Site icon Vistara News

BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

Bescom Helpline

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ-ಮಳೆಗೆ ವಿದ್ಯುತ್‌ ಕಂಬಗಳು ಮುರಿದು, ವಿದ್ಯುತ್‌ ಮೂಲ ಸೌಕರ್ಯ ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್‌ ಸಮಸ್ಯೆಗಳನ್ನು (rain damage) ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನು (BESCOM Helpline) ಬೆಸ್ಕಾಂ ನೀಡಿದೆ.

ವಾಟ್ಸ್‌ಆ್ಯಪ್‌ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ತಮ್ಮ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ಜತೆಗೆ ಎಸ್‌ಎಂಎಸ್‌ಗಳನ್ನು ಕಳುಹಿಸಲು ಬೆಸ್ಕಾಂ ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್‌ ಸಂಖ್ಯೆಗಳನ್ನು ಕೂಡ ಒದಗಿಸಲಾಗಿದೆ.

ಇದನ್ನೂ ಓದಿ | Mahila Samman Saving Certificate : ಮಹಿಳಾ ಸಮ್ಮಾನ್‌ ಸೇವಿಂಗ್‌ ಸರ್ಟಿಫಿಕೇಟ್‌ಗೆ 7.5% ಬಡ್ಡಿ, ಏಪ್ರಿಲ್‌ 1ರಿಂದ ಲಭ್ಯ

ಜಿಲ್ಲಾವಾರು ವಾಟ್ಸ್‌ಆ್ಯಪ್‌ ಸಂಖ್ಯೆಗಳು

ಬೆಂಗಳೂರು ಪೂರ್ವ- 8277884013, ಬೆಂಗಳೂರು ಪಶ್ಚಿಮ- 8277884012, ಬೆಂಗಳೂರು ಉತ್ತರ- 8277884014, ಬೆಂಗಳೂರು ದಕ್ಷಿಣ- 8277884011. ಕೋಲಾರ- 8277884015, ಚಿಕ್ಕಬಳ್ಳಾಪುರ- 8277884016, ಬೆಂಗಳೂರು ಗ್ರಾಮಾಂತರ- 8277884017, ರಾಮನಗರ- 8277884018, ತುಮಕೂರು- 8277884019, ಚಿತ್ರದುರ್ಗ- 8277884020 ಹಾಗೂ ದಾವಣಗೆರೆ- 8277884021.

ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸ್‌ಆ್ಯಪ್‌ ಸಂಖ್ಯೆ: 9483191212, 9483191222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್‌ ಆಪ್‌ ಸಂಖ್ಯೆ- 9449844640.

ಈ ಕೆಳಗಿನ ಮೊಬೈಲ್‌ ಸಂಖ್ಯೆಗಳು- ಕೇವಲ ಎಸ್‌ಎಂಎಸ್‌ಗಳಿಗೆ ಮಾತ್ರ: 9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118 ಮತ್ತು 9480816119.

Exit mobile version