Site icon Vistara News

Bidar News : ಬಿಪರ್ ಜಾಯ್ ಸೈಕ್ಲೊನ್‌ ಎಫೆಕ್ಟ್‌; ಮಳೆ ವಿಳಂಬ ಸಾಧ್ಯತೆ

Assistant Director of Agriculture Department of Basavakalyan Taluk Marthand NM information

ಹುಲಸೂರ: ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕಿನಲ್ಲಿ ಮುಂಗಾರು ಬಿತ್ತನೆಗೆ (Monsoon sowing) ಅಗತ್ಯ ಸಿದ್ಧತೆ ಮಾಡಿಕೊಂಡು ಮಳೆ (Rain) ನಿರೀಕ್ಷೆಯಲ್ಲಿ ಕಾದಿರುವ ರೈತರು (Farmers) ಸಮರ್ಪಕ ಮಳೆಗಾಗಿ ಇನ್ನೊಂದು ವಾರ ಕಾಯಬೇಕಾಗಿದೆ ಎಂದು ಬಸವಕಲ್ಯಾಣ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಾರ್ಥಂಡ್ ಎನ್‌.ಎಂ. ಮಾಹಿತಿ ನೀಡಿದ್ದಾರೆ.

ಕರ್ನಾಟಕ ವಿಪತ್ತು ನಿರ್ವಹಣಾ ಸಂಸ್ಥೆ ಬೆಂಗಳೂರು ನ ವೆದರ್ ಫೋರ್‌ಕ್ಯಾಸ್ಟ್ ಮಾಹಿತಿಯಂತೆ ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಬಿಪರ್ ಜಾಯ್ ಸೈಕ್ಲೊನಿಕ್ ಎಫೆಕ್ಟ್‌ ನಿಂದಾಗಿ ಮಳೆ ವಿಳಂಬ ವಾಗುವ ಸಾಧ್ಯತೆಗಳು ಇರುವುದರಿಂದ ಮತ್ತು ಜೂನ್ 21 ರವರೆಗೆ ವೆದರ್ ಫೋರ್ಕಾಸ್ಟ್ ಮಾಹಿತಿಯಂತೆ ಮಳೆ ಪ್ರಮಾಣ ಅತಿ ಕಡಿಮೆ ಇರುತ್ತದೆ, ಆದ್ದರಿಂದ ರೈತ ಬಾಂಧವರು ಸೋಯಾಬೀನ್ ಬಿತ್ತನೆ ಬೀಜಗಳನ್ನು ತಮ್ಮ ಜಮೀನಿನಲ್ಲಿ 90 ಮಿಲಿ ಮೀಟರ್ ಮಳೆಯಾದ ನಂತರವೇ ಬಿತ್ತನೆ ಮಾಡಲು ಸಲಹೆ ನೀಡಲಾಗಿದೆ.

ಇದನ್ನೂ ಓದಿ: Eagle Movie : ಈಗಲ್‌ ರೂಪದಲ್ಲಿ ಬರಲಿದ್ದಾರೆ ರವಿತೇಜ! ಮುಂದಿನ ಸಂಕ್ರಾಂತಿಗೆ ಸಿನಿಮಾ ರಿಲೀಸ್‌

ಜೂನ್ 21ರ ನಂತರ ಮಳೆಯಾಗುವ ಸಾಧ್ಯತೆಗಳು ಇರುವುದರಿಂದ ರೈತ ಬಾಂಧವರು ಮಳೆಯಾಶ್ರಿತ ಪ್ರದೇಶದಲ್ಲಿ ಜೂನ್ 21ರ ಬಳಿಕ ಬಿತ್ತನೆ ಕೈಗೊಳ್ಳಲು ಕೋರಲಾಗಿದೆ, ಅದೇ ರೀತಿ ನೀರಾವರಿ ಪ್ರದೇಶ ಹೊಂದಿರುವ ರೈತ ಬಾಂಧವರು ಕೂಡ ತಮ್ಮ ಜಮೀನಿನಲ್ಲಿ ತುಂತುರು ನೀರಾವರಿ ಮುಖಾಂತರ ಸಾಕಷ್ಟು ತೇವಾಂಶ ಖಚಿತಪಡಿಸಿಕೊಂಡು ಬಿತ್ತನೆ ಮಾಡುವುದು ಸೂಕ್ತ. ಒಂದು ವೇಳೆ 90 ಮಿ.ಮೀ ಗಿಂತಲೂ ಕಡಿಮೆ ಮಳೆ ತೇವಾಂಶದಲ್ಲಿ ಸೋಯಾ, ಅವರೇ ಬಿತ್ತನೆ ಮಾಡಿದ್ದಲ್ಲಿ ಸೋಯಾ ಅವರೇ ಮೊಳಕೆ ಪ್ರಮಾಣದಲ್ಲಿ ತೀವ್ರ ಕುಂಠಿತ ಆಗುವ ಸಾಧ್ಯತೆಗಳಿರುತ್ತವೆ ಎಂದು ರೈತರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Free Electricity: ಗೃಹ ಜ್ಯೋತಿ ಅರ್ಜಿ ಸ್ವೀಕಾರ ಆರಂಭ ಮುಂದೂಡಿಕೆ; ದಿಢೀರ್‌ ನಿರ್ಧಾರಕ್ಕೆ ಕಾರಣವೇನು?

ಮಳೆಯ ಕೊರತೆ

ಜೂ. 1ರಿಂದ 12ರವರೆಗೆ ತಾಲೂಕಿನಲ್ಲಿ ವಾಡಿಕೆಯಂತೆ 40.1 ಮಳೆಯಾಗಬೇಕಿತ್ತು. ಆದರೆ ಕೇವಲ 9.7 ಎಂಎಂ. ಮಳೆಯಾಗಿದೆ. ಹೀಗಾಗಿ ಶೇ.76ರಷ್ಟು ಮಳೆಯ ಕೊರತೆಯಾಗಿದ್ದು ಬಸವಕಲ್ಯಾಣ ಹಾಗು ಕೋಹಿನೂರ ವಲಯದಲ್ಲಿ 7.8 ಎಂಎಂ, ಮಂಠಾಳ ವಲಯದಲ್ಲಿ 8.5 ಎಂಎಂ, ಮುಡಬಿ ವಲಯದಲ್ಲಿ 13.1 ಎಂಎಂ, ರಾಜೇಶ್ವರ ವಲಯದಲ್ಲಿ10.8 ಎಂಎಂ, ಹುಲಸೂರ ವಲಯದಲ್ಲಿ 4.2ಎಂಎಂ ಮಳೆಯಾದ ಬಗ್ಗೆ ವರದಿಯಾಗಿದೆ.

Exit mobile version