Site icon Vistara News

Union Budget 2023: ದೇಶ ಸದೃಢಗೊಳಿಸುವತ್ತ ಕೇಂದ್ರ ಬಜೆಟ್ ಮಹತ್ವದ ಹೆಜ್ಜೆ: ಶಿವರಾಂ ಹೆಬ್ಬಾರ್

Union Budget 2023

#image_title

ಬೆಂಗಳೂರು: ಜಾಗತಿಕ ಸಾಂಕ್ರಾಮಿಕ ಕೋವಿಡ್ ಇಡೀ ಜಗತ್ತಿನ ಬೆಳವಣಿಗೆ ವೇಗವನ್ನು ನಿಯಂತ್ರಿಸಿರುವ ಸಂದರ್ಭದಲ್ಲೂ ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್ (Union Budget 2023) ದೇಶದ 5 ಟ್ರಿಲಿಯನ್ ಆರ್ಥಿಕತೆಯ ಕನಸನ್ನು ನನಸುಗೊಳಿಸುವ ಜತೆಗೆ ದೇಶವನ್ನು ಸದೃಢಗೊಳಿಸುವತ್ತ ಮಹತ್ವದ ಹೆಜ್ಜೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಬಣ್ಣಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವೈಯಕ್ತಿಕ ತೆರಿಗೆ ಪದ್ಧತಿ ಸೇರಿ ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ದೇಶದ ಚಿತ್ರಣಕ್ಕೆ ಪ್ರತಿಯಾದ ಬಜೆಟ್ ಇದಾಗಿದ್ದು, ವಿನೂತನ ಯೋಜನೆಗಳ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಉತ್ತಮ ಪ್ರಯತ್ನ ಇದಾಗಿದೆ ಎಂದಿದ್ದಾರೆ.

ಇದನ್ನೂ ಓದಿ | Union Budget 2023 ವಿಸ್ತಾರ ಸಮಗ್ರ : ಆರ್ಥಿಕ ಶಿಸ್ತಿಗಾಗಿ ರಕ್ಷಣಾತ್ಮಕ ಆಟ, ಆದಾಯ ತೆರಿಗೆಯ ಜೂಟಾಟ

ಕೇಂದ್ರ ಸರ್ಕಾರವು ರಾಜ್ಯದ ನೀರಾವರಿ ಯೋಜನೆಗೆ ಭರ್ಜರಿ ಬೆಂಬಲ ನೀಡಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ 5, 500 ಕೋಟಿ ರೂಪಾಯಿಗಳನ್ನು ನೀಡಿದೆ. ರೈತ ವರ್ಗ, ಜನ ಸಾಮಾನ್ಯ, ಮಧ್ಯಮ ವರ್ಗ ಸೇರಿ ಎಲ್ಲ ವರ್ಗಗಳಿಗೆ ಅನುಕೂಲವಾಗುವಂತಹ “ಸರ್ವ ವ್ಯಾಪಿ- ಸರ್ವ ಸ್ಪರ್ಶಿ”ಯಾದಂತಹ ಬಜೆಟ್ ಮಂಡಿಸಲಾಗಿದೆ ಎಂದಿದ್ದಾರೆ.

ಉದ್ಯೋಗ ಸೃಷ್ಟಿಗೆ ಸಹ ಬಜೆಟ್ ಮೂಲಕ ಹೆಚ್ಚಿನ ಪ್ರೋತ್ಸಾಹ ದೊರಕುವಂತೆ ಮಾಡಲಾಗಿದ್ದು, ಆ ಮೂಲಕ ದೇಶದ ಯುವ ಜನರು ಮತ್ತು ಕಾರ್ಮಿಕ ವರ್ಗಕ್ಕೆ ಕೆಲಸ ನೀಡುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದಿರುವ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೋವಿಡ್ ನಂತರ ಭಾರಿ ಪ್ರಮಾಣದಲ್ಲಿ ಕಾರ್ಮಿಕರು ದಿನ ನಿತ್ಯದ ಕೆಲಸಗಳಿಗೆ ಮರಳಿದ್ದು, ಮೂಲ ಸೌಕರ್ಯ ಸೇರಿ ಕೈಗಾರಿಕೆ ಮತ್ತು ಕೃಷಿ ವಲಯಕ್ಕೆ ನೀಡಿರುವ ಪ್ರೋತ್ಸಾಹದ ಪರಿಣಾಮ ಇದಾಗಿದೆ ಎಂದು ಅವರು ಹೇಳಿದ್ದಾರೆ.

Exit mobile version