ಭದ್ರಾವತಿ: ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿ ಯುವಕರೊಬ್ಬ್ಬರು ಏಕಾಂಗಿಯಾಗಿ ಶುಕ್ರವಾರ (ಜ.೨೭) ಪ್ರತಿಭಟನೆ ನಡೆಸಿದ್ದಾರೆ.
ಜೆಡಿಯುನ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಅವರು, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆ ಸಾವಿರಾರು ಜನರಿಗೆ ಬದುಕು ನೀಡಿದೆ. ಗುತ್ತಿಗೆ ಕಾರ್ಮಿಕರು, ಕಾಯಂ ಕೆಲಸಗಾರರು, ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ನಿವೃತ್ತ ನೌಕರರು ಕೂಡ ಕಾರ್ಖಾನೆಯ ಕ್ವಾಟ್ರಸ್‍ಗಳಲ್ಲಿ ವಾಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಈಗ ಈ ಕಾರ್ಖಾನೆಯನ್ನು ನಷ್ಟದ ನೆಪವೊಡ್ಡಿ ಮುಚ್ಚಲು ಆದೇಶ ಮಾಡಿದೆ. ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬರುತ್ತಾರೆ ಎಂದು ಅವರು ದೂರಿದರು.
ಇದನ್ನೂ ಓದಿ | IND VS NZ: ಭಾರತ-ಕಿವೀಸ್ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ; ಉಭಯ ತಂಡಗಳ ರೆಕಾರ್ಡ್ ಹೇಗಿದೆ?
ಪಕ್ಷಾತೀತವಾಗಿ ಈ ಕಾರ್ಖಾನೆಯನ್ನು ಉಳಿಸಬೇಕಾಗಿದೆ. ಎಲ್ಲ ಪಕ್ಷದ ಚುನಾಯಿತ ಪ್ರತಿನಿಧಿಗಳು, ಶಾಸಕರು, ಕ್ರೀಡಾಪಟುಗಳು, ಸಂಘ ಸಂಸ್ಥೆಗಳು ಎಲ್ಲರೂ ಸೇರಿಕೊಂಡು ಪ್ರಧಾನ ಮಂತ್ರಿಗಳ ಬಳಿ ರಾಜ್ಯ ಸರ್ಕಾರ ನಿಯೋಗ ಹೋಗಬೇಕು. ಇಲ್ಲದಿದ್ದರೆ ಕಾರ್ಖಾನೆ ಉಳಿಸಲು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | U19 WOMEN’S T20 WORLD CUP : ನ್ಯೂಜಿಲ್ಯಾಂಡ್ ಮಣಿಸಿ ಫೈನಲ್ಗೇರಿದ ಭಾರತದ ವನಿತೆಯರು