Site icon Vistara News

ವೈಟ್‌ ಟಾಪಿಂಗ್‌ ಕಾಮಗಾರಿ: ಸರ್ ಸಿ.ವಿ.ರಾಮನ್ ರಸ್ತೆಯಲ್ಲಿ ಆ.18ರಿಂದ ಸಂಚಾರ ಬಂದ್‌

ವೈಟ್‌ ಟಾಪಿಂಗ್‌

ಬೆಂಗಳೂರು: ನಗರದ ಯಶವಂತಪುರ ಸಂಚಾರ ಪೊಲೀಸ್ ರಾಣೆ ವ್ಯಾಪ್ತಿಯ ಸರ್ ಸಿ.ವಿ.ರಾಮನ್ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಆ.18ರಿಂದ ಸುಮಾರು ಒಂದು ತಿಂಗಳ ಕಾಲ ಸರ್ ಸಿ.ವಿ.ರಾಮನ್ ರಸ್ತೆಯ ಬಿಎಚ್‌ಇಎಲ್ ಜಂಕ್ಷನ್‌ನಿಂದ ಯಶವಂತಪುರ ಸರ್ಕಲ್‌ವರೆಗೆ(ರಸ್ತೆಯ ಪಶ್ಚಿಮ ದಿಕ್ಕಿನಲ್ಲಿ) ಸಂಪೂರ್ಣ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ವಾಹನ ಸವಾರರು ಪರ್ಯಾಯ ಮಾರ್ಗ ಬಳಸಿಕೊಳ್ಳಬೇಕು ಎಂದು ನಗರ ಸಂಚಾರ ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಸೂಚಿಸಿದ್ದಾರೆ.

ಬಿಬಿಎಂಪಿ ವೈಟ್‌ ಟಾಪಿಂಗ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಸರ್ ಸಿ.ವಿ. ರಾಮನ್ ರಸ್ತೆಯಲ್ಲಿ ಚಲಿಸುವ ಸಾರ್ವಜನಿಕರು, ವಾಹನ ಸವಾರರು ಈ ರಸ್ತೆಯನ್ನು ಬಳಸದೆ ಈ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸುಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  1. ಮಲ್ಲೇಶ್ವರಂ 18ನೇ ಕ್ರಾಸ್ ಕಡೆಯಿಂದ ಬರುವ ವಾಹನಗಳು ಸದಾಶಿವನಗರ ಪೊಲೀಸ್ ಠಾಣೆಯ ಸರಹದ್ದಿನ ಸರ್ಕಲ್ ಮಾರಮ್ಮ ಜಂಕ್ಷನ್ ಬಳಿ ಎಡ ತಿರುವು ಪಡೆದು ಮಲ್ಲೇಶ್ವರಂ ಮಾರ್ಗೋಸಾ ರಸ್ತೆ ಮೂಲಕ- ಮಲ್ಲೇಶ್ವರಂ 15ನೇ ಕ್ರಾಸ್‌ನಲ್ಲಿ ಬಲತಿರುವು ಪಡೆದು- ಯಶವಂತಮರ 8ನೇ ಮುಖ್ಯರಸ್ತೆ ಮೂಲಕ ಯಶವಂತಪುರ ಸರ್ಕಲ್‌ಗೆ ವಾಹನಗಳು ಸಂಚರಿಸಬಹುದು.
  2. ಸರ್‌ ಸಿ.ವಿ.ರಾಮನ್‌ ರಸ್ತೆಯಲ್ಲಿ ಮೇಖ್ರಿ ಸರ್ಕಲ್‌ ಕಡೆಯಿಂದ ಬರುವ ವಾಹನಗಳು ಸದಾಶಿವನಗರ ಪೊಲೀಸ್‌ ಠಾಣೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕುವೆಂಪು ಸರ್ಕಲ್-ಬಿಇಎಲ್ ಸರ್ಕಲ್ ಮೂಲಕ ವಾಹನಗಳು ಸಾಗಬಹುದು.
  3. ಸರ್ ಸಿ.ವಿ.ರಾಮನ್‌ ರಸ್ತೆಯಲ್ಲಿ ಮೇಖ್ರಿ ಸರ್ಕಲ್- ಸದಾಶಿವನಗರದ ಕಡೆಯಿಂದ ಯಶವಂತಪುರದಕಡೆಗೆ ಬರುವ ವಾಹನಗಳು ಬಿಎಚ್‌ಇಎಲ್‌ ಜಂಕ್ಷನ್‌ (ಕೆ-08) ನಲ್ಲಿ ಎಡತಿರುವು ಪಡೆದು ಸರ್ಕಲ್ ಮಾರಮ್ಮ ದೇವಸ್ಥಾನ- ಮಾರ್ಗೋಸಾ ರಸ್ತೆ ಮೂಲಕ- ಮಲ್ಲೇಶ್ವರಂ 15ನೇ ಕ್ರಾಸ್‌ನಲ್ಲಿ ಬಲತಿರುವು ಪಡೆದು ಯಶವಂತಪುರ 8ನೇ ಮುಖ್ಯ ರಸ್ತೆ ಮೂಲಕ ಯಶವಂತಪುರ ಸರ್ಕಲ್‌ಗೆ ಸಂಚರಿಸಬಹುದು.

ಇದನ್ನೂ ಓದಿ | Highspeed Railway | ಬೆಂಗಳೂರಿನಿಂದ ಹೈದರಾಬಾದ್‌ಗೆ 2.5 ಗಂಟೆಯಲ್ಲಿ ಪ್ರಯಾಣ ಶೀಘ್ರದಲ್ಲೇ ಸಾಧ್ಯ!

Exit mobile version