Site icon Vistara News

Bhadravati News: ಪರೀಕ್ಷೆಯ ಅಂಕ ಗಳಿಕೆಯೇ ಜೀವನವಲ್ಲ: ಪ್ರಸನ್ನನಾಥ ಸ್ವಾಮೀಜಿ

Prasannanatha Swamiji BGS Gurukul

#image_title

ಭದ್ರಾವತಿ: ಪರೀಕ್ಷೆಯ ಅಂಕ ಗಳಿಕೆಯೇ ಜೀವನವಲ್ಲ, ವ್ಯಾಸಂಗದ ಮೂಲಕ ಗಳಿಸುವ ಅಂಕ ಗಳಿಕೆಯೊಂದೇ ಜೀವನವಲ್ಲ. ಬದುಕಿನ ಪ್ರತಿ ಘಳಿಗೆಯನ್ನು ಪ್ರಜ್ಞಾಪೂರ್ವಕವಾಗಿ ಕಳೆಯಬೇಕು. ಮೊದಲು ನಮಗೆ ನಾವು ಬೆಳಕಾಗಬೇಕು, ನಮ್ಮ ಬದುಕು ಬೆಳಗುತ್ತಿದ್ದರೆ, ಬೇರೆಯವರಿಗೆ ಬೆಳಕು ಸಿಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶಿವಮೊಗ್ಗ ಶಾಖೆಯ ಭದ್ರಾವತಿ ತಾಲೂಕಿನ ಬೈಪಾಸ್ ರೋಡಿನಲ್ಲಿರುವ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬಿಜಿಎಸ್ ಗುರುಕುಲೋತ್ಸವ 2022- 23ನೇ ಸಾಲಿನ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಾವು ಬೆಳೆಯುವ ಜತೆಗೆ ಇನ್ನೊಬ್ಬರನ್ನು ಬೆಳೆಸುವ ಸಾಮರ್ಥ್ಯ ಪಡೆಯಲು ಮೊದಲು ನಮ್ಮ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ | IAF Fighter Jets Crash: ಮಧ್ಯಪ್ರದೇಶದಲ್ಲಿ ಐಎಎಫ್​ ವಿಮಾನ ಪತನ; ಮೃತಪಟ್ಟಿದ್ದು ಬೆಳಗಾವಿ ಮೂಲದ ವಿಂಗ್​ ಕಮಾಂಡರ್​

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೇ ರೀತಿಯ ಗ್ರಹಿಕ ಶಕ್ತಿ ಹಾಗೂ ಸಾಮರ್ಥ್ಯ ಇರಲು ಸಾಧ್ಯವಿಲ್ಲ. ಹಾಗಾಗಿ ಪೋಷಕರು ಮಕ್ಕಳ ಅಭಿರುಚಿಗೆ ತಕ್ಕ ಪ್ರೋತ್ಸಾಹ ನೀಡಿದರೆ ಅವರು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ | Ratha Saptami 2023: ರಾಜ್ಯಾದ್ಯಂತ ಸೃಷ್ಟಿಕರ್ತನಿಗೆ ಶ್ರದ್ಧಾ ಯೋಗ; ಓ ಸೂರ್ಯ ನಿನಗೆ ನಮನ

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣರಾಗುತ್ತಿದ್ದಾರೆ. ಆದರೆ, ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಗಳಲ್ಲಿ ನಮ್ಮ ಸಾಧನೆ ಅತ್ಯಂತ ಕಡಿಮೆ. ವಿದ್ಯಾರ್ಥಿಗಳು ಕೇವಲ ಅಂಕಕ್ಕಾಗಿ ಓದುತ್ತಿದ್ದಾರೆ. ಅಂಕ ಗಳಿಕೆಯೊಂದಿಗೆ ಅರಿವಿನ ವಿಸ್ತಾರಕ್ಕೂ ಒತ್ತು ನೀಡಬೇಕೆಂದು ಉಪನಿರ್ದೇಶಕ ಪರಮೇಶ್ವರಪ್ಪ ಅಭಿಪ್ರಾಯಪಟ್ಟರು. ಮೊಬೈಲ್, ಇಂಟರ್ನೆಟ್ ಬಳಕೆ ಹೆಚ್ಚಿದ ಕಾರಣ ವಿದ್ಯಾರ್ಥಿಗಳು ಓದಿಗೆ ಗಮನ ನೀಡುತ್ತಿಲ್ಲ ಎಂಬ ದೂರು ಪಾಲಕರು ಹಾಗೂ ಶಿಕ್ಷಕರದ್ದು, ಶೇ. 10 ಮಕ್ಕಳು ಮಾತ್ರ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದು, ಬಹಳಷ್ಟು ವಿದ್ಯಾರ್ಥಿಗಳು ಓದಿಗೆ ಅಷ್ಟಾಗಿ ಮಹತ್ವ ನೀಡುತ್ತಿಲ್ಲ ಎಂಬುದು ದೃಢವಾಗುತ್ತದೆ ಎಂದರು.

ಇದನ್ನೂ ಓದಿ | Rajinikanth: ಕುಡಿತ, ನಾನ್ ವೆಜ್, ಸಿಗರೇಟ್ ಚಟಕ್ಕೆ ಒಳಗಾಗಿದ್ದ ನನ್ನನ್ನು ಬದಲಾಯಿಸಿದ್ದೇ ನನ್ನ ಪತ್ನಿ: ರಜನಿಕಾಂತ್‌

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕ ಸತೀಶ್ ಡಿ.ವಿ , ಭದ್ರಾವತಿ ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ರಮೇಶ್, ಟ್ರಸ್ಟ್ ನ ಭದ್ರಾವತಿ ಶಾಖೆಯ ಆಡಳಿತಾಧಿಕಾರಿ ಜಗದೀಶ್ ಬಿ , ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೇಶವ ಮೂರ್ತಿ ಜಿ., ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ, ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಭರತನಾಟ್ಯ , ಯಕ್ಷಗಾನ ಸೇರಿದಂತೆ ವಿವಿಧ ಜನಪದ ಸಾಂಸ್ಕೃತಿಕ ವೈಭವವನ್ನು ವಿದ್ಯಾರ್ಥಿಗಳು ಆಕರ್ಷಕವಾಗಿ ಪ್ರದರ್ಶನ ನೀಡಿದರು.

ಇದನ್ನೂ ಓದಿ | Prajadhwani : ಯಾರಿಗೇ ಟಿಕೆಟ್‌ ಕೊಟ್ಟರೂ ಕೆಲಸ ಮಾಡಿ; ಕೈತಪ್ಪಿದವರಿಗೆ MLC, ನಿಗಮ ಮಂಡಳಿ: ಡಿ.ಕೆ. ಶಿವಕುಮಾರ್‌ ಹೇಳಿಕೆ

Exit mobile version