Site icon Vistara News

Bidar News: ಹುಲಸೂರ ಗ್ರಾಮ ಪಂಚಾಯಿತಿಗೆ ಒಲಿಯುವುದೇ ಪಪಂ ಭಾಗ್ಯ?

Hulasur Gram Panchayat in Bidar

ಶಿವರಾಜ ಖಪಲೆ, ಹುಲಸೂರ

ಹುಲಸೂರ: ಗಡಿ ರಾಜ್ಯಕ್ಕೆ ಹೊಂದಿಕೊಂಡಿರುವ ಹುಲಸೂರ ಕರ್ನಾಟಕದ (Karnataka) ತುತ್ತ ತುದಿಯಲ್ಲಿದ್ದು, ಪಟ್ಟಣದಿಂದ ಕೇವಲ 6 ಕಿ.ಮೀ.ನಲ್ಲಿ ಮಹಾರಾಷ್ಟ್ರ (Maharashtra) ರಾಜ್ಯ. ಆದರೆ ತಾಲೂಕು (Taluk) ಕೇಂದ್ರವಾಗಿ 5 ವರ್ಷ ಕಳೆದರೂ ಪಟ್ಟಣ ಪಂಚಾಯಿತಿಯಾಗದೇ ಗ್ರಾಮ ಪಂಚಾಯಿತಿಯಾಗಿಯೇ ಉಳಿದಿದೆ ಈ ಹುಲಸೂರ ತಾಲೂಕು.

ಬೀದರ್ ಜಿಲ್ಲೆಯಲ್ಲಿಯೇ ಅಭಿವೃದ್ಧಿ ಕಾಣದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು, 34 ಸದಸ್ಯರನ್ನು ಹೊಂದಿದ ಜಿಲ್ಲೆಯಲ್ಲಿಯೇ ಅತಿದೊಡ್ಡ ಗ್ರಾಮ ಪಂಚಾಯಿತಿ ಹುಲಸೂರ ಆಗಿದ್ದು. ನೂತನ ತಾಲೂಕುಗಳಲ್ಲಿ ಹುಲಸೂರ ಕೂಡಾ ತಾಲೂಕು ಕೇಂದ್ರವಾಗಿ ಐದು ವರ್ಷ ಕಳೆದರು ಪಟ್ಟಣ ಪಂಚಾಯಿತಿ ಕಾಣದೇ ಇರುವುದು ವಿಪರ್ಯಾಸವೇ ಸರಿ.

ಜನಸಂಖ್ಯೆಗೆ ಅನುಗುಣವಾಗಿ ಕಾಲ ಕ್ರಮೇಣ ಮೇಲ್ದರ್ಜೆಗೆ ಏರಬೇಕಾದ (ಹುಲಸೂರ ಗ್ರಾಮ ಪಂಚಾಯಿತಿ) ಸ್ಥಳೀಯ ಆಡಳಿತ ಇನ್ನೂ ಹಾಗೆಯೇ ಉಳಿದಿರುವುದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ.

