Site icon Vistara News

Bidar News: ಬಸವ ಜಯಂತಿ ಹಿನ್ನೆಲೆ ಹುಲಸೂರಲ್ಲಿ ಬಸವೇಶ್ವರ ಮೂರ್ತಿಯ ಭವ್ಯ ಮೆರವಣಿಗೆ

Bidar News Basava Jayanti Grand procession of Basaveshwara idol

ಹುಲಸೂರ: ಪಟ್ಟಣದ ಹಾಲಹಳ್ಳಿ ರಸ್ತೆಯಲ್ಲಿರುವ ಶ್ರೀ ಜಗದ್ಗುರು ಅಲ್ಲಮ ಪ್ರಭುಗಳ ಶೂನ್ಯಪೀಠ ಅನುಭವ ಮಂಟಪದ ಬಳಿ ಬಸವ ಜಯಂತಿಯ ಅಂಗವಾಗಿ ಶ್ರೀ ಬಸವೇಶ್ವರ ಮೂರ್ತಿಯ (Basaveshwara Idol) ಮೆರವಣಿಗೆಗೆ ಚಾಲನೆ ನೀಡಲಾಯಿತು.

ಪಟ್ಟಣದ ಪಿ.ಕೆ.ಪಿ.ಎಸ್ ಅಧ್ಯಕ್ಷ ಓಂಕಾರ ಪಟ್ನೆ ಅವರು ಟ್ರ್ಯಾಕ್ಟರ್‌ ವಾಹನದಲ್ಲಿ ಅಲಂಕರಿಸಿದ್ದ ಬಸವೇಶ್ವರರ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾಹಾರ ಅರ್ಪಿಸಿ ಚಾಲನೆ ನೀಡಿದರು.

ಅಲ್ಲಮ ಪ್ರಭುಗಳ ಶೂನ್ಯ ಪೀಠದಿಂದ ಪ್ರಾರಂಭವಾದ ಬಸವೇಶ್ವರ ಮೆರವಣಿಗೆಯು ಲದ್ದಿ ಸೋಮಣ್ಣ ದೇವಸ್ಥಾನ, ಲಕ್ಷ್ಮಿ ದೇವಸ್ಥಾನ, ಗಾಂಧಿವೃತ್ತ, ಬಸವಣ್ಣ ಕಟ್ಟಿ, ಮುಖ್ಯ ರಸ್ತೆ ಮುಖಾಂತರ ಲಾತೂರ ಬೀದರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಸವೇಶ್ವರ ವೃತ್ತದವರೆಗೆ ನಡೆಯಿತು.

ಇದನ್ನೂ ಓದಿ: SSLC Exam 2023: ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಪ್ರಕ್ರಿಯೆ ಆರಂಭ; ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟ

ಮೆರವಣಿಗೆಯಲ್ಲಿ ಜೈ ಬಸವೇಶ, ಅಣ್ಣ ಬಸವಣ್ಣನವರಿಗೆ ಜಯವಾಗಲಿ ಎಂಬ ಜಯಘೋಷಗಳು ಮೊಳಗಿದವು. ಈ ಸಂದರ್ಭದಲ್ಲಿ ಬಸವರಾಜ ಕಾಡಾದಿ, ಸಂಗಮೇಶ ಕುಡಂಬಲೆ, ಚಂದ್ರಕಾಂತ ದೇಟ್ನೆ, ಬಸವರಾಜ ಡೋಣಗಾಂವಕರ, ಬಾಲಾಜಿ ಗೌಡಗಾಂವೆ, ಶಿವರಾಜ ಖಪಲೆ, ಪ್ರವೀಣ ಕಾಡಾದಿ, ಸಂಗಮೇಶ ಭೋಪಳೆ, ಅರವಿಂದ ಹರಪಲೆ, ಬಸವರಾಜ ಬಾಲಕುಂದೆ, ರಮೇಶ ಭೋಪಳೆ, ಜಗದೀಶ ದೇಟ್ನೆ, ರಾಜಕುಮಾರ ಮಂಗಾ, ಜಗನ್ನಾಥ ಭೋಪಳೆ, ಲವೀತ ಧರಮಾಣೆ, ರಾಜಕುಮಾರ ತೋಂಡಾರೆ, ರಾಜಕುಮಾರ ರಾಜೋಳೆ, ಸಚಿನ್‌ ಕವಟೆ, ಬಸವರಾಜ ಭೋಪಳೆ, ನಾಗೇಶ ನಿಲಂಗೆ, ಶಂಕರ ಗೌಡಗಾಂವೆ, ಕೇದರ ಭೋಪಳೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version