Site icon Vistara News

ಮಾನವೀಯತೆ ತೋರಿದ ಹೊಯ್ಸಳ ಪೊಲೀಸರು

ಬೆಂಗಳೂರು: ಆಸ್ಪತ್ರೆಯ ಬಿಲ್‌ ಪಾವತಿ ಮಾಡಲಾಗದೆ ಪರದಾಡುತ್ತಿದ್ದ ಮಹಿಳೆಗೆ ಬೆಂಗಳೂರಿನ ವಿಜಯನಗರ ಪೊಲೀಸರು ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಓರ್ವ ಮಹಿಳೆ ವಿಜಯನಗರದ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆ ಪಡೆದಿದ್ದರು. ಇದಕ್ಕೆ ₹1.25 ಲಕ್ಷ ಬಿಲ್‌ ಆಗಿತ್ತು. ಆದರೆ ಹಣ ಪಾವತಿ ಮಾಡಲು ಸಾಧ್ಯವಾಗದೇ ಸ್ಥಳೀಯ ಪೊಲೀಸರ ಮೊರೆ ಹೋಗಿದ್ದರು. 112ಕ್ಕೆ ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಹೊಯ್ಸಳ-87ರ ಸಿಬ್ಬಂದಿ ಜಗದೀಶ್(ಎಎಸ್‌ಐ) ಹಾಗೂ ಮೋಹನ್‌ (ಎಪಿಸಿ) ಕೂಡಲೇ ಪ್ರತಿಸ್ಪಂದಿಸಿದ್ದಾರೆ.

ಮಹಿಳೆಯ ಸಂಕಷ್ಟ ತಿಳಿದ ಪೊಲೀಸ್‌ ಸಿಬ್ಬಂದಿ ತಕ್ಷಣ ಪರಿಚಯಸ್ಥರ ಬಳಿ ವಿಚಾರಿಸಿ ಒಟ್ಟು ₹35,000 ಹೊಂದಿಸಿದರು. ನಂತರ ಆಸ್ಪತ್ರೆಯ ಸಿಬ್ಬಂದಿಗೆ ₹20,000 ರಿಯಾಯಿತಿ ನೀಡುವಂತೆ ಮನವಿ ಮಾಡಿಕೊಂಡರು. ಪೊಲೀಸರ ನೀಡಿದ ಹಣದ ಜತೆ ತಮ್ಮ ಬಳಿ ಇದ್ದ ₹70,000 ಹಣ ಸೇರಿಸಿ ಮಹಿಳೆ ಆಸ್ಪತ್ರೆಯ ಬಿಲ್‌ ಕಟ್ಟುವಲ್ಲಿ ಯಶಸ್ವಿಯಾದರು.

ಸಾರ್ವಜನಿಕರ ಒಂದು ಕರೆಗೆ ಪ್ರತಿಸ್ಪಂದಿಸಿ ಅವರಿಗೆ ಸಹಾಯ ಮಾಡಲು ಮುಂದಾದ ಪೊಲೀಸರು ನಿಜಕ್ಕೂ ಅಭಿನಂದನಾರ್ಹ. ವಿಜಯನಗಾರ ಹೊಯ್ಸಳ ಪೊಲೀಸರ ಘನ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಲ್ಲೇಶ್ವರಕ್ಕೆ ಬರಲಿದೆ ʼವಿದ್ಯಾರ್ಥಿ ಭವನʼ

Exit mobile version