ಬೆಂಗಳೂರು: ಕರೆಂಟ್ ಬಿಲ್ ಕಟ್ಟದೆ ಸಾವಿರಾರು ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಸಂಸ್ಥೆಗಳಿಗೆ ಬೆಸ್ಕಾಂ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಮೊದಲು ಕರೆಂಟ್ ಬಿಲ್ ಕಟ್ಟಿ ನಂತರ ವಿದ್ಯುತ್ ಬಳಸುವಂತೆ ತಾಕೀತು (Bescom Prepaid Meter) ಮಾಡಿದ್ದಾರೆ.
ಒಟ್ಟು 5,058 ಕೋಟಿ ರೂಪಾಯಿ ಕರೆಂಟ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿದ್ದು, ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ, ಕ್ಯಾರೆ ಎನ್ನದ ಸರ್ಕಾರಿ ಸಂಸ್ಥೆಗಳಿಗೆ ಬೆಸ್ಕಾಂ ಬಿಸಿ ಮುಟ್ಟಿಸಿದೆ. ಈಗ ಒಂದು ಹೆಜ್ಜೆ ಮುಂದಕ್ಕೆ ಹೋದ ಬೆಸ್ಕಾಂ ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಮೊದಲು ದುಡ್ಡು ಕಟ್ಟಿ, ಆ ಮೇಲೆ ವಿದ್ಯುತ್ ಬಳಸಿ ಎನ್ನುತ್ತಿದ್ದಾರೆ.
ಪ್ರೀಪೇಡ್ ಮೀಟರ್ ಅಳವಡಿಕೆ
ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಕಟ್ಟಡಗಳಿಗೆ ಪ್ರೀಪೇಡ್ ಮೀಟರ್ ಅಳವಡಿಕೆಗೆ ಬೆಸ್ಕಾಂ ನಿರ್ಧಾರ ಮಾಡಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸೂಚನೆಗಾಗಿ ಬೆಸ್ಕಾಂ ಅಧಿಕಾರಿಗಳು ಕಾಯುತ್ತಿದ್ದಾರೆ. ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಕಾರ್ಯರೂಪಕ್ಕೆ ತರಲಿದ್ದಾರೆ. ಈ ಮೂಲಕ ಬೆಸ್ಕಾಂ ನಿಗಮಕ್ಕೆ ಸಾವಿರಾರು ಕೋಟಿ ರೂಪಾಯಿ ಹೊರೆ ತಪ್ಪಲಿದೆ.
ಏನಿದು ಪ್ರೀಪೇಡ್ ಮೀಟರ್?
• ಮೊದಲಿಗೆ ತಿಂಗಳಿಗೆ ಬೇಕಾಗುವಷ್ಟು ವಿದ್ಯುತ್‌ಗೆ ಮುಂಗಡ ಪಾವತಿ ಮಾಡಬೇಕು
• ಪ್ರತಿ ತಿಂಗಳ ಆರಂಭದಲ್ಲಿ ಬೆಸ್ಕಾಂ ರೀಚಾರ್ಜ್ ಮಾಡಿದರೆ ಕರೆಂಟ್
• ತಿಂಗಳಿಗೆ ಕೊರತೆ ಎದುರಾದರೆ ಮತ್ತೆ ರೀಚಾರ್ಜ್ ಮಾಡಿಕೊಳ್ಳಲು ವ್ಯವಸ್ಥೆ
• ಮೊಬೈಲ್ ರೀಚಾರ್ಜ್ ಮಾದರಿಯಲ್ಲೇ ಇರಲಿರುವ ಪ್ರೀಪೇಡ್ ಮೀಟರ್
• ಈ ಮೂಲಕ ಸರ್ಕಾರಿ ಕಚೇರಿಗಳ ಕರೆಂಟ್ ಬಿಲ್ ಕಳ್ಳಾಟಕ್ಕೆ ಬ್ರೇಕ್
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