ಬೆಂಗಳೂರು: ಲಾಸ್ಯವರ್ಧನ ಟ್ರಸ್ಟ್ ವತಿಯಿಂದ ನಾಟ್ಯಗುರು ಮಾಲಿನಿ ರವಿಶಂಕರ್ ಅವರ ಶಿಷ್ಯೆ ಭೂಮಿಕಾ ವಿ. ಅವರ ರಂಗಪ್ರವೇಶ (Ranga Pravesha) ಕಾರ್ಯಕ್ರಮವನ್ನು ಮೇ 1 ರಂದು ಸಂಜೆ 5.30ಕ್ಕೆ ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವೇಣುಗೋಪಾಲ್ ಆರ್.ಎಸ್. ಮತ್ತು ವಿಜಯಲಕ್ಷ್ಮಿ ಡಿ.ಎಸ್. ದಂಪತಿ ಪುತ್ರಿಯಾದ ಭೂಮಿಕಾ ವಿ. ಅವರು ನಾಟ್ಯಗುರು ಮಾಲಿನಿ ರವಿಶಂಕರ್ ಅವರ ಬಳಿ ನೃತ್ಯ ತರಬೇತಿ ಪಡೆದಿದ್ದು, ಮೇ 1 ರಂದು ಚೊಚ್ಚಲ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಜೈನ್ ವಿಶ್ವವಿದ್ಯಾಲಯದ ಕಲಾ ಪ್ರದರ್ಶನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಿಯಶ್ರೀ ವಿ. ರಾವ್, ರಾಜ್ಯ ಕ್ರಿಕೆಟ್ ಆಟಗಾರ್ತಿ ಹಾಗೂ ಆರ್‌ಸಿಬಿ ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಭಾಷಣಕ್ಕೆ ನಿಂತಾಗ ನಿಮಗೆ ಮೈ ನಡುಗುತ್ತದೆಯೇ? ಈ ಸಭಾ ಕಂಪನ ಗೆಲ್ಲಲು ಇಲ್ಲಿವೆ 13 ಟಿಪ್ಸ್!
ಹಿಮ್ಮೇಳದಲ್ಲಿ ನಟುವಾಂಗಂ ಕಲಾವಿದರಾದ ಕಲಾಯೋಗಿ ಗುರು ಡಾ.ಮಾಲಿನಿ ರವಿಶಂಕರ್, ಧ್ವನಿ ಸಂಯೋಜನೆ ಡಾ.ರಮ್ಯಾ ಸೂರಜ್, ಮೃದಂಗ ವಾದಕ ವಿದ್ವಾನ್ ಜನಾರ್ದನ ರಾವ್, ವೀಣೆ ವಾದಕ ವಿದ್ವಾನ್ ವಿ.ಗೋಪಾಲ್, ಕೊಳಲು ವಾದಕ ನರಸಿಂಹ ಮೂರ್ತಿ, ರಿಥಂ ಪ್ಯಾಡ್ ಕಲಾವಿದ ಪ್ರಸನ್ನ ಕುಮಾರ್ ಸಹಕಾರ ನೀಡಲಿದ್ದಾರೆ.