲೀಸ್ ಇವೆಂಟ್‌ಗೆ ಅದ್ಧೂರಿ ವೇದಿಕೆ ಸಿದ್ಧವಾಗಿದ್ದು, ಮಂಗಳವಾರ ಸಂಜೆ ಲುಲು ಮಾಲ್‌ನಲ್ಲಿ ವಿಕ್ರಾಂತ್ ರೋಣ ಇವೆಂಟ್ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಪೇಂದ್ರ ಆಗಮಿಸಲಿದ್ದಾರೆ. ಈಗಾಗಲೇ ಹೈದರಾಬಾದ್‌ ಮತ್ತು ಮುಂಬೈ ಮಹಾನಗರದಲ್ಲಿ ವಿಕ್ರಾಂತ್‌ ರೋಣ ಪ್ರೀ ರಿಲೀಸ್‌ ಇವೆಂಟ್‌ ನಡೆದಿದೆ.

ಇದನ್ನೂ ಓದಿ | Vikrant Rona | ಮಾಲೂರಿನಲ್ಲಿ ಮುಗಿಲು ಮುಟ್ಟಿದೆ ಕಿಚ್ಚನ ಅಭಿಮಾನಿಗಳ ಸಂಭ್ರಮ

Exit mobile version