Site icon Vistara News

Water Crisis: ಬೆಂಗಳೂರಿಗರೇ ಹುಷಾರ್.. ಹೋಳಿ ಹಬ್ಬಕ್ಕೆ ನೀರಲ್ಲಿ ಜಾಲಿ ಮಾಡಿದ್ರೆ ಬೀಳುತ್ತೆ ಕೇಸ್‌

Holi festival Dancing

ಬೆಂಗಳೂರು: ರಂಗು ರಂಗಿನ ಹೋಳಿ ಹಬ್ಬಕ್ಕೆ (Holi Fest 2024) ಬರಗಾಲವು (Water Crisis) ಜನರಿಗೆ ತಣ್ಣೀರು ಎರಚಿದೆ. ರಾಜಧಾನಿ ಬೆಂಗಳೂರಲ್ಲಿ ಬೋರ್‌ವೆಲ್‌ಗಳೆಲ್ಲವೂ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಹೀಗಾಗಿ ಹೋಳಿ ಹಬ್ಬಕ್ಕೆ ನೀರಿನಲ್ಲಿ ಜಾಲಿ ಮಾಡೋದಕ್ಕೂ ಜಲಮಂಡಳಿ (BWSSB) ರೂಲ್ಸ್ ಜಾರಿ ಮಾಡಿದೆ.

ಹೋಳಿ ಆಚರಣೆ ನೆಪದಲ್ಲಿ ಬೇಕಾಬಿಟ್ಟಿ ನೀರು ವ್ಯರ್ಥ ಮಾಡಿದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಜಲಮಂಡಳಿ ನೀಡಿದೆ. ಮನೆಗಳಲ್ಲಿ ನೀರನ್ನು ವ್ಯರ್ಥ ಮಾಡದೇ ಹೋಳಿ ಆಚರಣೆ ಮಾಡಿದರೆ ಯಾವುದೇ ಅಡ್ಡಿ ಇಲ್ಲ. ಆದರೆ ಕಮರ್ಷಿಯಲ್ ಉದ್ದೇಶದಿಂದ ನೂರಾರು ಜನರನ್ನು ಸೇರಿಸಿ ನೀರು ವ್ಯರ್ಥ ಮಾಡಿದರೆ ಅಂತಹ ಹೋಟೆಲ್, ಮಾಲ್‌ಗಳ ಮೇಲೆ ಕ್ರಮವಹಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾಥ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.

ಜಲಸ್ನೇಹಿ ಹೋಳಿ ಆಚರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ನಗರದಲ್ಲಿ ಜಲಕ್ಷಾಮ ಹಿನ್ನೆಲೆಯಲ್ಲಿ ದೊಡ್ಡ ಹೋಟೆಲ್‌, ಪಬ್‌ ಸೇರಿದಂತೆ ಹೋಳಿ ರೈನ್ ಡ್ಯಾನ್ಸ್‌ಗಳಿಗೆ ಕಡಿವಾಣ ಹಾಕಲಾಗಿದೆ. ಈಗಾಗಲೇ ಹಲವು ಇವೆಂಟ್ ಮ್ಯಾನೇಜ್ಮೆಂಟ್‌ ಕಂಪನಿಗಳು ಹೋಳಿ ಸೆಲೆಬ್ರೆಷನ್‌ಗಳನ್ನು ಹಮ್ಮಿಕೊಂಡಿವೆ. ಮಾಲ್, ಮೈದಾನ ಸೇರಿದಂತೆ ಹಲವೆಡೆ ಹೋಳಿ ಸೆಲೆಬ್ರೇಷನ್‌ಗೆ ಬುಕ್ಕಿಂಗ್ ಶುರುವಾಗಿದೆ.

