Site icon Vistara News

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ವಿಶ್ವಕೌಶಲ್ಯ ಸ್ಪರ್ಧೆ ವಿಜೇತರಿಗೆ ಸನ್ಮಾನ

Toyota Kirloskar Motor World Skills Competition Winners felicitated

ಬೆಂಗಳೂರು: ಸ್ಕಿಲ್ ಇಂಡಿಯಾ ಮಿಷನ್‌ಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನೀಡಿದ ಕೊಡುಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಟೊಯೊಟಾ ಕಿರ್ಲೋಸ್ಕರ್ ರಚಿಸಿದ ಸಂಸ್ಥೆಯಾದ ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ (ಟಿಟಿಟಿಐ) ಮೂವರು ಟೀಮ್ ಮೆಂಬರ್‌‌ಗಳನ್ನು 2022ರ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಮಾಡಿದ ಸಾಧನೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದು ಸನ್ಮಾನಿಸಿತು.

ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು; ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಟೊಯೋಟಾದ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಸಂವಹನ ಅಧಿಕಾರಿ ಸುದೀಪ್ ದಳವಿ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀ ಸ್ವಪ್ನೇಶ್ ಆರ್. ಮರು, ಉಪಾಧ್ಯಕ್ಷರಾದ ಜಿ ಶಂಕರ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹಣಕಾಸು ಮತ್ತು ಆಡಳಿತದ ತಾಂತ್ರಿಕ ಸಲಹೆಗಾರ ಹಿರೋಕಿ ಆಂಡೋ ಅವರ ಉಪಸ್ಥಿತಿಯಲ್ಲಿ ವಿಜೇತರಿಗೆ ಸನ್ಮಾನಿಸಿದರು.

ಭಾರತೀಯ ವಾಹನ ಉದ್ಯಮಕ್ಕಾಗಿ ವಿಶ್ವದರ್ಜೆಯ ನುರಿತ ಕೆಲಸಗಾರರನ್ನು ಅಭಿವೃದ್ಧಿಪಡಿಸುವ ಕಂಪನಿಯ ಬದ್ಧತೆಯನ್ನು ಟಿಟಿಟಿಐ ಸಂಕೇತಿಸುತ್ತದೆ. ಟೀಮ್ ಮೆಂಬರ್‍‌ಗಳಾದ ಶ್ರೀ ಲಿಖಿತ್ ಕುಮಾರ್ ಯೆಮ್ಮೋಡಿ ಪ್ರಕಾಶ್, ಶ್ರೀ ಕಾರ್ತಿಕ್ ಗೌಡ ಸೀಹಳ್ಳಿ ನಾಗರಾಜು ಮತ್ತು ಶ್ರೀ ಅಖಿಲೇಶ್ ನರಸಿಂಹಮೂರ್ತಿ ಅವರು 2022 ರ ವಿಶ್ವ ಕೌಶಲ್ಯ ಸ್ಪರ್ಧೆಯಿಂದ ಪದಕಗಳನ್ನು ಗೆಲ್ಲುವ ಮೂಲಕ ಭಾರತ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಅಖಿಲೇಶ್ ಮತ್ತು ಕಾರ್ತಿಕ್ ಜರ್ಮನಿಯಲ್ಲಿ ಮೆಕಾಟ್ರಾನಿಕ್ಸ್ ಕೌಶಲ್ಯಕ್ಕಾಗಿ ಕಂಚಿನ ಪದಕ ಗೆದ್ದಿದ್ದರು. ಲಿಖಿತ್ ಸ್ವಿಟ್ಜರ್ಲೆಂಡ್ ನಲ್ಲಿ ಪ್ರೊಟೋಟೈಪ್ ಮಾಡೆಲಿಂಗ್ ಕೌಶಲ್ಯಕ್ಕಾಗಿ ಕಂಚಿನ ಪದಕ ಗೆದ್ದಿದ್ದಾರೆ.

ತಂಡದ ಸಾಧನೆಗಳ ಬಗ್ಗೆ ಮಾತನಾಡಿದ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಸಂವಹನ ಅಧಿಕಾರಿ ಸುದೀಪ್ ದಳವಿ ಮಾತನಾಡಿ, ವಿಶ್ವ ಕೌಶಲ್ಯ ಸ್ಪರ್ಧೆಯಂತಹ ಮಹತ್ವಾಕಾಂಕ್ಷೆಯ ವೇದಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದಕ್ಕಾಗಿ ಲಿಖಿತ್, ಕಾರ್ತಿಕ್ ಮತ್ತು ಅಖಿಲೇಶ್ ಅವರ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ ಎಂದುರ.

ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ವಪ್ನೇಶ್ ಆರ್ ಮರು ಅವರು ಮಾತನಾಡಿ, ವಿಜೇತರ ಸಾಧನೆಯ ಬಗ್ಗೆ ನಾವು ವಿನಮ್ರರಾಗಿದ್ದೇವೆ, ಏಕೆಂದರೆ ಅವರ ಯಶಸ್ಸು ಟಿಟಿಟಿಐನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಮತ್ತು ನಾವು ತಲುಪಿಸುವ ತಾಂತ್ರಿಕ ಕೌಶಲ್ಯಗಳು ಮತ್ತು ಉತ್ಪನ್ನಗಳ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದರು.

ಇದನ್ನೂ ಓದಿ: Karnataka Election: `ಸಿದ್ದರಾಮಯ್ಯರನ್ನು ಹೊಡೆದು ಹಾಕಿ’ ಹೇಳಿಕೆ ವಿರುದ್ಧ ಅಶ್ವತ್ಥನಾರಾಯಣ ಮೇಲೆ 2 ಕೇಸ್‌; ಪ್ರತಿಭಟನೆ

ಸಚಿವ ಅಶ್ವತ್ಥ ನಾರಾಯಣ ಅವರು ಮಾತನಾಡಿ, ನಾವು ಯಾವಾಗಲೂ ಯುವಕರ ಶಕ್ತಿ ಮತ್ತು ಆರಂಭಿಕ ಹಂತದಲ್ಲಿ ಅವರನ್ನು ಕೌಶಲ್ಯಗೊಳಿಸುವ ಪ್ರಾಮುಖ್ಯತೆಯನ್ನು ನಂಬುತ್ತೇವೆ. ಇದನ್ನು ಗಮನದಲ್ಲಿಟ್ಟುಕೊಂಡು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯಂತಹ ಉಪಕ್ರಮಗಳ ಮೂಲಕ ಕರ್ನಾಟಕದಾದ್ಯಂತ ಯುವಕರಿಗೆ ಕೌಶಲ್ಯ ಒದಗಿಸಲು ಪ್ರೋತ್ಸಾಹ ನೀಡುತ್ತೇವೆ ಎಂದರು.

Exit mobile version