ಬೆಂಗಳೂರು: ಕನಕಪುರ ಮುಖ್ಯರಸ್ತೆಯ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್ಮೆಂಟ್‌ನಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿರುವ ನಮ್ಮ ಕರಾವಳಿ ಉತ್ಸವ ಎಲ್ಲರ ಗಮನ ಸೆಳೆದಿದೆ. ಪ್ರೆಸ್ಟೀಜ್ ಫಾಲ್ಕನ್ ಸಿಟಿ ನಿವಾಸಿಗಳ ಸಂಘದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ತುಳುನಾಡಿನ ಕಲೆ, ಸಂಸ್ಕೃತಿ ಹಾಗೂ ಆಹಾರಗಳ ಸೊಗಡು ಅನಾವರಣವಾಗಿದೆ.
ತುಳುನಾಡಿನ ಬಹು ಮುಖ್ಯ ಆಚರಣೆ ಆದ ಹುಲಿ ವೇಷ ಕುಣಿತ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು. ಅಪಾರ್ಟ್ಮೆಂಟ್ ನಿವಾಸಿಗಳು ಒಟ್ಟಾಗಿ ಕರಾವಳಿ ಉತ್ಸವಕ್ಕೆ ಸಾಥ್ ನೀಡಿದ್ದು, ಸಾವಿರಾರು ಮಂದಿ ಭಾಗಿಯಾಗಿದ್ದ ಉತ್ಸವದಲ್ಲಿ ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ವಿವಿಧ ಜಾನಪದ ಕಲಾತಂಡಗಳು ಉತ್ಸವಕ್ಕೆ ಮೆರುಗು ಹೆಚ್ಚಿಸಿದವು.
ಇದನ್ನೂ ಓದಿ | Bangalore Kambala : ರಾಜಧಾನಿಯಲ್ಲಿ ಕೋಣಗಳ ರಾಜ ದರ್ಬಾರ್ ಹೇಗಿತ್ತು; ಚಿತ್ರಗಳಲ್ಲಿ ನೋಡಿ
ಇದೇ ವೇಳೆ ಮಾತನಾಡಿದ ಪ್ರೆಸ್ಟೀಜ್ ಫಾಲ್ಕನ್ ಸಿಟಿ ನಿವಾಸಿಗಳ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ವಾಯು ಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವಸಂತ್ ಕುಮಾರ್, ನಾವು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ನಮ್ಮ ಅಪಾರ್ಟ್ಮೆಂಟ್‌ನ ಎಲ್ಲ ನಿವಾಸಿಗಳು ಭಾಗಿಯಾಗಿದ್ದಾರೆ ಅಂತ ಮಾಹಿತಿ ನೀಡಿದರು.
ನವೆಂಬರ್ 24ರಂದು ನಮ್ಮ ಕರಾವಳಿ ಉತ್ಸವ ಆರಂಭವಾಗಿದ್ದು, ಶುಕ್ರವಾರ, ಶನಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನ.26ರಂದು ಮಂಜು ಡ್ರಮ್ಸ್ ಕಲೆಕ್ಟೀವ್ ತಂಡದಿಂದ ಸೌಂಡ್ಸ್ ಆಫ್ ಕರಾವಳಿ , ʼಶ್ರೀ ದೇವಿ ಮಹಾತ್ಮೆʼ ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.