Site icon Vistara News

ಬೆಂಗಳೂರಿನಲ್ಲಾದ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ದುರಂತದಿಂದ ಎಚ್ಚೆತ್ತ ಬೆಸ್ಕಾಂ

ಬೆಂಗಳೂರು: ಮಂಗನಹಳ್ಳಿ ಬ್ರಿಡ್ಜ್‌ ಬಳಿ ಟ್ರಾನ್ಸ್‌ ಫಾರ್ಮರ್‌ ಸ್ಟೋಟಗೊಂಡು ಚೈತನ್ಯಾ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಸ್ಟೋಟದಲ್ಲಿ ಗಾಯಗೊಂಡಿದ್ದ ತಂದೆ ಶಿವರಾಜ್‌ ಕೂಡ ಕೊನೆಯುಸಿರೆಳೆದಿದ್ದರು. ಸಾರ್ವಜನಿಕರಿಂದ ಈ ಕುರಿತು ವ್ಯಕ್ತವಾದ ವಿರೋಧಕ್ಕೆ ಎಚ್ಚೆತ್ತಿರುವ ಬೆಸ್ಕಾಂ ಇದೀಗ ಟ್ರಾನ್ಸ್‌ಫಾರ್ಮರ್‌ಗಳ ಸುರಕ್ಷತಾ ಅಭಿಯಾನ ಆರಂಭಿಸಲು ನಿರ್ಧರಿಸಿದೆ.

ಮಂಗನಹಳ್ಳಿಯಲ್ಲಿ ಮಾರ್ಚ್‌ 24ರಂದು ಕಲ್ಯಾಣ ಮಂಟಪ ಬುಕ್‌ ಮಾಡಿ ಬರಲು ತೆರಳಿದ್ದ ತಂದೆ-ಮಗಳು ಈ ಅಪಾಯಕ್ಕೆ ಗುರಿಯಾಗಿದ್ದರು. ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಅರ್‌ ದಾಖಲಾಗಿತ್ತು. ಇದರಿಂದ ಎಚ್ಚೆತ್ತ ಬೆಸ್ಕಾಂ ಟ್ರಾನ್ಸ್ ಫಾರ್ಮರ್ ನಿರ್ವಹಣೆ ಅಭಿಯಾನಕ್ಕೆ ಚಾಲನೆ ನೀಡಿದೆ. ಇಂಧನ ಇಲಾಖೆ ವತಿಯಿಂದ ರಾಜ್ಯಾದ್ಯಂತ ನಡೆಯಲಿರುವ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನ ಆಗಿರುವ ಹತ್ತು ದಿನಗಳ ಟ್ರಾನ್ಸಫಾರ್ಮರಗಳ ನಿರ್ವಹಣಾ ಅಭಿಯಾನಕ್ಕೆ ಬೆಸ್ಕಾಂ (BESCOM) ಇಂದಿನಿಂದ ಚಾಲನೆ ನೀಡಿದೆ.

ಇದನ್ನೂ ಓದಿ : Video | ಬೆಂಗಳೂರಿನಲ್ಲಿ ತೆಂಗಿನ ಮರಕ್ಕೆ ಬಡಿದ ಸಿಡಿಲು: ರಾಜಧಾನಿಯಲ್ಲಿ ಮಳೆ ಆರ್ಭಟ

ಮುಖ್ಯ ಉದ್ದೇಶ :

ನ್ಯೂನ್ಯತೆ ಹೊಂದಿರುವ, ಕೆಟ್ಟಿರುವ ಟ್ರಾನ್ಸಫಾರ್ಮರ್‌ಗಳ ಸಮರ್ಪಕ ನಿರ್ವಹಣೆ ಮಾಡುವುದು ಮತ್ತು
ರಸ್ತೆಗಳ ಮೇಲಿರುವ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
ಟ್ರಾನ್ಸ್‌ಫಾರ್ಮರಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ,ಪಾದಚಾರಿ ರಸ್ತೆಗಳಲ್ಲಿರುವ ಎಲ್ಲಾ ಟ್ರಾನ್ಸ್‌ಫಾರ್ಮರ್‌ಗಳನ್ನು ಏಕಕಾಲದಲ್ಲಿ ಮೇಲ್ದರ್ಜೆಗೆ ಏರಿಸುವ ಕಾರ್ಯ, ಟ್ರಾನ್ಸ್ ಫಾರ್ಮರ್ ಗಳ ಆಡಿಟ್ ಕಾರ್ಯ
ಕೆಟ್ಟಿರುವ, ದುರಸ್ಥಿಯಲ್ಲಿರುವ ಟ್ರಾನ್ಸ್ ಫಾರ್ಮರ್ ಗಳನ್ನು ಬದಲಿಸಿ ಹೊಸ ಟ್ರಾನ್ಸ್ ಟ್ರಾನ್ಸ್‌ಫಾರರ್ಮರ್‌ ವಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ ಆಗಿದೆ.

Exit mobile version