Site icon Vistara News

Ravichandran | ಮಗನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕ್ರೇಜಿಸ್ಟಾರ್‌ದ್ದೇ ಫೋಟೊ!

ರವಿಮಾಮನ ಫೋಟೊದೊಂದಿಗೆ

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್‌ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಭಿನ್ನವಾಗಿ ವಿನ್ಯಾಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರವಿಚಂದ್ರನ್‌ ಅವರದ್ದೇ ಫೋಟೋವನ್ನು ಬಳಸಲಾಗಿದೆ. ಪುತ್ರನ ಮದುವೆಯ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ರವಿಚಂದ್ರನ್‌ ಅವರು ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಕಲೆಗಾರಿಕೆಯನ್ನು ತೋರಿಸಿದ್ದಾರೆ. ತಮ್ಮದೇ ಚಿತ್ರದ ಹಿನ್ನೆಲೆಯನ್ನು ಬಳಸಿಕೊಂಡು ಆಹ್ವಾನಪತ್ರ ಸಿದ್ಧಪಡಿಸಲಾಗಿದೆ.

ರವಿಚಂದ್ರನ್ ಅವರ ಪುತ್ರ ಮನೋರಂಜನ್ ಮದುವೆಯ ಆಮಂತ್ರಣ ಪತ್ರಿಕೆ ಎರಡು ವಿನ್ಯಾಸಗಳಲ್ಲಿ ತಯಾರಿಸಲಾಗಿದೆ. ಮದುವೆ ಆಗಸ್ಟ್ 22ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈಗಾಗಲೆ ಕ್ರೇಜಿಸ್ಟಾರ್ ತಮ್ಮ ಪುತ್ರನ ಮದುವೆಯ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನು ಓದಿ: ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಾ ಮನೋರಂಜನ್ ರವಿಚಂದ್ರನ್? ಏನಿದು ಇನ್ವಿಟೇಶನ್‌?

Exit mobile version