Site icon Vistara News

BESCOM ATP Cash Counter: ಮಾ. 29, 31ರಂದು ತೆರೆದಿರಲಿವೆ ಬೆಸ್ಕಾಂ ಕ್ಯಾಷ್ ಕೌಂಟರ್‌ಗಳು; ರಜಾ ದಿನಗಳಲ್ಲೂ ಸೇವೆ

BESCOM ATP Cash Counter

ಬೆಂಗಳೂರು: ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್‌ ಬಿಲ್‌ ಪಾವತಿಸಲು ಪರದಾಡುತ್ತಿದ್ದ ಗ್ರಾಹಕರಿಗೆ ಬೆಸ್ಕಾಂ ಗುಡ್‌ ನ್ಯೂಸ್ ನೀಡಿದೆ.‌ ಎಸ್ಕಾಂಗಳ ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿದ್ದರಿಂದ ಬಿಲ್‌ ಪಾವತಿಸಲು ಸಮಸ್ಯೆ ಉಂಟಾಗಿತ್ತು. ಹೀಗಾಗಿ ಗ್ರಾಹಕರಿಗೆ ಅನುಕೂಲವಾಗಲು ರಜೆ ದಿನವಾಗಿದ್ದರೂ ಮಾರ್ಚ್‌ 29 ಮತ್ತು 31ರಂದು ಕ್ಯಾಷ್ ಕೌಂಟರ್‌ಗಳನ್ನು ತೆರೆಯಲು ಬೆಸ್ಕಾಂ ಕ್ರಮ ಕೈಗೊಂಡಿದೆ.

ಈ ಬಗ್ಗೆ ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳ ಕ್ಯಾಷ್ ಕೌಂಟರ್‌ಗಳನ್ನು (BESCOM ATP Cash Counter) ಸಾರ್ವತ್ರಿಕ ರಜಾ ದಿನವಾದ ಮಾರ್ಚ್ 29 (ಗುಡ್ ಪ್ರೈಡೆ) ಹಾಗೂ ಮಾರ್ಚ್ 31 (ಭಾನುವಾರ) ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಸಲುವಾಗಿ ಮಾರ್ಚ್ 10 ರಿಂದ 19ರವರೆಗೆ ಆನ್‌ಲೈನ್ ವಿದ್ಯುತ್ ಸೇವೆಗಳು ಸ್ಥಗಿತಗೊಂಡಿದ್ದವು. ಈ ಅವಧಿಯಲ್ಲಿ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿ ಸಾಧ್ಯವಾಗಿರಲಿಲ್ಲ. ಹಾಗೆಯೇ ತಂತ್ರಾಂಶ ಕಾರ್ಯಾರಂಭಗೊಂಡ ನಂತರ ಸರ್ವರ್ ಓವರ್‌ಲೋಡ್ ಆಗಿ ಆನ್‌ಲೈನ್ ವಿದ್ಯುತ್ ಸಂಬಂಧಿತ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ತಂತ್ರಾಂಶ ಉನ್ನತೀಕರಣದ ಹಿನ್ನೆಲೆಯಲ್ಲಿ ಗ್ರಾಹಕರು ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಾರ್ಚ್ 29 ಮತ್ತು 31 ರಂದು ಬೆಸ್ಕಾಂನ ಎಲ್ಲಾ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ | Money Guide: ಸೈಬರ್‌ ಅಪರಾಧದ ಹೊಸ ತಂತ್ರ ʼಮನಿ ಮ್ಯೂಲ್‌ʼ; ಈ ಮೋಸದ ಬಲೆಗೆ ಬೀಳದಿರಲು ಹೀಗೆ ಮಾಡಿ

ತಂತ್ರಾಂಶ ಉನ್ನತೀಕರಣದ ಅವಧಿಯಲ್ಲಿ ಬಿಲ್ ಪಾವತಿಸಲು ಅಥವಾ ಇತರ ವಿದ್ಯುತ್ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಸಾಧ್ಯವಾಗಿಲ್ಲ, ಹಾಗಾಗಿ ವಿಳಂಬ ವಿದ್ಯುತ್ ಬಿಲ್ ಪಾವತಿಗೆ ಯಾವುದೇ ದಂಡ ಅಥವಾ ಬಡ್ಡಿ ವಿಧಿಸಲ್ಲ ಎಂದು ಬೆಸ್ಕಾಂ ಈಗಾಗಲೇ ತಿಳಿಸಿದೆ.