ಕಮರ್ಷಿಯಲ್ ಉದ್ದೇಶದಿಂದ ಹೆಚ್ಚು ಜನರನ್ನು ಸೇರಿಸಿ ನೀರು ವ್ಯರ್ಥ ಮಾಡದಂತೆ ಸೂಚಿಸಲಾಗಿದೆ. ನೀರಿನ ಹೋಳಿ ಬದಲಾಗಿ, ಡ್ರೈ ಹೋಳಿ ಆಚರಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮವನ್ನು ಗಾಳಿಗೆ ತೂರಿ ಮಿತಿ ಮೀರಿ ನೀರು ಬಳಸಿದರೆ ದಂಡ ಪ್ರಯೋಗದ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: Assault on Child: ಪುಟ್ಟ ಹೆಣ್ಣು ಮಗು ಮೇಲೆ ಮಲತಂದೆ ಕ್ರೌರ್ಯ; ಹೀಟರ್, ಸಿಗರೇಟ್‌ನಿಂದ ಸುಟ್ಟು ಹಲ್ಲೆ

ಹೋಳಿಯ ನಂತರ ಚರ್ಮ ಸರಿಯಾಗಬೇಕಾದರೆ ಕುಡಿಯಲೇ ಬೇಕಾದ ಪೇಯಗಳಿವು!

ವರ್ಷದಲ್ಲೊಮ್ಮೆ ಬಂದು ಹೋಗುವ ಹೋಳಿ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದೇನೋ ಆಗಿದೆ. ಆದರೆ, ಹೋಳಿ ಬಿಟ್ಟು ಹೋದ ಕಲೆಯಿಂದ ಚರ್ಮದ ಸಮಸ್ಯೆಗೆ ಒಳಗಾಗುವ ಮಂದಿ ಅನೇಕ. ಬಣ್ಣಗಳಲ್ಲಿರುವ ರಾಸಾಯನಿಕಗಳಿಂದಾಗಿ ಅನೇಕರು, ಸೂಕ್ಷ್ಮ ಚರ್ಮದ ಮಂದಿಗೆ ಕಜ್ಜಿ, ತುರಿಕೆ, ಮೊಡವೆ, ಕೆಲದಿನಗಳಾದರೂ ಎಷ್ಟು ತೊಳೆದರೂ ಹೋಗದಿರುವ ಬಣ್ಣ ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಹಬ್ಬ ತಂದ ಸಂತೋಷವನ್ನೆಲ್ಲ ಈ ಸಮಸ್ಯೆ ಕಸಿದುಕೊಂಡಂತಾಗಿ ಬೇಸರವೂ ಆಗಬಹುದು. ಆದರೆ, ಇದಕ್ಕಾಗಿ ತಲೆಬಿಸಿ ಮಾಡುವ ಅಗತ್ಯವಿಲ್ಲ. ಕೆಲದಿನಗಳಲ್ಲಿ ಈ ಸಮಸ್ಯೆ ಸರಿದಾರಿಗೆ ಬರುತ್ತದೆ. ಆದಷ್ಟು ಬೇಗ ಬರಬೇಕಾದಲ್ಲಿ ಕೆಲವೊಂದು ಸುಲಭವಾದ ಡಿಟಾಕ್ಸ್‌ ಡ್ರಿಂಕ್‌ ಮಾಡಿ ಕುಡಿಯಬಹುದು. ಇದರಿಂದ ಚರ್ಮ ಮತ್ತೆ ತನ್ನ ಆರೋಗ್ಯವನ್ನು ಒಳಗಿನಿಂದ ಪಡೆದುಕೊಂಡು ನಳನಳಿಸುತ್ತದೆ.

1. ಸೋರೆಕಾಯಿ ಜ್ಯೂಸ್‌: ಸೊರೆಕಾಯಿಯಲ್ಲಿ ಅತ್ಯಂತ ಹೆಚ್ಚು ನೀರಿದೆ. ಇದರಲ್ಲಿ ವಿಟಮಿನ್‌, ಸಿ, ಕೆ, ಕ್ಯಾಲ್ಶಿಯಂ, ಝಿಂಕ್ ಕೂಡಾ ಇವೆ. ಮೊಡವೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾದಲ್ಲಿ ಸೊರೆಕಾಯಿ ಜ್ಯೂಸ್‌ ಅತ್ಯಂತ ಒಳ್ಳೆಯದು. ಹಾಗಾಗಿ ಹೋಳಿ ಮುಗಿದ ತಕ್ಷಣ ಸೊರೆಕಾಯಿ ಜ್ಯೂಸ್‌ ಮಾಡಿ ಕುಡಿಯಲು ಶುರು ಮಾಡಿದರೆ ಚರ್ಮವನ್ನು ಎಂದೂ ಇಲ್ಲದಂತೆ ಕಂಗೊಳಿಸುವಂತೆ ಮಾಡುತ್ತದೆ.

