ಬೆಂಗಳೂರು: ಪರಿಶ್ರಮ ದಿವ್ಯಾಂಗ ಕ್ರೀಡಾ ಅಕಾಡೆಮಿಯು ಆಯೋಜಿಸಿದ್ದ ವಿಶೇಷಚೇತನರ ಗಾಲಿಕುರ್ಚಿಯ ಕ್ರಿಕೆಟ್ ಪಂದ್ಯಾವಳಿಯನ್ನು (Wheelchair Cricket Tournament) ಆರ್ಟ್ ಆಫ್ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಖ್ಯಾತ ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರ್ ಹಾಗೂ ಇತರ ಗಣ್ಯರು ಉದ್ಘಾಟಿಸಿದರು. ಪಂದ್ಯಾವಳಿಯಲ್ಲಿ, 35 ಪುರುಷರು, 25 ಮಹಿಳಾ ಕ್ರೀಡಾಪಟುಗಳು ಹಾಗೂ 10 ಸಹಚರರು ಭಾಗಿಯಾಗಿದ್ದರು.
ಕ್ರೀಡೆಗಳಲ್ಲಿ ನೈತಿಕತೆಯ ಬೆಂಬಲ ನೀಡಲು ದನಿಯಾಗಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರು ಮಾತನಾಡಿ, “ಈ ಅಕಾಡೆಮಿಯು ಎಲ್ಲರಿಗೂ ಆಶಾಕಿರಣವನ್ನು ಮೂಡಿಸುತ್ತಿದೆ. ಇಂದಿನ ದಿನಗಳಲ್ಲಿ ಒತ್ತಡಕ್ಕೆ ಒಳಗಾಗುತ್ತಿರುವ ಯುವಕರಿಗೆ ಇದು ದಾರಿಯನ್ನು ತೋರಿಸುತ್ತಿದೆ. ಏನೇ ಆದರೂ ಜೀವನದಲ್ಲಿ ಕ್ರೀಡಾಪಟುತ್ವದ ಸ್ಫೂರ್ತಿಯನ್ನು ಹೊಂದಿರಬೇಕು. ಬಲವಾದ, ಸಂತೋಷವಾದ ಮನಸ್ಸನ್ನು ಹೊಂದುವುದು ಮುಖ್ಯ. ಇಂದು ಪ್ರತಿ 40 ಸೆಕೆಂಡುಗಳಿಗೊಮ್ಮೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೀವು ಆಶಾಕಿರಣವನ್ನು ನೀಡಿ, ಜೀವನವನ್ನು ಸನ್ಮಾನಿಸಿ, ಕ್ರೀಡಾಪಟುತ್ವದ ಸ್ಫೂರ್ತಿಯನ್ನು ಹೊಂದುವಂತೆ ಹೇಳುತ್ತಿರುವಿರಿ. ಕ್ರೀಡೆಗಳನ್ನು ಆಡಲು ಉತ್ಸಾಹ, ಸ್ಫೂರ್ತಿ ಮತ್ತು ಧ್ಯಾನ ಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ | IND vs PAK: ಭಾರತ-ಪಾಕ್ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!
ಈ ಪಂದ್ಯಾವಳಿಯನ್ನು, ಜಾಗತಿಕ ಆಧ್ಯಾತ್ಮಿಕ ಗುರುಗಳಾದ ಗುರುದೇವ ಶ್ರೀ ಶ್ರೀ ರವಿಶಂಕರ್, ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾ ಕ್ರೀಡಾಪಟುಗಳ ವಿಭಾಗದ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ, ಮಾಜಿ ಯೋಧರು, ಮುಖ್ಯ ಕ್ಲಸಿಫೈಯರ್ ಹಾಗೂ ಟೋಕ್ಯೋ ಪಾರಾ ಒಲಿಂಪಿಕ್ಸ್‌ನ ವೈದ್ಯಕೀಯ ನಿರ್ದೇಶಕರು ಡಾ. ಅಮೇಯ, ಮಾಜಿ ಕೆಪಿಎಸ್‌ಇ ಸದಸ್ಯರು, ಬಿಬಿಎಂಪಿ ಕಾರ್ಪೊರೇಟರ್ ಡಾ.ಮಂಗಳಾ ಶ್ರೀಧರ್, ಸುಮಧುರ ಗ್ರೂಪ್ ಸಿಒಒ ಗಿರಿಧರ್ ಕುಮಾರ್. ಬಿ, ಸುಮಧುರ ಗ್ರೂಪ್‌ನ ಸಸ್ಟೇಪಬಿಲಿಟಿ ಮತ್ತು ಸಿಎಸ್ ಆರ್ನ ಮುಖ್ಯಸ್ಥೆ ಜೀವನ ಕಲಾಕುಂದಲ, ಟಿಸಿಎಫ್ಎಂ-ಎಂಬಸ್ಸಿ ಗ್ರೂಪ್ ಸಿಇಒ ಅಶ್ವಿನಿ ವಲಾವಲ್ಕರ್ ಉದ್ಘಾಟಿಸಿದರು.
ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾದ ಕ್ರೀಡಾಪಟುಗಳ ಅಧ್ಯಕ್ಷರಾದ ಸತ್ಯನಾರಾಯಣ ಅವರು ಗುರುದೇವರನ್ನು ಕುರಿತು ಮಾತನಾಡಿ, “ತಮ್ಮ ಆಶ್ರಮದಲ್ಲಿ ಅನೇಕ ವರ್ಷಗಳಿಂದಲೂ, ಗುರುದೇವ ಶ್ರೀ ಶ್ರೀ ರವಿಶಂಕರರು ಈ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಇಂದು ಎಲ್ಲೆಡೆಯೂ ಪ್ಯಾರಾ ಒಲಿಂಪಿಕ್ ಕ್ರೀಡೆಗಳಿಗೆ ಬಹಳ ಪ್ರೋತ್ಸಾಹ ದೊರಕುತ್ತಿದೆ. ಹಿಂದೆ ಈ ರೀತಿಯ ಪ್ರೋತ್ಸಾಹ ಇರಲಿಲ್ಲ. ಈಗ ಸರ್ಕಾರವೂ ಸಹ ಬಹಳ ಪ್ರೋತ್ಸಾಹವನ್ನು ನೀಡುತ್ತಿದೆ. ಈಗ ಬೇಕಾಗಿರುವುದೆಂದರೆ, ದಿವ್ಯಾಂಗ ಪಟುಗಳು ಪ್ರತಿ ದಿನ ಅಭ್ಯಾಸ ಮಾಡುವುದು” ಎಂದರು.
ಇದನ್ನೂ ಓದಿ | Norway Chess: 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಪ್ರಜ್ಞಾನಂದ; ಸಹೋದರಿ ವೈಶಾಲಿಗೆ 4ನೇ ಸ್ಥಾನ
ಜೂನ್ 8 ಮತ್ತು 9ರಂದು ಎಸ್‌ಎಸ್ಆರ್‌ವಿಎಮ್ ಗ್ರೌಂಡ್ಸ್‌ನಲ್ಲಿ ಪುರುಷರ ಪಂದ್ಯಾವಳಿ ನಡೆಯಲಿದ್ದು, ವಿರಾಮದ ಸಮಯದಲ್ಲಿ ಮಹಿಳೆಯರ ಟಿ20 ಪಂದ್ಯಾವಳಿಯೂ ನಡೆಯಲಿದೆ.