ಬೆಂಗಳೂರು: ಮತ್ತೊಮ್ಮೆ ಮಗದೊಮ್ಮೆ ಯುನಿವರ್ಸಲ್ ಕೋಚಿಂಗ್ ಸೆಂಟರ್, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC Results 2023) ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ನಂಬರ್ 1 ತರಬೇತು ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿರುವ ನಗರದ ವಿಜಯನಗರದ ಯುನಿವರ್ಸಲ್ ಕೋಚಿಂಗ್ ಸೆಂಟರ್‌ನ (Universal Coaching Centre) 18 ಅಭ್ಯರ್ಥಿಗಳು ಈ ಬಾರಿ ತೇರ್ಗಡೆ ಹೊಂದಿದ್ದಾರೆ.
ಅಯಾನ್ ಜೈನ್ 16ನೇ ರ‍್ಯಾಂಕ್, ಅಭಿಮನ್ಯು ಮಲಿಕ್ 60ನೇ ರ‍್ಯಾಂಕ್, ಡಾ. ಪ್ರಶಾಂತ್. ಎಸ್ 78ನೇ ರ‍್ಯಾಂಕ್, ಶಾಶ್ವತ್ ಅಗರವಾಲ್ 121ನೇ ರ‍್ಯಾಂಕ್, ಪೌರವಿ ಗುಪ್ತ 213ನೇ ರ‍್ಯಾಂಕ್, ಸಮೀರ್ ಗೋಯೆಲ್-222 ರ‍್ಯಾಂಕ್, ಅಂಕುರ್ ಕುಮಾರ್ – 344ನೇ ರ‍್ಯಾಂಕ್, ಶಿವಶಕ್ತಿವೇಲ್.ಸಿ 340ನೇ ರ‍್ಯಾಂಕ್, ಶುಭಮ್ ರಘುವಂಶಿ 556ನೇ ರ‍್ಯಾಂಕ್, ಅಜಿತ್ ಸಿಂಗ್ ಖಡ್ಡ 563 ನೇ ರ‍್ಯಾಂಕ್, ಕಾರ್ತಿಕೇಯನ್ ಎ.ಕೆ 579ನೇ ರ‍್ಯಾಂಕ್, ಲಕ್ಷ್ಮಣ ಪ್ರತಾಪ್ ಚೌಧರಿ 597 ರ‍್ಯಾಂಕ್,
ದಿವ್ಯಾಂಶು ಪಾಲ್ ನಗರ 618 ರ‍್ಯಾಂಕ್, ಯಶವಂತ್ ನಾಯಕ್ 627ನೇ ರ‍್ಯಾಂಕ್, ಕಮಲೇಶ್ ಕುಮಾವತ್ 653ನೇ ರ‍್ಯಾಂಕ್, ಸಿದ್ದಾಂತ್ ಬೇಸ್ರ 800ನೇ ರ‍್ಯಾಂಕ್, ಸಂಪ್ರೀತ್ ಸಂತೋಷ್ – 868ನೇ ರ‍್ಯಾಂಕ್ ಹಾಗೂ ಕರ್ಮವೀರ್ ನಾರ್ವಾಡಿಯ 954ನೇ ರ‍್ಯಾಂಕ್ ಪಡೆದಿದ್ದಾರೆ.
ಇದನ್ನೂ ಓದಿ | UPSC Results 2023: ಯುಪಿಎಸ್‌ಸಿಯಲ್ಲಿ ವಿಜಯಪುರದ ವಿಜೇತಾ ರಾಜ್ಯಕ್ಕೆ ಪ್ರಥಮ, 20ಕ್ಕೂ ಹೆಚ್ಚು ಮಂದಿ ತೇರ್ಗಡೆ
ಸಂಸ್ಥೆಯ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ ತಮ್ಮ ಅಭ್ಯರ್ಥಿಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. “ಇಂದು ಯುನಿವರ್ಸಲ್ ಸಂಸ್ಥೆ ದೇಶದ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿ ಬೆಳೆದು ನಿಲ್ಲಲು, ಈ ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಕಾರಣ. ನಮ್ಮ ಸಂಸ್ಥೆಯ ತರಬೇತಿಯ ಶ್ರೇಷ್ಠತೆಗೆ ಇದು ಒಂದು ಉದಾಹರಣೆ ಎಂದು ತಿಳಿಸಿದ್ದಾರೆ.