ಬೆಂಗಳೂರು: ಬೆಂಗಳೂರು ವಿಭಾಗದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಬಸಂಪಲ್ಲಿ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದ ಕೆಲಸಗಳು ನಡೆಯುತ್ತಿದೆ. ಸುರಂಗ ಮಾರ್ಗಕ್ಕೆ ಸಂಬಂಧಿಸಿದಂತೆ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವು (Trains cancelled) ಸ್ಥಗಿತಗೊಳ್ಳಲಿದೆ.
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಮಾರ್ಗದಲ್ಲಿ ಕಾಮಗಾರಿ ನಡೆಯಲಿದ್ದು, ಒಟ್ಟು 18 ರೈಲುಗಳ ಸಂಚಾರ ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳುಗಳ ವಿವಿಧ ದಿನಾಂಕಗಳಂದು ರದ್ದಾಗಲಿದೆ. ಜತೆಗೆ ಮಾರ್ಗ ಬದಲಾವಣೆಯು ಆಗಲಿದೆ.
ಈ ರೈಲುಗಳ ಸಂಚಾರ ರದ್ದು
1) ಕೊಯಮತ್ತೂರು-ಹಜರತ್ ನಿಜಾಮುದ್ದೀನ್ ಕೊಂಗು ಎಕ್ಸ್‌ಪ್ರೆಸ್ ರೈಲು- ಡಿಸೆಂಬರ್ 10, 17, 24, 31 ಹಾಗೂ ಜನವರಿ 7, 14, 21, 28 ನಂತರ ಫೆಬ್ರವರಿ 4ರಂದು ರದ್ದಾಗಲಿದೆ.
2) ಡಾ। ಎಂಜಿಆರ್ ಚೆನ್ನೈ ಸೆಂಟ್ರಲ್- ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು- ಡಿಸೆಂಬರ್ 6, 13, 20, 27 ಹಾಗೂ ಜನವರಿ 3, 10, 17, 24, 31, ಫೆಬ್ರವರಿ 7 ರಂದು ರದ್ದು.
3) ಕೆಆರ್‌ಎಸ್ ಬೆಂಗಳೂರು- ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಮ್ ಮೆಮು- 2023 ಡಿ.12ರಿಂದ 2024ರ ಫೆ.8ರವರೆಗೆ ರದ್ದು
4) ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಅಗ್ಥೋರಿ ಪಾರ್ಸೆಲ್ ಎಕ್ಸ್‌ಪ್ರೆಸ್: ಡಿ.7, 14, 21, 28 ಹಾಗೂ ಜ. 4, 11, 18, 25, ಫೆ.1, 8 ರದ್ದು
5) ಯಶವಂತಪುರ-ಡಾ। ಅಂಬೇಡ್ಕರ್ ನಗರ ಎಕ್ಸ್‌ಪ್ರೆಸ್: ಡಿ.12, 19, 26 ಹಾಗೂ ಜ.2, 9, 16, 23, 30 ಮತ್ತು ಫೆ.6 ರದ್ದು 6) ಯಶವಂತಪುರ-ಮಚೇಲಿಪಟ್ಟಣಂ ಕೊಂಡವೀಡು ಎಕ್ಸ್‌ಪ್ರೆಸ್- ಡಿಸೆಂಬರ್ 9, 12, 14, 16, 19, 21, 23, 26, 28, 30 ಹಾಗೂ ಜನವರಿ 2, 4, 6, 9, 11, 13, 16, 18, 20, 23, 25, 27, 30, ಫೆಬ್ರವರಿ 1, 3, 6, 8ರಂದು ರದ್ದಾಗಲಿದೆ.
7) ಯಶವಂತಪುರ-ಸಿಕಂದರಾಬಾದ್ ಗರೀಬ್ ರಥ್ ಎಕ್ಸ್‌ಪ್ರೆಸ್: ಡಿ.9, 11, 14, 16, 18, 21, 23, 25, 28, 30 ಹಾಗೂ ಜ.1, 4, 6, 8, 11, 13, 15, 18, 22, 25, 27, 29 ಮತ್ತು ಫೆ.1, 3, 5, 8ರಂದು ರದ್ದಾಗಲಿದೆ.
