Site icon Vistara News

ಅಪಘಾತದಲ್ಲಿ ತಂದೆ-ತಾಯಿ ಸಾವು, ಅನಾಥ ಹೆಣ್ಣು ಮಕ್ಕಳಿಗೆ ಪೊಲೀಸರ ನೆರವು

ಬೆಂಗಳೂರು: ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಹೆಣ್ಣು ಮಕ್ಕಳ ನೆರವಿಗೆ ನಿಂತ ಟ್ರಾಫಿಕ್ ವಿಭಾಗದ ಡಿಸಿಪಿ ಮತ್ತು ಇನ್ಸ್‌ಪೆಕ್ಟರ್ ಇತರರಿಗೆ ಮಾದರಿಯಾಗಿದ್ದಾರೆ.

ನಾಗರಬಾವಿ ಸರ್ಕಲ್ ಬಳಿ ಜು. 9ರಂದು ಬೈಕ್‍ನಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ವಿಜಯಕಲಾ ಎಂಬ ಮಹಿಳೆ ಮೃತಪಟ್ಟಿದರು. ಗುರುವಾರ ಅವರ ಪತಿ ಯೋಗೇಂದ್ರ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪ್ಪ-ಅಮ್ಮನನ್ನು ಕಳೆದುಕೊಂಡು ಕಂಗಾಲಾಗಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ಬ್ಯಾಟರಾಯನಪುರ ಮಹಿಳಾ ಇನ್ಸ್ ಪೆಕ್ಟರ್ ರೂಪಾ ಹಡಗಲಿ ನೆರವಾಗಿದ್ದಾರೆ.

ಯೋಗೇಂದ್ರರನ್ನು ನಾಗರಬಾವಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ 5 ಲಕ್ಷ 72 ಸಾವಿರ ರೂ. ಬಿಲ್ ಆಗಿತ್ತು. ಆದರೆ ಪೊಷಕರನ್ನ ಕಳೆದುಕೊಂಡು ಅನಾಥರಾಗಿದ್ದ ಹೆಣ್ಣು ಮಕ್ಕಳಿಬ್ಬರು ಈ ಬಿಲ್‌ ಕಟ್ಟಲು ಸಾಧ್ಯ ಇರಲಿಲ್ಲ. ಸಂಬಂಧಿಕರ ಬಳಿಯೂ ಅಷ್ಟು ಹಣವಿಲ್ಲದೆ ಪರದಾಡುತ್ತಿದ್ದರು.

ಈ ವೇಳೆ ಪಶ್ಚಿಮ ಸಂಚಾರ ವಿಭಾಗ ಡಿಸಿಪಿ ಕುಲ್‌ದೀಪ್ ಜೈನ್ ಅವರು ಬ್ಯಾಟಯಪುರ ಸಂಚಾರ ಇನ್ಸ್ ಪೆಕ್ಟರ್ ರೂಪ ಹಡಗಲಿಗೆ ಈ ಬಗ್ಗೆ ತಿಳಿಸಿ ನೆರವು ನೀಡುವಂತೆ ಸೂಚಿಸಿದ್ದರು. ರೂಪ ಅವರು ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆ ಆಡಳಿತ ಮಂಡಳಿ ಜತೆ ಮಾತನಾಡಿ ಬಿಲ್ ಮೊತ್ತ ಕ್ಲಿಯರ್‌ ಮಾಡಿದ್ದಾರೆ. ರೂಪ ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ| ಸಾವಿನಲ್ಲೂ ಒಂದಾದ ವೃದ್ಧ ದಂಪತಿ, ಪತಿಯನ್ನೇ ಅನುಸರಿಸಿದ ಪತ್ನಿ

Exit mobile version