ಬೆಂಗಳೂರು: ಸೇಲಂ ವಿಭಾಗದಲ್ಲಿ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವುದರಿಂದ ಕೆಲ ರೈಲುಗಳ ಮಾರ್ಗ ಬದಲಾವಣೆ (Train services) ಮಾಡಲು ದಕ್ಷಿಣ ರೈಲ್ವೆಯು ಸೂಚಿಸಿದೆ. ಹೀಗಾಗಿ ಜೂನ್ 05, 06 ಮತ್ತು 13 ರಂದು ಎರ್ನಾಕುಲಂನಿಂದ ಹೊರಡುವ ರೈಲು (ರೈಲು ಸಂಖ್ಯೆ 12678) ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಪೊದನೂರು, ಇರುಗೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಕೊಯಂಬತ್ತೂರ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಪೊದನೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯಾಗಲಿದೆ.
ಇನ್ನೂ ಜೂನ್ 05, 06 ಮತ್ತು 13 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12677 ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು ಪೊದನೂರು, ಇರುಗೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಕೊಯಂಬತ್ತೂರ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಮತ್ತು ಪೊದನೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯಾಗಲಿದೆ.
ಜೂನ್ 05, 12 ಮತ್ತು 19 ರಂದು ಎಸ್ಎಂವಿಟಿ ಬೆಂಗಳೂರಿನಿಂದ ಸಂಚರಿಸುವ ರೈಲು ಸಂಖ್ಯೆ 06084 ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 20 ನಿಮಿಷ ನಿಯಂತ್ರಿಸಲಾಗುತ್ತದೆ.
ಇದನ್ನೂ ಓದಿ: NEET UG Results 2024: ನೀಟ್ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ
ರೈಲುಗಳ ಮರು ವೇಳಾಪಟ್ಟಿ:
ಕನ ಸೊಲಿಮ್ – ಮಜೊರ್ಡಾ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ರೈಲುಗಳನ್ನು ಮರು ನಿಗದಿಪಡಿಸಲಾಗುವುದು.
1.ರೈಲು ಸಂಖ್ಯೆ 12779 ವಾಸ್ಕೋ-ಡ-ಗಾಮಾ – ಹಜರತ್ ನಿಜಾಮುದ್ದೀನ್ ಎಕ್‌ಪ್ರೆಸ್ ಜೂನ್ 10ರಂದು ವಾಸ್ಕೋ-ಡ-ಗಾಮಾದಿಂದ 2 ಗಂಟೆ (120 ನಿಮಿಷ) ತಡವಾಗಿ ಹೊರಡಲಿದೆ.
2.ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ – ಹೌಸ್‌ನಗರ ಎಕ್ಸ್ ಪ್ರೆಸ್ ಜೂನ್ 09ರಂದು ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು ವಾಸ್ಕೋ-ಡ-ಗಾಮಾದಲ್ಲಿ 1 ಗಂಟೆ 30 ನಿಮಿಷ (90 ನಿಮಿಷಗಳ) ತಡವಾಗಿ ಹೊರಡಲಿದೆ. ಜತೆಗೆ ಮಾರ್ಗದಲ್ಲಿ 1 ಗಂಟೆ 45 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