Site icon Vistara News

Traffic Violation | ಟ್ರಾಫಿಕ್‌ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ರೀಲ್ಸ್‌ ಸ್ಟಾರ್‌ಗಳ ಹೊಸ ಪ್ಲ್ಯಾನ್‌

Traffic Violation

ಬೆಂಗಳೂರು: ಹೆಲ್ಮೆಟ್‌ ಹಾಕದೆ ಬೈಕ್‌ ಓಡಿಸುತ್ತಾ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ (Traffic Violation) ಮಾಡಿ ಬೇಕಾಬಿಟ್ಟಿ ರೀಲ್ಸ್‌ ಮಾಡುವವರ ಮೇಲೆ ಟ್ರಾಫಿಕ್‌ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಹೆಲ್ಮೆಟ್ ಧರಿಸದೇ ರೀಲ್ಸ್ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದವರ ವಾಹನದ ಮೇಲೆ ದಂಡ ವಿಧಿಸಿದ್ದರು. ಈಗ ದಂಡದಿಂದ ತಪ್ಪಿಸಿಕೊಳ್ಳಲು ರೀಲ್ಸ್‌ ಸ್ಟಾರ್‌ಗಳು ಹೊಸ ಪ್ಲ್ಯಾನ್‌ಗೆ ಮುಂದಾಗಿದ್ದಾರೆ.

ಹೆಲ್ಮೆಟ್‌ ಧರಿಸದ ರೀಲ್ಸ್‌ ಸ್ಟಾರ್‌ಗಳು ಬೈಕ್‌ನ ನಂಬರ್‌ ಪ್ಲೇಟ್‌ ಸರಿಯಾಗಿ ಕಾಣದಂತೆ ಮಸುಕು ಮಾಡುತ್ತಿದ್ದಾರೆ. ಬ್ಲರ್‌ ಮಾಡಿ ಆ ನಂತರ ತಾವು ಮಾಡಿದ ರೀಲ್ಸ್‌ ಅನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕುವ ಚಾಳಿ ಮುಂದುವರಿಸಿದ್ದಾರೆ. ಟ್ರಾಫಿಕ್‌ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಈ ರೀತಿ ಹೊಸ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ದಚ್ಚು ದಿವುಗೆ ದಂಡ ವಿಧಿಸಿದ್ದ ಟ್ರಾಫಿಕ್‌ ಪೊಲೀಸರು

ಈ ಹಿಂದೆ ಹೆಲ್ಮೆಟ್ ಇಲ್ಲದೆ ಬೈಕ್ ಬಳಸಿ ರೀಲ್ಸ್ ಮಾಡಿದವರಿಗೆ ಟ್ರಾಫಿಕ್‌ ಪೊಲೀಸರು ದಂಡ ವಿಧಿಸಿದ್ದರು. ದಚ್ಚು ದಿವು ಎಂಬ ಇ‌ನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹೆಲ್ಮೆಟ್ ಇಲ್ಲದೇ ರೀಲ್ಸ್ ಮಾಡಿದ್ದಕ್ಕೆ 17,500ರೂ. ದಂಡ ತೆರಬೇಕಾಯಿತು. ಇಷ್ಟಾದರೂ ಬುದ್ಧಿ ಕಲಿಯದ ಯುವಕರು ಬೈಕ್‌ನ ನಂಬರ್ ಪ್ಲೇಟ್ ಬ್ಲರ್ ಮಾಡಿ ರೀಲ್ಸ್ ಮಾಡಿ ಹಾಕುತ್ತಿದ್ದಾರೆ.

ಇದನ್ನೂ ಓದಿ | ಬೆಂಗಳೂರು ಟ್ರಾಫಿಕ್​ನಲ್ಲಿ ಸಿಲುಕಿದ್ದಾಗ ಹುಟ್ಟಿದ ಪ್ರೀತಿ; ಈತನ ಲವ್​ಸ್ಟೋರಿಗೆ ಸಾಕ್ಷಿಯಾದ ಫ್ಲೈಓವರ್​​​ದು ಬದಲಾಗದ ಸ್ಥಿತಿ !

Exit mobile version