Site icon Vistara News

World Environment Day: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ

Environment awareness programme by NCC team in Bengaluru

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಂ.2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ತಂಡದ ವತಿಯಿಂದ ಪರಿಸರ ಸಂರಕ್ಷಣೆ (World Environment Day) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳಿಂದ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು ನಗರದ ಐ.ಟಿ.ಐ ಸೆಂಟ್ರಲ್ ಶಾಲೆಯ ವತಿಯಿಂದ ಇಲ್ಲಿನ ರಾಮಮೂರ್ತಿ ನಗರದ ಮುಖ್ಯರಸ್ತೆಯಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಕುರಿತ ಭಿತ್ತಿಚಿತ್ರಗಳೊಂದಿಗೆ ನಡೆದ ಕಾಲ್ನಡಿಗೆ ಜಾಥಾ ನಡೆಸಿ, ಜಾಗೃತಿ ಮೂಡಿಸಲಾಯಿತು. ಬಳಿಕ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಶಾಲಾ ವಿದ್ಯಾರ್ಥಿಗಳಿಂದ ನಡೆದ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: India vs Ireland: ಪಂಜಾಬಿ ಪುಟ್ಟ ಪೋರನಿಂದ ಚಿನ್ನದ ಪದಕ ಪಡೆದ ಮೊಹಮ್ಮದ್​ ಸಿರಾಜ್

ಸೈಕಲ್ ಜಾಥಾ

ನಗರದ ಜೈನ್ ಪಬ್ಲಿಕ್ ಶಾಲೆ ಹಾಗೂ ಎನ್‌ಸಿಸಿ ತಂಡದ ವತಿಯಿಂದ ಪರಿಸರದ ನಡೆ ಹಳ್ಳಿಯ ಕಡೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ಕ್ರೈಸ್ಟ್ ಹಾಗೂ ಸೀ ಪ್ರೌಢಶಾಲೆಯ ಎನ್‌ಸಿಸಿ ಕೆಡೆಟ್‌ಗಳಿಂದ ಸೈಕಲ್ ಜಾಥಾ ನಡೆಸಲಾಯಿತು.

ಇಲ್ಲಿನ ಐ.ಟಿ.ಐ. ವಿದ್ಯಾಮಂದಿರ ಪ್ರೌಢಶಾಲೆ, ಜೈನ್ ಪಬ್ಲಿಕ್ ಶಾಲೆ, ಕ್ರೈಸ್ಟ್, ಸೈಂಟ್ ಪ್ಯಾಟ್ರಿಕ್ಸ್ ಅಕಾಡೆಮಿ, ಸೀ ಪ್ರೌಢಶಾಲೆ, ಶ್ರೀವಾಣಿ ರಾಜಾಜಿನಗರ ಹಾಗೂ ಬಸವೇಶ್ವರ ನಗರ ಶಾಲೆಗಳ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಅನೇಕ ಕಾರ್ಯಗಳು ಜರುಗಿದವು.

ಈ ಸಂದರ್ಭದಲ್ಲಿ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ಮಾತನಾಡಿ, ಯೂನಿಟ್‌ನ ಎಲ್ಲಾ ಟ್ರೂಪ್‌ಗಳ ನೇತೃತ್ವದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮಗಳ ಕುರಿತು ಶ್ಲಾಘಿಸಿದರು.

ಇದನ್ನೂ ಓದಿ: Electric Airport Taxi : ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ಮುಂದೆ ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ

ಕಾರ್ಯಕ್ರಮದಲ್ಲಿ ಐ.ಟಿ.ಐ. ಸೆಂಟ್ರಲ್ ಶಾಲೆಯ ಹಿರಿಯ ಆಡಳಿತಾಧಿಕಾರಿ ಲತಾ, ಪ್ರಾಂಶುಪಾಲ ಪೊನ್ಮಲಾರ್ ಹಾಗೂ ಎನ್‌ಸಿಸಿ ಸಹ ಅಧಿಕಾರಿಗಳಾದ ಬಾಲಕೃಷ್ಣ ವಿ.ಎಚ್.ಜೆ. ಕೃಷ್ಣಪ್ಪ, ನಜೀರ್ ಅಹಮದ್, ಜಸ್ಟಿನ್, ಜಗದೀಶ್, ವಿವೇಕ್ ಹೆಗ್ಡೆ, ಆದರ್ಶ್ ಕುಮಾರ್ ಮತ್ತು ನವೀನ್ ಶರ್ಮ, ಸಾರ್ಜಂಟ್ ರವಿ ಸತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version