Site icon Vistara News

Load Shedding: ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆಯ ಭರವಸೆ ನೀಡಿದ ಬೆಸ್ಕಾಂ

Bescom office

ಬೆಂಗಳೂರು: ರಾಜ್ಯ ವಿದ್ಯುತ್ ಅಭಾವವನ್ನು (Load Shedding) ಎದರಿಸುತ್ತಿದ್ದರೂ ಬೆಸ್ಕಾಂ ವಲಯದ ಕೈಗಾರಿಕಾ ಪ್ರದೇಶಗಳಿಗೆ ನಿರಂತರ ವಿದ್ಯುತ್ ಪೂರೈಸುವುದಾಗಿ ಬೆಸ್ಕಾಂ ಭರವಸೆ ನೀಡಿದ್ದು, ಕೈಗಾರಿಕಾ ವಲಯದ ಪ್ರತಿನಿಧಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅಧ್ಯಕ್ಷತೆಯಲ್ಲಿ, ಬೆಸ್ಕಾಂ ವಲಯದ ಕೈಗಾರಿಕಾ ಪ್ರತಿನಿಧಿಗಳ ಜತೆ ಮಂಗಳವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ, ಕೈಗಾರಿಕಾ ಘಟಕಗಳ ಪ್ರತಿನಿಧಿಗಳಿಗೆ ಭರವಸೆ ನೀಡಲಾಗಿದೆ.

ಯಾವುದೇ ಕಾರಣಕ್ಕೂ ಕೈಗಾರಿಕಾ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ, ಹೆಚ್ಚುವರಿ ವಿದ್ಯುತ್ ಖರೀದಿಗೆ ಈಗಾಗಲೇ ರಾಜ್ಯ ಸರಕಾರ ಕ್ರಮ ಕೈಗೊಂಡಿದ್ದು, ಕೈಗಾರಿಕಾ ಘಟಕಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಗೌರವ ಗುಪ್ತಾ ಹಾಗೂ ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಭರವಸೆ ನೀಡಿದ್ದಾರೆ.

ಸಭೆಯಲ್ಲಿ ಪೀಣ್ಯ, ಬಿಡದಿ, ಹೊಸಕೋಟೆ, ಎಲೆಕ್ಟ್ರಾನಿಕ್ ಸಿಟಿ, ಕುಂಬಳಗೋಡು, ಮಾಲೂರು, ನೆಲಮಂಗಲ, ದಾಬಸಪೇಟೆ, ದಾವಣಗೆರೆ, ತುಮಕೂರು, ಕೋಲಾರ, ಗೌರಿಬಿದನೂರು, ವೈಟ್ ಫೀಲ್ಡ್ ಮತ್ತು ಹೆರೋಹಳ್ಳಿ ಕೈಗಾರಿಕಾ ವಲಯಗಳ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಇದನ್ನೂ ಓದಿ | ಫೈನಾನ್ಷಿಯಲ್ ಟೈಮ್ಸ್ ಶ್ರೇಯಾಂಕ, ಭಾರತದಲ್ಲೇ ಐಐಎಂ ಬೆಂಗಳೂರು ಅಗ್ರಸ್ಥಾನಿ

‌ರೇಷನ್ ಪಡೆಯದ ಕಾರ್ಡ್‌ದಾರರಿಗೆ ಆಹಾರ ಇಲಾಖೆ ಶಾಕ್

ಬೆಂಗಳೂರು: ಕಳೆದ 6 ತಿಂಗಳಿನಿಂದ ರೇಷನ್ ಪಡೆಯದ ಕಾರ್ಡ್‌ದಾರರಿಗೆ ಆಹಾರ ಇಲಾಖೆ ಶಾಕ್ ನೀಡಿದೆ. ರೇಷನ್ ಪಡೆಯದ 3.26 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನು ತಾತ್ಕಾಲಿಕ ಅಮಾನತು ಮಾಡಲು ಆಹಾರ ಇಲಾಖೆ ನಿರ್ಧಾರ ಮಾಡಿದೆ.

ಈ ಬಗ್ಗೆ ಆಹಾರ ಇಲಾಖೆ ಜಂಟಿ ನಿರ್ದೇಶಕ ಗ್ಯಾನೆಂದ್ರ ಕುಮಾರ್ ಮಾಹಿತಿ ನೀಡಿದ್ದು, ಸದ್ಯ ಇಷ್ಟು ತಿಂಗಳ ಅವಧಿಯಲ್ಲಿ ಯಾಕೆ ಪಡಿತರ ತೆಗೆದುಕೊಂಡಿಲ್ಲ ಎಂಬ ಬಗ್ಗೆ ನಾವು ಸರ್ವೆ ಮಾಡಲಿದ್ದೇವೆ. ಸ್ಥಳೀಯ ಫುಡ್ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಲಿದೆ. ಸರ್ವೇ ವೇಳೆಯಲ್ಲಿ ಕಂಡುಬಂದ ಕಾರಣಗಳನ್ನು ಪರಿಗಣಿಸಿ ಮತ್ತೆ ಕಾರ್ಡ್ ರೀ ಆ್ಯಕ್ಟಿವೇಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Congress Politics : ನಿಗಮ, ಮಂಡಳಿಗೆ ಗ್ರೀನ್‌ ಸಿಗ್ನಲ್‌; ಶಾಸಕರ ಜತೆ ಕಾರ್ಯಕರ್ತರ ಲಾಬಿ ಜೋರು

ಹಲವು ಕಾರಣಗಳಿಂದ ಫಲಾನುಭವಿಗಳು ರೇಷನ್ ತೆಗೆದುಕೊಂಡಿಲ್ಲ. ಯಾಕೆ ರೇಷನ್ ತೆಗೆದುಕೊಂಡಿಲ್ಲ ಎಂಬ ಬಗ್ಗೆ ಸಮಗ್ರ ಮಾಹಿತಿ ತರಿಸಿಕೊಳ್ಳುತ್ತೇವೆ. ಕಾರ್ಡ್‌ಗಳು ಶಾಶ್ವತ ರದ್ದು ಆಗಲ್ಲ, ತಾತ್ಕಾಲಿಕ ಅಮಾನತು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Exit mobile version