Site icon Vistara News

ಬೆಂಗಳೂರಿನ ವಾಹನ ಸವಾರರಿಗೆ ವಾಟರ್‌ ಟ್ಯಾಂಕರ್‌ ಕಂಟಕ!

ವಾಟರ್‌ ಟ್ಯಾಂಕರ್‌

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನೇದಿನೆ ಅಪಘಾತಗಳು ಹೆಚ್ಚಾಗುತ್ತಿವೆ. ಜನವರಿಯಿಂದ ಏಪ್ರಿಲ್‌ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ 1212 ಅಪಘಾತ ಪ್ರಕರಣಗಳು ದಾಖಲಾಗಿವೆ. ಬಿಎಂಟಿಸಿ ಬಸ್‌, ಕಸದ ಲಾರಿಗಳಿಂದ ಹೆಚ್ಚು ಹೆಚ್ಚು ಅಪಘಾತ ಪ್ರಕರಣಗಳು ನಡೆಯುತ್ತಿವೆ. ಇದೀಗ, ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿರುವ ವಾಟರ್‌ ಟ್ಯಾಂಕರ್‌ಗಳು ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.

ವಾಟರ್‌ ಟ್ಯಾಂಕರ್‌ ಗಳ ಬೇಕಾಬಿಟ್ಟಿ ಓಡಾಟದ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಸಾರ್ವಜನಿಕರಿಂದ ದೂರ ಬಂದ ಹಿನ್ನಲೆಯಲ್ಲಿ ಟ್ಯಾಂಕರ್‌ಗಳ ವಿರುದ್ಧ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸುತ್ತಿದ್ದಾರೆ. ಅತಿ ವೇಗದ ಚಾಲನೆ ಮತ್ತು ಡ್ರಂಕ್ ಅಂಡ್‌ ಡ್ರೈವ್‌ ಅಪಘಾತ‌ಗಳಿಗೆ ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ | Accidents in Bangalore | ಅಪಘಾತಗಳ ನಗರವಾಗ್ತಿದೆ ಸಿಲಿಕಾನ್‌ ಸಿಟಿ, 4 ತಿಂಗಳಲ್ಲಿ 231 ಜನರ ಸಾವು

ಈ ಹಿನ್ನೆಲೆಯಲ್ಲಿ ಟ್ರಾಫಿಕ್‌ ಪೊಲೀಸರು ಸ್ಪೆಷಲ್ ಡ್ರೈವ್‌ಗೆ ಇಳಿದಿದ್ದಾರೆ. ಮೇ 27ರಂದು ಒಂದೇ ದಿನ 4 ವಿಭಾಗಗಳಲ್ಲಿ 258 ಪ್ರಕರಣವನ್ನು ದಾಖಲು ಮಾಡಿದ್ದಾರೆ. ಅದರಲ್ಲಿ ಡ್ರಂಕ್ ಅಂಡ್‌ ಡ್ರೈವ್‌ 4 ಪ್ರಕರಣ‌, ನೋ ಎಂಟ್ರಿ 28 ಪ್ರಕರಣ, ಟ್ರಾಫಿಕ್‌ ಸಿಗ್ನಲ್‌ ಜಂಪ್‌ 14 ಪ್ರಕರಣ, ಚಾಲನೆ ವೇಳೆ ಮೊಬೈಲ್‌ ಬಳಕೆ 7 ಪ್ರಕರಣ, ಇನ್ಸುರೆನ್ಸ್‌ ಇಲ್ಲದೇ ವಾಹನ ಚಾಲನೆ 1 ಪ್ರಕರಣ, ಲೈಸೆನ್ಸ್‌ ಇಲ್ಲದೇ ವಾಹನ ಚಾಲನೆ 2 ಪ್ರಕರಣ ಸೇರಿದಂತೆ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ | ಹುಬ್ಬಳ್ಳಿ ಅಪಘಾತ: ಮಡಿದವರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Exit mobile version