ಬೆಂಗಳೂರು: ಜುಲೈ 25ರಿಂದ ರಾಜಾಜಿನಗರ ಬಳಿ ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ರಾಜಾಜಿನಗರ 1ನೇ ಬ್ಲಾಕ್‌ನಿಂದ ಡಾ.ರಾಜ್ ಕುಮಾರ್ ರಸ್ತೆಯ 10ನೇ ಕ್ರಾಸ್‌ವರೆಗೆ ವಾಹನಗಳ ಸಂಚಾಕ್ಕೆ ನಿರ್ಬಂಧ (Traffic Restrictions) ವಿಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ವಿಭಾಗ ತಿಳಿಸಿದೆ.
ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಕಾಮಗಾರಿ ಮುಕ್ತಾಯವಾಗುವವರೆಗೂ ರಾಜಾಜಿನಗರ 1ನೇ ಬ್ಲಾಕ್‌ನಿಂದ ಡಾ.ರಾಜ್ ಕುಮಾರ್ ರಸ್ತೆಯ 10ನೇ ಕ್ರಾಸ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
- ಇಸ್ಕಾನ್ ಎಂಟ್ರಿ ಕಡೆಯಿಂದ ಬರುವ ವಾಹನಗಳು ನೇರವಾಗಿ ಸ್ಟಾರ್ ಸರ್ಕಲ್ (ಮೋದಿ ಬ್ರಿಡ್ಜ್) ಎಡ ತಿರುವು ಮೂಲಕ ನವರಂಗ್ ವೃತ್ತದ ಬಳಿ ಎಡ ತಿರುವು ಪಡೆದು ಡಾ.ರಾಜ್ ಕುಮಾರ್ ರಸ್ತೆ 10ನೇ ಕ್ರಾಸ್ ಕಡೆಗೆ ಸಂಚರಿಸಬಹುದಾಗಿದೆ.
- ಮಹಾಲಕ್ಷ್ಮಿ ಲೇಔಟ್ ಕೆಳ ಭಾಗದಿಂದ ಸಂಚರಿಸುವ ವಾಹನಗಳು ಬಲ ತಿರುವು ಪಡೆದು ಸ್ಟಾರ್ ಸರ್ಕಲ್ (ಮೋದಿ ಬ್ರಿಡ್) ಎಡ ತಿರುವು ಮೂಲಕ ನವರಂಗ್ ವೃತ್ತದ ಬಳಿ ಎಡ ತಿರುವು ಪಡೆದು ಡಾ.ರಾಜ್ ಕುಮಾರ್ ರಸ್ತೆ 10ನೇ ಕ್ರಾಸ್ ಕಡೆಗೆ ಸಂಚರಿಸಬಹುದಾಗಿದೆ.
- ಮಹಾಲಕ್ಷ್ಮಿ ಲೇಔಟ್ ಕೆಳ ಭಾಗದಿಂದ ಸಂಚರಿಸುವ ವಾಹನಗಳು ಎಡ ತಿರುವು ಪಡೆದು ಜಿಎಸ್ಎಫ್ ವೃತ್ತದ ಮೂಲಕ ಡಾ.ರಾಜ್ ಕುಮಾರ್ ರಸ್ತೆ 10 ನೇ ಕ್ರಾಸ್ ಕಡೆಗೆ ಸಂಚರಿಸಬಹುದಾಗಿದೆ.
- ರಾಜಾಜಿನಗರ ಮೆಟ್ರೋ ಸ್ಟೇಷನ್ ಕಡೆಯಿಂದ ಸಂಚರಿಸುವ ವಾಹನಗಳು ರಾಜಾಜಿನಗರ 1ನೇ ಬ್ಲಾಕ್ ಜಂಕ್ಷನ್ನಲ್ಲಿ ಯು ಟರ್ನ್ ಪಡೆದು ಸ್ಟಾರ್ ಸರ್ಕಲ್ (ಮೋದಿ ಬ್ರಿಡ್ಜ್) ಎಡ ತಿರುವು ಮೂಲಕ ನವರಂಗ್ ವೃತ್ತದ ಬಳಿ ಎಡ ತಿರುವು ಪಡೆದು ಡಾ.ರಾಜ್ಕುಮಾರ್ 10 ನೇ ಕ್ರಾಸ್ ಕಡೆಗೆ ಸಂಚರಿಸಬಹುದಾಗಿದೆ.