ಮಾ.30ರೊಳಗೆ ಎಸ್ಕಾಂಗಳ ಆನ್‌ಲೈನ್‌ ಸೇವೆಗಳು ಯಥಾಸ್ಥಿತಿಗೆ; ವಿಳಂಬ ಬಿಲ್ ಪಾವತಿಗಿಲ್ಲ ಬಡ್ಡಿ

ಬೆಂಗಳೂರು: ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಸಲುವಾಗಿ ಮಾರ್ಚ್ 10 ರಿಂದ 19ರವರೆಗೆ ಎಲ್ಲಾ 5 ಎಸ್ಕಾಂಗಳ ನಗರ ಪ್ರದೇಶಗಳ (RAPDRP) ಸ್ಥಗಿತಗೊಂಡಿದ್ದ ಆನ್‌ಲೈನ್ ವಿದ್ಯುತ್ ಸೇವೆಗಳು (Escom Online Services) ಇದೀಗ ಪುನಾರಂಭಗೊಂಡಿದ್ದು, ಈ ತಿಂಗಳ 30ರೊಳಗೆ ಎಲ್ಲಾ ಆನ್‌ಲೈನ್ ಸೇವೆಗಳು ಯಥಾಸ್ಥಿತಿಗೆ ಬರಲಿವೆ ಎಂದು ಇಂಧನ ಇಲಾಖೆ ತಿಳಿಸಿದೆ.

ಸಾಫ್ಟ್‌ವೇ‌ರ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಬಿಲ್ ವಿಳಂಬ ಪಾವತಿಗೆ ಬಡ್ಡಿ ವಿಧಿಸುವುದಿಲ್ಲ ಹಾಗೂ ಈ ಸಂದರ್ಭದಲ್ಲಿ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಆಲ್‌ಲೈನ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸೇರಿದಂತೆ ಯಾವುದೇ ಆನ್ ಲೈನ್ ಸೇವೆಗಳು ಗ್ರಾಹಕರಿಗೆ ಲಭ್ಯವಿರಲಿಲ್ಲ. ಮಾ. 20ರಂದು ಆನ್‌ಲೈನ್ ಸೇವೆಗಳನ್ನು ಪುನಾರಂಭಗೊಳಿಸಲಾಗಿತ್ತು, ಆದರೆ ಕಳೆದ 10 ದಿನಗಳ ಕಾಲ ಸೇವೆ ಸ್ಥಗಿತಗೊಂಡಿದ್ದ ಕಾರಣ, ಎಲ್ಲಾ ಗ್ರಾಹಕರು ಕಳೆದ ಎರಡು ದಿನಗಳಿಂದ ಒಂದೇ ಬಾರಿ ವಿದ್ಯುತ್ ಬಿಲ್ ಪಾವತಿಸಲು ಎಸ್ಕಾಂಗಳ ಕೌಂಟರುಗಳಿಗೆ ದೌಡಾಯಿಸಿದ್ದರಿಂದ ಸರ್ವರ್ ಓವರ್‌ಲೋಡ್ ಆಗಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದನ್ನು ಹಂತ ಹಂತವಾಗಿ ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಮಾ. 30ರೊಳಗೆ ಆನ್ ಲೈನ್ ವಿದ್ಯುತ್ ಸೇವೆಗಳು ಯಥಾಸ್ಥಿತಿಯಲ್ಲಿ ಕಾರ್ಯ ನಿರ್ಹಹಿಸಲಿದೆ ಎಂದು ಇಂಧನ ಇಲಾಖೆ ತಿಳಿಸಿದೆ.

ಈ ಸೇವಾ ಸ್ಥಗಿತ ಅವಧಿಯಲ್ಲಿ ಬಿಲ್ ಪಾವತಿಸಲು ಅಥವಾ ಇತರ ವಿದ್ಯುತ್ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಸಾಧ್ಯವಾಗಿಲ್ಲ, ಹಾಗಾಗಿ ವಿಳಂಬ ವಿದ್ಯುತ್ ಬಿಲ್ ಪಾವತಿಗೆ ಯಾವುದೇ ದಂಡ ಅಥವಾ ಬಡ್ಡಿ ವಿಧಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ | Money Guide: ಏ. 1ರಿಂದ ಹೊಸ ತೆರಿಗೆ ನಿಯಮಗಳ ಜಾರಿ; ಏನೆಲ್ಲ ಬದಲಾವಣೆ ?

ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಅದು ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಲಿದೆ ಎಂದು ಇಲಾಖೆ ಈಗಾಗಲೇ ಗ್ರಾಹಕರಿಗೆ ತಿಳಿಸಿದೆ.

Exit mobile version