ಬೆಂಗಳೂರು: ಕರ್ನಾಟಕ ಕಲಾದರ್ಶಿನಿ (Karnataka Kala Darshini) ವತಿಯಿಂದ ಗಿರಿನಗರದ ಶ್ರೀ ಮಹಾಗಣಪತಿ ದೇವಾಲಯ ಸಭಾಂಗಣದಲ್ಲಿ ಯಕ್ಷಗಾನ ಬೇಸಿಗೆ ಶಿಬಿರ -2023 ಸಮಾರೋಪ ಸಮಾರಂಭ (ಏ.15 ಮತ್ತು 16) ನೆರವೇರಿತು. ಎರಡು ದಿನಗಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ʼಕೃಷ್ಣಾರ್ಜುನ ಕಾಳಗʼ ಮತ್ತು ʼವೀರ ಅಭಿಮನ್ಯುʼ ಯಕ್ಷಗಾನ ಪ್ರಸಂಗ ನೋಡುಗರ ಗಮನ ಸೆಳೆಯಿತು. ಯಕ್ಷಗಾನ ಪೂರ್ವರಂಗ, ಸಂಗೀತ ತರಬೇತಿಯನ್ನು ಯಕ್ಷಗುರು ಶ್ರೀನಿವಾಸ ಸಾಸ್ತಾನ, ಗೌತಮ್ ಸಾಸ್ತಾನ ಮತ್ತು ಡಾ. ಸುಪ್ರೀತ ನಡೆಸಿಕೊಟ್ಟರು.
ಬಳಿಕ ಶ್ರೀನಿವಾಸ ಸಾಸ್ತಾನ ಅವರ ಮಾರ್ಗದರ್ಶನದಲ್ಲಿ ತಂಡದ ವಿದ್ಯಾರ್ಥಿಗಳಿಂದ ಕೃಷ್ಣಾರ್ಜುನ ಕಾಳಗ ಮತ್ತು ಶಿಬಿರಾರ್ಥಿ ಪುಟಾಣಿಗಳಿಂದ ‘ವೀರ ಅಭಿಮನ್ಯು’ ಯಕ್ಷಗಾನ ಪ್ರಸಂಗಗಳನ್ನು ಆಡಿತೋರಿಸಲಾಯಿತು. ಶನಿವಾರ ನಡೆದ ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ದೀಕ್ಷಾಭಟ್, ಆದರ್ಶ ಶೆಟ್ಟಿ, ಶ್ರೀಹರಿ ಸರಳಾಯ, ಸುಧನ್ವ ಭಟ್, ಧೃತಿ ಅಮ್ಮೆಂಬಳ, ಶ್ರೇಯಸ್ ಸರಳಾಯ, ರಘುವೀರ ಪಾಂಗಣ್ಣಾಯ, ಅಭಿಶ್ರೀ ವಿವಿಧ ಪಾತ್ರಗಳಲ್ಲಿ ರಂಜಿಸಿದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಕನ್ನಡ ಶಾಲೆಗಳನ್ನು ಉಳಿಸಲು ಮಾದರಿ ಕಾರ್ಯಕ್ರಮ; ಅತ್ತೂರು ಶಾಲೆಯಲ್ಲಿ ಒಂದು ಸ್ಮರಣೀಯ ಪುನರ್ಮಿಲನ
ಮರುದಿನ ಶಿಬಿರಾರ್ಥಿ ಪುಟಾಣಿಗಳು ನಡೆಸಿಕೊಟ್ಟ ವೀರ ಅಭಿಮನ್ಯು ಯಕ್ಷಗಾನದಲ್ಲಿ ಸೃಷ್ಟಿ ಚೇತನ್ ಜಯಂತ್, ಆಯುಷ್ ಎಸ್, ಸಾಯಿ ಪ್ರಣಾಮ್, ಕೃಷ್ಣ ಭಟ್, ಕೃತಿ ಅಮ್ಮೆಂಬಳ, ಇಶಾನಿ ಎಸ್, ಶ್ರೇಷ್ಠಾ ಚೇತನ್ ಜಯಂತ್, ಶ್ರೇಯಸ್ ಸರಳಾಯ, ಶ್ರೀವತ್ಸ ಸರಳಾಯ, ಅಭಿಶ್ರೀ ಶ್ರೀಹರ್ಷ ಭಟ್ಟ, ಧನುಶ್ ಶೆಟ್ಟಿ, ಸಮನ್ವಿತ, ಯಶ್ವಿತಾ, ಶ್ರೀಯಾ, ಯಾದವಿ, ಅಗಸ್ತ್ಯ, ಧನ್ವಿನ್, ವಿಶ್ರುತ್, ಧೃತಿ ಅಮ್ಮೆಂಬಳ ಬಾಲಕಲಾವಿದರಾಗಿ ಮಿಂಚಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ್ ಬಾಳೆಕುದ್ರು, ಚಂಡೆಯಲ್ಲಿ ಸುಬ್ರಹ್ಮಣ್ಯ ಸಾಸ್ತಾನ, ಮದ್ದಲೆಯಲ್ಲಿ ರಾಘವೇಂದ್ರ ಬಿಡುವಾಳ ಭಾಗವಹಿಸಿದ್ದರು. ಚೈತ್ರಾ ಕೋಟಾ ಅವರು ಕಾರ್ಯಕ್ರಮ ನಿರ್ವಹಿಸಿದರು.