Site icon Vistara News

Bidar News: ಹುಲಸೂರಿನ ಚುಳಕಿನಾಲಾ ಜಲಾಶಯಕ್ಕೆ ತಹಸೀಲ್ದಾರ್‌ ದಿಢೀರ್‌ ಭೇಟಿ

Hulasur Tahsildar suddenly visited and inspected Chulakinala reservoir

ಹುಲಸೂರ: ತಾಲೂಕಿನ ಚುಳಕಿನಾಲಾ ಜಲಾಶಯ (Chulakinala reservoir) ಭರ್ತಿಯಾದ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಶಿವಾನಂದ ಮೇತ್ರೆ ಗುರುವಾರ ದಿಢೀರನೇ ಭೇಟಿ ನೀಡಿ ಪರಿಶೀಲನೆ (inspected) ನಡೆಸಿದರು.

ಕಳೆದ ನಾಲ್ಕೈದು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ನಿರಂತರ ಮಳೆಗೆ ತಾಲೂಕಿನ ಚುಳಕಿ ಜಲಾಶಯವು ಭರ್ತಿಯಾಗಿದೆ.

ಇದನ್ನೂ ಓದಿ: IND vs WI 1st ODI: ಹೊಸ ಜೆರ್ಸಿಯಲ್ಲಿ ಕಂಗೊಳಿಸಿದ ಟೀಮ್​ ಇಂಡಿಯಾ ಆಟಗಾರರು

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದ ಒಳಹರಿವು ಹೆಚ್ಚಾಗಿರುವುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದರು. ಚುಳಕಿನಾಲಾ ಜಲಾಶಯದಿಂದ ರೈತರ ಹೊಲಗಳಿಗೆ ನೀರು ನುಗ್ಗದಂತೆ ಹಂತ ಹಂತವಾಗಿ ಗೇಟ್ ಮೂಲಕ ನೀರು ಬಿಡಬೇಕು, ಏಕಕಾಲಕ್ಕೆ ಎಲ್ಲ ಗೇಟ್ ಗಳು ತೆರೆಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೆ ಜಲಾಶಯದ ಸುತ್ತಮುತ್ತ ಜನರು ಮತ್ತು ದನ ಕರುಗಳು ಓಡಾಡದಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: Asian Games: ಏಷ್ಯನ್​ ಗೇಮ್ಸ್​ನಲ್ಲಿ​ ಆಡಲು ಭಾರತ ಫುಟ್ಬಾಲ್​ ತಂಡಕ್ಕೆ ಅನುಮತಿ

ಈ ಸಂದರ್ಭದಲ್ಲಿ ಚುಳಕಿನಾಲಾ ಜಲಾಶಯ ಶಾಖಾಧಿಕಾರಿ ಚಂದ್ರಕಾಂತ ಸಕ್ಕರೆಭಾವಿ ಹಾಗೂ ಪೋಲಿಸ್ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

Exit mobile version