2. ಸೌತೆಕಾಯಿ ಜ್ಯೂಸ್‌: ಸೌತೆಕಾಯಿಯು ಆಂಟಿ ಆಕ್ಸಿಡೆಂಟ್‌ನಿಂದಲೂ ಆಂಟಿ ಇನ್‌ಫ್ಲಮೇಟರಿ ಗುಣಗಳಿಂದಲೂ ಸಮೃದ್ಧವಾಗಿರುವುದರಿಂದ ಇದು ಚರ್ಮದ ಮೇಲಿನ ಬಾವು, ಉರಿಯೂತ, ಕಜ್ಜಿ, ಕಲೆ ಎಲ್ಲವನ್ನು ತೆಗೆದು ಹಾಕುತ್ತದೆ. ಚರ್ಮದ ಒಟ್ಟು ಆರೋಗ್ಯವನ್ನು ಕಾಪಾಡು ಶಕ್ತಿ ಇದಕ್ಕಿದೆ. ಹಾಗಾಗಿ ಹೋಳಿಯ ನಂತರ ಸೌತೆಕಾಯಿ ಜ್ಯೂಸ್‌ ಮಾಡಿ ಕುಡಿಯುವುದೂ ಕೂಡಾ ಅತ್ಯಂತ ಒಳ್ಳೆಯದು.

3. ಶುಂಠಿ- ನಿಂಬೆ ಚಹಾ: ನಿಂಬೆಹಣ್ಣು ದೇಹದ ವಿಷಕಾರಕಗಳನ್ನು ಹೊರಕ್ಕೆ ಕಳಿಸುವ ತಾಕತ್ತು ಹೊಂದಿರುವುದರಿಂದ ಹಾಗೂ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರಿಂದ ಅದು ಚರ್ಮದ ಮೇಳೆ ಉತ್ತಮ ಪರಿಣಾಮ ಬೀರುತ್ತದೆ. ಶುಂಠಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ರಕ್ತಪರಿಚಲನೆಯನ್ನು ಹೆಚ್ಚು ಮಾಡಿ, ಚರ್ಮದ ಆರೋಗ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

4. ನಿಂಬೆ ಹಾಗೂ ಪುದಿನ ಜೊತೆ ಎಳನೀರು: ಎಳನೀರು ಬೇಸಿಗೆಯಲ್ಲಿ ಅತ್ಯಂತ ಒಳ್ಳೆಯದು. ವಿಟಮಿನ್‌ ಎ, ಕೆ, ಸಿಗಳಿಂದ ಸಮೃದ್ಧವಾಗಿರುವ ಇದು ಕೊಲಾಜೆನ್‌ ಉತ್ಪಾದನೆಯನ್ನೂ ಉದ್ದೀಪಿಸುತ್ತದೆ. ಕೊಲಾಜೆನ್‌ ಚರ್ಮದ ಆರೋಗ್ಯದ ಪ್ರಮುಖ ಕೀಲಿಕೈಯಾಗಿರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದಕ್ಕೆ ಪುದಿನ ಹಾಗೂ ನಿಂಬೆರಸ ಸೇರಿಸಿ ಕುಡಿಯುವುದರಿಂದ ಹೆಚ್ಚು ಉತ್ತಮ ಫಲ ಕಾಣಬಹುದು.

5. ಕಲ್ಲಂಗಡಿ ಜ್ಯೂಸ್‌: ವಿಟಮಿನ್‌ ಎ ಅಧಿಕಾವಾಗಿರುವ ಕಲ್ಲಂಗಡಿ ಹಣ್ಣು ಹೋಳಿಯ ನಂತರ ಸೇವಿಸಬೇಕಾದ ಪ್ರಮುಖ ಹಣ್ಣು. ಇದು ಚರ್ಮವನ್ನು ರಿಪೇರಿ ಮಾಡುವ ಗುಣ ಹೊಂದಿದೆ. ಆರೋಗ್ಯಕರ ಚರ್ಮಕ್ಕೆ ಕಲ್ಲಂಗಡಿ ಹಣ್ಣು ಅತ್ಯಂತ ಮುಖ್ಯ ಕೂಡಾ. ವಿಟಮಿನ್‌ ಸಿ ಕೂಡಾ ಇದರಲ್ಲಿದ್ದು ಇದು ಕೊಲಾಜೆನ್‌ ಉತ್ಪಾದಿಸುವ ಗುಣವನ್ನು ಹೊಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version