Site icon Vistara News

ಒಕ್ಕಲಿಗರ ಸಂಘಕ್ಕೆ ನಿವೇಶನ ಒದಗಿಸುವ ಭರವಸೆ ನೀಡಿದ ಭೈರತಿ ಬಸವರಾಜ್‌

Okkaliga

ಬೆಂಗಳೂರು: ಒಕ್ಕಲಿಗರ ಸಂಘಕ್ಕೆ ನಿವೇಶನ ಹಾಗೂ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ಒದಗಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಭರವಸೆ ನೀಡಿದರು. ರಾಮಮೂರ್ತಿ ನಗರದ ಕಲ್ಕೆರೆ ಮುಖ್ಯ ರಸ್ತೆಯಲ್ಲಿರುವ ಕೃಷ್ಣ ಫ್ಲವರ್‌ ಪಾರ್ಟಿ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಒಕ್ಕಲಿಗರ ಸಂಘದ ವಾರ್ಷಿಕೋತ್ಸವದಲ್ಲಿ ಅವರು ಭರವಸೆ ನೀಡಿದರು.

ಸಂಘ ಸ್ಥಾಪನೆಯಾಗಿ ಎರಡು ವರ್ಷ ಕಳೆದರೂ ಸಂಘದ ಚಟುವಟಿಕೆಗಳಿಗೆ ಸ್ವಂತ ನಿವೇಶನವಿಲ್ಲದಿರುವ ಬಗ್ಗೆ ಸಂಘದ ವತಿಯಿಂದ ಬೇಡಿಕೆ ಸಲ್ಲಿಸಿದಾಗ ಸಚಿವರು ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದರು. ಜಾಗ ಗುರುತಿಸಿದರೆ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಒಕ್ಕಲಿಗ ಸಂಘದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶಿವಣ್ಣವರಿಗೆ ೮೪ನೇ ವಾರ್ಡ್‌ನಿಂದ ಟಿಕೆಟ್‌ ದೊರಕಿಸಿಕೊಡುವಂತೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮೊದಲು ಒಕ್ಕಲಿಗ ಸಂಘದ ಸದಸ್ಯತ್ವ ಪಡೆದ ಹಲವರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಸದಸ್ಯತ್ವ ಪಡೆಯ ಬಯಸುವವರಿಗೆ ಸ್ಥಳದಲ್ಲೇ ನೋಂದಣಿಯ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಣ್ಣ, ಒಕ್ಕಲಿಗ ಸಮುದಾಯದ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದರು. ಉಪಾಧ್ಯಕ್ಷೆ ವಿನುತಾ ಗೌಡ, ಕಾರ್ಯದರ್ಶಿ ರಾಜೇಗೌಡ, ಪದಾಧಿಕಾರಿಗಳಾದ ನಾಗೇಶ್‌ ಗೌಡ, ಮಧು ಗೌಡ, ನಂಜಪ್ಪ, ನಂಜೇಗೌಡ, ಶಂಭುಲಿಂಗ ಗೌಡ, ಶಿವಲಿಂಗೇ ಗೌಡ, ರವಿಕುಮಾರ್‌, ವಾಸಣ್ಣ, ಸ್ವಾತಿ ವೆಂಕಟೇಶ್‌, ಶ್ರೀಧರ್‌, ಕೇಬಲ್‌ ಟಿವಿ ಆನಂದ್‌ ಉಪಸ್ಥಿತರಿದ್ದರು.

ಇದನ್ನೂ ಓದಿ | SCST ಮೀಸಲು| ಒಕ್ಕಲಿಗರಿಂದಲೂ ಮೀಸಲು ಹೆಚ್ಚಳ ಬೇಡಿಕೆ: 4%ನಿಂದ 12ಕ್ಕೆ ಏರಿಸಿ ಎಂದ ನಿರ್ಮಲಾನಂದನಾಥ ಶ್ರೀ

Exit mobile version