ಇದನ್ನೂ ಓದಿ: Video Viral : ಕುದಾಪುರದಲ್ಲಿ ಓಡಾಡ್ತು ಚಿರತೆ! ವಿಡಿಯೊ ನಕಲಿ ಎಂದ ಡಿಆರ್‌ಡಿಒ

ಕಾಲಕ್ರಮೇಣ ಜನಸಂಖ್ಯೆಗೆ ಅನುಗುಣವಾಗಿ ಆಡಳಿತಗಳು ಬದಲಾಗಬೇಕೆಂಬ ನಿಯಮಗಳು ಇದ್ದರೂ, ಬದಲಾವಣೆಯಾಗದೇ ಇರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಅರ್ಹತೆ ಇದ್ದರು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರದೆ ಗ್ರಾಮ ಪಂಚಾಯಿತಿ ಆಗಿಯೇ ಉಳಿದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಬರೋಬ್ಬರಿ 758 ಕಿ.ಮೀ ಹಾಗೂ ಬೀದರ್‌ ಜಿಲ್ಲಾ ಕೇಂದ್ರದಿಂದ 69 ಕಿ.ಮೀ ದೂರವಿರುವ ಹುಲಸೂರ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದಿದೆ.
ಹುಲಸೂರ ಗ್ರಾಮ ಪಂಚಾಯಿತಿಯು 34 ಸದಸ್ಯರನ್ನೊಳಗೊಂಡ ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದರೂ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಹೀಗಾಗಿ ಇಲ್ಲಿನ ಬಹುತೇಕ ಹಳ್ಳಿಗಳ ಜನರು ಕುಡಿಯುವ ನೀರು ಹಾಗೂ ಗ್ರಾಮದ ಅಭಿವೃದ್ಧಿ ಆಗಬೇಕೆಂದು ಒಕ್ಕೂರಲಿನ ಕೂಗಾಗಿದೆ. ಅಲ್ಲದೇ ಇದರ ಜತೆಯಲ್ಲಿ ಗ್ರಾಮ ಪಂಚಾಯಿತಿ ಮೇಲ್ದರ್ಜೆಗೇರಿಸಿ ಕೂಡಲೇ ಪಟ್ಟಣ ಪಂಚಾಯಿತಿ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹುಲಸೂರ ಪಟ್ಟಣ ಪಂಚಾಯಿತಿ ಆಗುವ ಕನಸು ಕನಸಾಗಿಯೇ ಉಳಿದಿದ್ದು, ನೂತನ ಸರ್ಕಾರದ ಅವಧಿಯಲ್ಲಿ ಆಗಬಹುದೇ ಎಂಬ ನಿರೀಕ್ಷೆ ಇಲ್ಲಿನ ಜನರದ್ದಾಗಿದೆ.

ಈ ಕುರಿತು ಪೌರಾಡಳಿತ ಸಚಿವ ರಹೀಂ ಖಾನ್‌ ಹಾಗೂ ಸರ್ಕಾರದ ಗಮನಕ್ಕೆ ತರುವ ಕೆಲಸ ಪಟ್ಟಣದ ಯುವಕರು ಮಾಡುತ್ತೇವೆ ಎಂದು ಹುಲಸೂರ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಗುಲಾಂ ಬಡಾಯಿ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: IND vs WI: ವಿಶಿಷ್ಟ ರೀತಿಯ ಕಠಿಣ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರರು; ವಿಡಿಯೊ ವೈರಲ್​

ಇಚ್ಛಾಶಕ್ತಿ ತೋರುವರೇ ಬೀದರ್‌ ಜಿಲ್ಲೆಯ ಇಬ್ಬರು ಸಚಿವರು

ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು, ಅವರ ಅವಧಿಯಲ್ಲೇ ಹುಲಸೂರ ನೂತನ ತಾಲೂಕು ಎಂದು ಘೋಷಣೆ ಮಾಡಿ, ಅವರೇ ಉದ್ಘಾಟನೆ ನೇರವೇರಿಸಿದ್ದರು.

ಹುಲಸೂರ ಪಟ್ಟಣ ಪಂಚಾಯಿತಿ ಮಾಡಬೇಕೆಂದು ಸಾರ್ವಜನಿಕರು ಸಚಿವರಲ್ಲಿ ಮನವಿ ಮಾಡಿದ್ದರು, ಆದರೆ ಈವರೆಗೂ ಹುಲಸೂರ ತಾಲೂಕು ಪಟ್ಟಣ ಪಂಚಾಯಿತಿಯಾಗಬೇಕೆಂಬ ಕನಸು ಕನಸಾಗಿಯೇ ಉಳಿದಿದೆ.

ಇದನ್ನೂ ಓದಿ: Rishabh Pant: ರಿಷಭ್​ ಪಂತ್​ ಕಮ್ ​ಬ್ಯಾಕ್​ಗೆ ವೇದಿಕೆ ಸಜ್ಜು; ಬಿಸಿಸಿಐ ಉನ್ನತ ಅಧಿಕಾರಿಯಿಂದ ಮಾಹಿತಿ

ಪ್ರಸ್ತುತ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಮ್ಮೆ ಪೌರಾಡಳಿತ ಖಾತೆ ಬೀದರ್ ಜಿಲ್ಲೆಯವರಿಗೆ ಒಲಿದಿದ್ದು, ಬೀದರ್ ಶಾಸಕ ರಹೀಂಖಾನ್ ಪೌರಾಡಳಿತ ಸಚಿವರಾಗಿದ್ದು, ಹುಲಸೂರ ಪಪಂ ಆಗುವ ಬೇಡಿಕೆ ಈಡೇರಿಸುವರೇ ಎಂಬುದು ಹುಲಸೂರ ಜನರ ನಿರೀಕ್ಷೆಯಾಗಿದೆ.

Exit mobile version