8) ಕೆಎಸ್‌ಆರ್ ಬೆಂಗಳೂರು-ಧರ್ಮಾವರಂ ಮೆಮು- ಡಿ. 8 ರಿಂದ ಫೆ. 8ರವರೆಗೆ ರದ್ದಾಗಲಿದೆ
9) ಹಿಂದೂಪುರ-ಗುಂತಕಲ್ ಡೆಮು- ಡಿ.12 ರಿಂದ ಫೆ. 9ರವರೆಗೆ
10) ಸಾಯಿನಗರ ಶಿರಡಿ-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್- ಡಿ. 8, 15, 22, 29 ಹಾಗೂ ಜ. 5,12, 19,26 ಮತ್ತು ಫೆ. 2 & 9 ರದ್ದು
ಇದನ್ನೂ ಓದಿ: Atrocity on Lawyer: ವಕೀಲರ ಮೇಲಿನ ಹಲ್ಲೆಗೆ ಹೈಕೋರ್ಟ್ ಗರಂ; 6 ಪೊಲೀಸರ ಅಮಾನತು
11) ಹಜರತ್ ನಿಜಾಮುದ್ದೀನ್- ಕೊಯಮತ್ತೂರು ಎಕ್ಸ್‌ಪ್ರೆಸ್- ಡಿ. 13,20,27 ಹಾಗೂ ಜ. 3,10,17, 24, 31 ನಂತರ ಫೆಬ್ರವರಿ 7ರದ್ದು ಮಾತ್ರ ರದ್ದಾಗಲಿದೆ.
12) ಅಗ್ತೋರಿ-SMVT ಬೆಂಗಳೂರು ಪಾರ್ಸೆಲ್ ಎಕ್ಸ್‌ಪ್ರೆಸ್- ಡಿ. 11, 18, 25, ಜನವರಿ.
1, 8, 15, 22, 29 ಹಾಗೂ ಫೆ. 5 & 12ರಂದು ರದ್ದು.
13) ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯ-KSR ಬೆಂಗಳೂರು ಮೆಮು ಸ್ಪೆಷಲ್- ಡಿ.8ರಿಂದ ಫೆ.8ರವರೆಗೆ
14) ಡಾ.ಅಂಬೇಡ್ಕರ್ ನಗರ- ಯಶವಂತಪುರ ಎಕ್ಸ್‌ಪ್ರೆಸ್- ಡಿ. 10, 17, 24, 31 ಹಾಗೂ ಜ. 7, 14, 21, 28, ಫೆ. 4ರಂದು ರದ್ದು
15) ಮಚಲಿಪಟ್ಟಣಂ-ಯಶವಂತಪುರ ಎಕ್ಸ್‌ಪ್ರೆಸ್- ಡಿ. 8, 11, 13, 15, 18, 20,22, 25, 27, 29, 31 ಹಾಗೂ 1, 3, 5, 8, 10, 12, 15, 17, 19, 22, 24, 26, 29, 31ರಂದು ಫೆ. 2,5&7 ರದ್ದಾಗಲಿದೆ.
16) ಸಿಕಂದರಾಬಾದ್- ಯಶವಂತಪುರ ಗರಿಬ್ರತ್ ಎಕ್ಸ್‌ಪ್ರೆಸ್- ಡಿ. 8, 10, 13, 15, 17, 20, 22, 24, 27, 29, 31 ಹಾಗು ಜ. 3, 5, 7, 10, 12, 14, 17, 19, 21, 24, 26, 28,31 ಫೆಬ್ರವರಿ 2, 4, 7 ರದ್ದಾಗಲಿದೆ.
17) ಧರ್ಮಾವಂ- ಕೆಎಸ್‌ಆರ್ ಬೆಂಗಳೂರು- ಡಿ. 8ರಿಂದ ಫೆ. ರವರೆಗೆ
18) ಗುಂತಕಲ್- ಹಿಂದೂಪುರ ಡೆಮು- ಡಿ.7ರಿಂದ ಫೆ. 8ರವರೆಗೆ ರದ್ದು
ಈ ರೈಲುಗಳ ಮಾರ್ಗಗಳು ಭಾಗಶಃ ರದ್ದು
ಈ ರೈಲುಗಳ ಮಾರ್ಗ ಬದಲಾವಣೆ ಪಟ್ಟಿ ಹೀಗಿದೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.