- ರಾಜಾಜಿನಗರ ಮೆಟ್ರೋ ಸ್ಟೇಷನ್ ಕಡೆಯಿಂದ ಸಂಚರಿಸುವ ವಾಹನಗಳು ನೇರವಾಗಿ ಜಿಎಸ್ಎಫ್ ಮುಖಾಂತರ ಡಾ.ರಾಜ್ ಕುಮಾರ್ 10ನೇ ಕ್ರಾಸ್ ಕಡೆಗೆ ಸಂಚರಿಸಬಹುದಾಗಿದೆ. ಸುಗಮ ಸಂಚಾರದ ಅಡಚಣೆಗೆ ಸಾರ್ವಜನಿಕರು ಸಹಕರಿಸಲು ಮಲ್ಲೇಶ್ವರಂ ಸಂಚಾರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.
ಜು.25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರು: ನಗರದ 66/11 ಕೆ.ವಿ ಎನ್.ಜಿ.ಇ.ಎಫ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಜು.25ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ಇನ್ನೂ ಓದಿ | Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ನಗರದ ಎಸ್‌ಎಂವಿಬಿ ರೈಲು ನಿಲ್ದಾಣ, ಇಂದಿರಾನಗರ 1ನೇ ಹಂತ, ಎಚ್‌ಎಎಲ್ 2ನೇ ಹಂತ, ಹಲಸೂರು, ಹಳೆ ಮದ್ರಾಸ್ ರಸ್ತೆ, ಬೆನ್ನಿಗಾನಹಳ್ಳಿ, ಎ.ನಾರಾಯಣಪುರ, ಬಿ. ನಾರಾಯಣಪುರ, ಕಗ್ಗದಾಸಪುರ, ಆಕಾಶ ನಗರ, ಪೈ ಲೇಔಟ್, ಬೈರಸಂದ್ರ, ಸಿ.ವಿ. ರಾಮನಗರ, ಎನ್‌ಜಿಇಎಫ್ ಲೇಔಟ್‌ನ ಪೂರ್ವ, ಸದಾನಂದನಗರ, ಕಸ್ತೂರಿ ನಗರ, ಭುವನೇಶ್ವರಿ ನಗರ, ಹೊಯ್ಸಳ ನಗರ, ಮುನೇಶ್ವರ ನಗರ, ಬಿಡಿಎ ಲೇಔಟ್, ಮುನಿನಂಜಪ್ಪ ಲೇಔಟ್, ದಯಾನಂದ ಲೇಔಟ್, ಕೆಜಿ ಪುರ, ಅಬ್ಬಯ್ಯ ರೆಡ್ಡಿ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್, ನಾಗವಾರಪಾಳ್ಯ, ವರ್ತೂರು ರಸ್ತೆ, ಕೆ.ಆರ್. ರಸ್ತೆ. ಜೋಗುಪಾಳ್ಯ ಆರ್ಟಿಲರಿ ರಸ್ತೆ, ಕೇಂಬ್ರಿಡ್ಜ್ ಲೇಔಟ್, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಮಿಲೇನಿಯಾ ಟವರ್ಸ್, ಹಲಸೂರು ರಸ್ತೆ, ಸಿ.ಎಂ.ಎಚ್ ರಸ್ತೆ, ಇಂದಿರಾನಗರ 2ನೇ ಹಂತ, ಇಂದಿರಾನಗರ 1ನೇ ಹಂತ, ಕೃಷ್ಣ ದೇವಸ್ಥಾನ ರಸ್ತೆ, ಡಿಫೆನ್ಸ್ ಕಾಲೋನಿ, 515 ಕಾಲೋನಿ, ನ್ಯೂ ಬೈಯಪ್ಪನಹಳ್ಳಿ, ಮೈಚಪಾಳ್ಯ, ಕದಿರೆ ರಸ್ತೆ, ಇಂದಿರಾನಗರ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಕೃಷ್ಣ ದೇವಸ್ಥಾನ ರಸ್ತೆ, ಇಂದಿರಾನಗರ ಕ್ಲಬ್, ಕೆಇಬಿ ಕ್ವಾರ್ಟರ‍್ಸ್, ದೂಪನಹಳ್ಳಿ, ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, 12ನೇ ಮುಖ್ಯ, 11ನೇ ಮುಖ್ಯ, ಕೆಪಿಟಿಸಿಎಲ್ ಕ್ವಾರ್ಟರ‍್ಸ್, ಇಎಸ್ಐ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.