ಬೆಂಗಳೂರು: ಯುವರಾಜ್ ಕುಮಾರ್ ಗೆ ಭಾನುವಾರ 30ನೇ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಅವರ ನಿವಾಸದ ಬಳಿ ಅಭಿಮಾನಿಗಳ ದಂಡು ನೆರೆದಿದೆ. (Yuvaraj Kumar) ಸದಾಶಿವನಗರ ನಿವಾಸದ ಬಳಿ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮಪಟ್ಟರು. ಯುವರಾಜ್ ಕುಮಾರ್ ಅವರು ಅಭಿಮಾನಿಗಳ ಮಧ್ಯೆ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿದರು.
ತಂದೆ ರಾಘವೇಂದ್ರ ರಾಜ್ ಕುಮಾರ್, ತಾಯಿ ಮತ್ತು ಅಭಿಮಾನಿಗಳ ಬಳಿ ಮಧ್ಯೆ ಯುವರಾಜ್ ಕುಮಾರ್ ಕೇಕ್ ಕತ್ತರಿಸಿದರು. ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸಲು ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಭಿಮಾನಿಗಳು ಬಂದಿದ್ದರು.
ಅಭಿಮಾನಿಗಳ ತಂದಿದ್ದ ಕೇಕ್ ಗಳನ್ನ ಕತ್ತರಿಸಿ ಅಭಿಮಾನಿಗಳಿಗೆ ಕೇಕ್ ತಿನ್ನಿಸಿ ಯುವರಾಜ್ ಸಂಭ್ರಮಪಟ್ಟರು. ಹುಟ್ಟು ಆಚರಣೆ ವೇಳೆ ರಾಘವೇಂದ್ರ ರಾಜ್ ಕುಮಾರ್ ಅವರು ತಮ್ಮ ಪುನೀತ್ ರಾಜ್ ಕುಮಾರ್ ರನ್ನು ನೆನೆದು ಭಾವುಕರಾದರು. ಇದೆಲ್ಲ ನನ್ನ ತಮ್ಮನ ಆರ್ಶೀವಾದದಿಂದ ನಡೆಯುತ್ತಿದೆ. ಅಭಿಮಾನಿಗಳ ಅಭಿಮಾನಕ್ಕೆ ನಾವು ಚಿರ ಋಣಿ. ಇದನ್ನೆಲ್ಲ ಕಣ್ಣಿಗೆ ತುಂಬಿಕೊಳ್ಳಲು ನಾನು ಬದುಕಿದ್ದೇನೆ ಎಂದರು.
ಅಭಿಮಾನಿಗಳ ಪ್ರೀತಿಗೆ ಚಿರ ಋಣಿ. ಈ ಪ್ರೀತಿಗೆ ಮಾತಿಲ್ಲ. ಯುವ ಫಿಲ್ಮ್ ನಿರ್ಮಾಣದ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ತೆರೆಯ ಮೇಲೆ ಬರಲಿದೆ. ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ. ಎಲ್ಲಾ ಕಡೆಯಿಂದ ಅಭಿಮಾನಿಗಳು ಬರ್ತಿದ್ದಾರೆ. ಚಿಕ್ಕಪ್ಪನ ಬಗ್ಗೆ ಹೇಳಲು ಪದಗಳೇ ಬರುತ್ತಿಲ್ಲ. ಕಂಠೀರವ ಸ್ಟುಡಿಯೋಗೆ ಹೋಗುತ್ತೇನೆ. ಅವರನ್ನು ಸಿಕ್ಕಾಪಟ್ಟೆ ಮಿಸ್ ಮಾಡ್ಕಳ್ತಿದ್ದೇವೆ ಎಂದು ಯುವರಾಜ್ ಕುಮಾರ್ ಹೇಳಿದರು.