ಬಸವಕಲ್ಯಾಣ: ಬ್ಯಾಂಕ್‌ನಿಂದ (Bank) ಹಣ ಡ್ರಾ ಮಾಡಿಕೊಂಡು ಬೈಕ್‌ನಲ್ಲಿ (Bike) ಇಟ್ಟುಕೊಂಡು ತೆರಳುವ ಗ್ರಾಹಕರನ್ನೇ (Customers) ಗುರಿ ಮಾಡಿಕೊಂಡು ಹಣ ಕಳ್ಳವು ಮಾಡುತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು (interstate thieves) ಬಂಧಿಸುವಲ್ಲಿ ಬಸವಕಲ್ಯಾಣ ನಗರ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿದೆ.
ತೆಲಂಗಾಣದ ಭದ್ರಾದ್ರಿ ಜಿಲ್ಲೆಯ ಮೂಲದ ಪ್ರಕಾಶ ನಾರಾಯಣ ಮೇಕಾಲಾ ಹಾಗೂ ರಾಜೇಶ ಮೇಕಾಲಾ ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: Road Accident : ಬೈಕ್‌ಗೆ ಡಿಕ್ಕಿ ಹೊಡೆದ ಟ್ರಾಕ್ಟರ್; ಪ್ರಾಣ ಬಿಟ್ಟ ಸವಾರ
ಕಳೆದ ಕೆಲ ದಿನಗಳ ಹಿಂದೆ ನಗರದ ಹರಳಯ್ಯ ವೃತ್ತದಲ್ಲಿ ಕಲೀಮ್ ಎನ್ನುವ ವ್ಯಕ್ತಿಯೊಬ್ಬರು ತಮ್ಮ ಕಾರಿನಲ್ಲಿ 70 ಸಾವಿರ ರೂ. ಹಣ ಇಟ್ಟು ಹೊರಗಡೆ ಹೋಗಿದ್ದರು. ಈ ವೇಳೆ ಕಾರಿಗೆ ಹಿಂಬಾಲಿಸಿಕೊಂಡು ಬಂದ ಆರೋಪಿ ಕಳ್ಳರು ಕಾರಿನ ಗ್ಲಾಸ್ ಒಡೆದು ಹಣ ಕಳವು ಮಾಡಿಕೊಂಡು ನಾಪತ್ತೆಯಾಗಿದ್ದರು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರ ತಂಡ ಎಸ್ಪಿ ಚನ್ನಬಸವಣ್ಣ ಲಂಗೋಟಿ, ಸಿಪಿಐ ರಘುವೀರಸಿಂಗ್ ಠಾಕೂರ ಸೇರಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿದ ನಗರ ಠಾಣೆ ಪಿಎಸ್ಐ ಅಮರಕುಲಕರ್ಣಿ, ಕ್ರೈಂ ವಿಭಾಗದ ಪಿಎಸ್ಐ ರೇಣುಕಾ ಉಡುಗಿ, ಪಿಸಿ ಉಮೇಶ್ ಬಿರಾದಾರ ನೇತೃತ್ವದ ಪೊಲೀಸರ ತಂಡ ತ್ರಿಪುರಾಂತನಲ್ಲಿ ಕಳ್ಳರು ಬೈಕ್‌ನಲ್ಲಿ ತೆರಳುತಿದ್ದಾಗ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Asia Cup 2023 : ಡಾಲರ್ನಲ್ಲಿ ಹಣ ಕೊಡಿ, ಲಂಕಾದಲ್ಲಿ ಕ್ರಿಕೆಟ್ ಮ್ಯಾಚ್ ನೋಡಿ!
ಬಂಧಿತ ಆರೋಪಿಗಳಿಂದ 40800 ರೂ. ನಗದು ಹಣ ಹಾಗೂ ಒಂದು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ.