Site icon Vistara News

Bescom : ಬಲಿಗಾಗಿ ಕಾಯುತ್ತಿವೆ ಬೆಂಗಳೂರಿನ 17 ಸಾವಿರ ಅಪಾಯಕಾರಿ ಸ್ಥಳಗಳು!

A dangerous place Find bescom in Bangalore

ಬೆಂಗಳೂರು: ಬೆಂಗಳೂರಿನಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಇತ್ತೀಚೆಗೆ ರಸ್ತೆ ಮೇಲೆ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ತಾಯಿ ಮತ್ತು ಮಗು ಕ್ಷಣಾರ್ಧದಲ್ಲೇ ಸುಟ್ಟು ಭಸ್ಮವಾಗಿದ್ದರು. ಈ ಘಟನೆಯಿಂದ ಭಾರಿ ಟೀಕೆಗೆ ಗುರಿಯಾಗಿದ್ದ ಬೆಸ್ಕಾಂ ಡಿಸೆಂಬರ್‌ 16 ರಂದು ಅಪಾಯಕಾರಿ ಸ್ಥಳಗಳನ್ನು ಸರಿಪಡಿಸುವ ಮಾತು ಕೊಟ್ಟಿತ್ತು. ತಾವೇ ಸರ್ವೆ ಮಾಡಿ 26 ಸಾವಿರ ಅಪಾಯಕಾರಿ (Dangerous place) ಸ್ಥಳಗಳನ್ನು ಗುರುತಿಸಿದ್ದ ಇಂಧನ ಇಲಾಖೆಗೆ ನಡೆ ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಕಾಡುಗೋಡಿ ಸಮೀಪ ವಿದ್ಯುತ್‌ ತಂತಿ ತಾಗಿ ತಾಯಿ ಮತ್ತು ದಾರುಣ ಸಾವನ್ನಪ್ಪಿದ ಪ್ರಕರಣದ ಬಳಿಕವೂ ಬೆಸ್ಕಾಂ ನಿರ್ಲಕ್ಷ್ಯ ಮುಂದುವರೆದಿದೆ. ಇತ್ತೀಚೆಗಷ್ಟೇ ಸರ್ವೆ ಮಾಡಿದ್ದ ಬೆಸ್ಕಾಂ ಅಧಿಕಾರಿಗಳು ಸುಮಾರು 26 ಸಾವಿರಕ್ಕೂ ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿದ್ದರು. ಜನಸಾಮಾನ್ಯರು ದಿನನಿತ್ಯ ಓಡಾಟ ಮಾಡುವ ಸ್ಥಳಗಳಲ್ಲಿರುವ ಟ್ರಾನ್ಸ್‌ಫಾರ್ಮರ್‌ ಹಾಗೂ ವಿದ್ಯುತ್‌ ಕಂಬಗಳು ಸುತ್ತಮುತ್ತ ಅಪಾಯಕಾರಿ ಸ್ಥಳಗಳನ್ನು ಸರಿಪಡಿಸುವುದಾಗಿ ಹೇಳಿದ್ದ ಬೆಸ್ಕಾಂ ಕೇವಲ 8 ಸಾವಿರ ಪ್ರಕರಣಗಳನ್ನಷ್ಟೇ ಇತ್ಯರ್ಥ ಮಾಡಿದೆ.

ಇದನ್ನೂ ಓದಿ: Karnataka Weather : ಮಳೆ-ಚಳಿ ಒಟ್ಟೊಟ್ಟಿಗೆ ಅಟ್ಯಾಕ್!

ಎಲ್ಲೆಲ್ಲಿ ಬಾಕಿ ಉಳಿದಿವೆ?

ಹೆಸರು- ಪತ್ತೆ ‌ – ಸರಿಪಡಿಸಿರುವುದು- ಬಾಕಿ
1) ಉತ್ತರ 1118 666 452
2) ಪೂರ್ವ 2206 716 1490
3) ಪಶ್ಚಿಮ 7811 3309 4572
4) ದಕ್ಷಿಣ 11982 1705 10277
5) ರಾಮನಗರ 175 99 76
6) ಕೋಲಾರ 2080 1555 525
7) ತುಮಕೂರು 99 49 50
8) ದಾವಣಗೆರೆ 460 78 382

ಒಟ್ಟು 26,022, 8198, 17,824

ಬೆಂಗಳೂರಿನ ಉತ್ತರ ವಲಯದಲ್ಲಿ 1,118 ಪತ್ತೆ ಮಾಡಿ, ಅವುಗಳ ಪೈಕಿ 666 ಸರಿಪಡಿಸುವ ಕೆಲಸ ಮಾಡಿದೆ. 452 ಡೇಂಜರಸ್ ಜಾಗ ಇನ್ನೂ ಇದೆ. ಇನ್ನೂ ಪೂರ್ವ ವಲಯದಲ್ಲಿ 2206 ಜಾಗ ಪತ್ತೆ ಮಾಡಿದರೆ, ಅದರಲ್ಲಿ 716 ಕಡೆ ಸರಿಪಡಿಸುವ ಕೆಲಸ ಆಗಿದ್ದು, 1490 ಜಾಗದಲ್ಲಿ ಇನ್ನೂ ಕೂಡ ಡೇಂಜರಸ್ ಇದೆ‌. ಇನ್ನೂ ಪಶ್ಚಿಮ ವಿಭಾಗದಲ್ಲಿ 7811 ‌ಪತ್ತೆಯಾಗಿದ್ದು, ಅದರಲ್ಲಿ 3309 ಸರಿಪಡಿಸಿದರೆ, 4572 ಕಡೆ ಡೆಡ್ಲಿಯಾಗಿಯೇ ಉಳಿದುಕೊಂಡಿದೆ. ಇನ್ನೂ ದಕ್ಷಿಣ ವಿಭಾಗದಲ್ಲಿ 11,982 ಕಡೆ ಡೇಂಜರಸ್ ಸ್ಥಳಗಳನ್ನ ಪತ್ತೆ ಹಚ್ಚಿದ್ದ ಬೆಸ್ಕಾಂ, 1705 ಸರಿ ಪಡಿಸಿದ್ದು, ಇನ್ನೂ 10277 ಜಾಗವನ್ನು ಬಾಕಿ ಉಳಿಸಿಕೊಂಡಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಹಲವಾರು ಜಿಲ್ಲೆಗಳಿದ್ದು, ಬೆಂಗಳೂರಿನಲ್ಲೇ ಅಪಾಯಕಾರಿ ಸ್ಥಿತಿ ಎದುರಾಗಿದೆ. ಕೋಟ್ಯಾಂತರ ರೂಪಾಯಿ ಆದಾಯವನ್ನು ಮಾಡಿಕೊಳ್ಳುವ ಬೆಸ್ಕಾಂಗೆ ಜನಸಾಮಾನ್ಯರ ಭದ್ರತೆ ಲೆಕ್ಕಕ್ಕಿಲ್ಲವಾ ಎಂಬ ಪ್ರಶ್ನೆ ಸಹ ಮೂಡುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version