ಬೆಂಗಳೂರು: ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ರಚನೆಯ ʼಟಿಪ್ಪು ನಿಜಕನಸುಗಳುʼ ಪುಸ್ತಕ ಮಾರಾಟಕ್ಕಿದ್ದ ತಾತ್ಕಾಲಿಕ ನಿರ್ಬಂಧ ತೆರವಾಗಿದೆ. ಪುಸ್ತಕಕ್ಕಿದ್ದ (Tippu Nija Kanasugalu) ತಾತ್ಕಾಲಿಕ ನಿರ್ಬಂಧ ಆದೇಶವನ್ನು ರದ್ದು ಮಾಡಿ ಬೆಂಗಳೂರಿನ 14ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ಗುರುವಾರ ತೀರ್ಪು ನೀಡಿದ್ದು, ಜತೆಗೆ ಮಧ್ಯಂತರ ಆದೇಶ ನೀಡಬೇಕೆಂದು ರಫೀಉಲ್ಲ ಎಂಬುವವರು ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದೆ.
ರಫೀಉಲ್ಲ ಬಿ.ಎಸ್ ಎಂಬುವವರು ʼಟಿಪ್ಪು ನಿಜಕನಸುಗಳುʼ ಪುಸ್ತಕ ಮಾರಾಟಕ್ಕೆ ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅದರಂತೆ ನವೆಂಬರ್ 21ರಂದು ಪುಸ್ತಕ ಮಾರಾಟಕ್ಕೆ ನ್ಯಾಯಾಲಯ ನಿರ್ಬಂಧ ಹೇರಿ ತಾತ್ಕಾಲಿಕ ಆದೇಶ ಹೊರಡಿಸಿತ್ತು. ಇದೀಗ ಪುಸ್ತಕ ಮಾರಾಟಕ್ಕಿದ್ದ ತಾತ್ಕಾಲಿಕ ಆದೇಶವನ್ನು ನ್ಯಾಯಾಲಯ ರದ್ದು ಪಡಿಸಿದ್ದು, ಅರ್ಜಿಯ ಮುಂದಿನ ವಿಚಾರಣೆಯನ್ನು ಜ.೨೪ಕ್ಕೆ ಮುಂದೂಡಲಾಗಿದೆ.
ಈ ಹಿಂದೆ ಆನ್‌ಲೈನ್ ಸೇರಿ ಎಲ್ಲಿಯೂ ಮಾರಾಟ ಮಾಡದಂತೆ ನ್ಯಾಯಾಲಯ ತಡೆ ನೀಡಿತ್ತು. ಪುಸ್ತಕದಲ್ಲಿ ಆಜಾನ್ ಅನ್ನು ಅವಮಾನಿಸಲಾಗಿದೆ ಹಾಗೂ ಅನೇಕ ತಪ್ಪು ಮಾಹಿತಿ ನೀಡಲಾಗಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತದೆ ಎಂದು ಅರ್ಜಿದಾರರು ದೂರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಕೃತಿಯ ಲೇಖಕ ಅಡ್ಡಂಡ ಸಿ ಕಾರ್ಯಪ್ಪ ಹಾಗೂ ಪ್ರಕಾಶಕರಿಗೆ ತುರ್ತು ನೋಟಿಸ್ ಜಾರಿ ಮಾಡಿತ್ತು.
ಇದನ್ನೂ ಓದಿ | Border Dispute | ರಾಜ್ಯದ ನೀತಿ-ನಿಲುವನ್ನು ಸ್ಪಷ್ಟಪಡಿಸಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